newsfirstkannada.com

ಸ್ಮಾರ್ಟ್ ಪೋನ್​ ಬಳಸೋದೆ ಗೊತ್ತಿಲ್ಲ.. ಕೀಪ್ಯಾಡ್​ ಮೊಬೈಲ್​ ಬಳಸ್ತಿದ್ದ ಮಾಜಿ ಕ್ರಿಕೆಟರ್​ಗೆ ಪತ್ನಿಯಿಂದ iPhone ಗಿಫ್ಟ್​!

Share :

27-07-2023

  ಈ ಮಾಜಿ ಆಟಗಾರ iPhone ಅನ್ನು ಹೇಗೆ ಬಳಸ್ತಾರೆ ಗೊತ್ತಾ?

  ಸೋಷಿಯಲ್ ಮೀಡಿಯಾದ ಗಂಧ-ಗಾಳಿನೇ ಗೊತ್ತಿಲ್ಲ ಇವರಿಗೆ

  ಗುಜರಾತ್​ ಟೈಟನ್ಸ್​ ತಂಡದ ಕೋಚ್ ಆಗಿರುವ ಈ ಕ್ರಿಕೆಟರ್..!

ಇದು ಡಿಜಿಟಲ್​ ಯುಗ.. ಜಗತ್ತಿನ ಸುದ್ದಿಗಳು ಕ್ಷಣಾರ್ಧದಲ್ಲೇ ಅಂಗೈಯಲ್ಲಿ ದೊರೆಯುತ್ತವೆ. ಓರ್ವ ಕುರಿಗಾಯಿ ಕೂಡ ಸ್ಮಾರ್ಟ್​ಫೋನ್​ ಬಳಸಬಲ್ಲ. ಆದ್ರೆ ಕೋಟಿ ಕೋಟಿ ದುಡ್ಡಿದ್ರೂ ಟೀಮ್ ಇಂಡಿಯಾದ ಖ್ಯಾತ ಬೌಲರ್ ಈಗಲೂ ನೊಕಿಯಾ ಬೇಸಿಕ್ ಸೆಟ್​ ಅನ್ನೇ ಬಳಸ್ತಾರೆ. ಆ ಪ್ಲೇಯರ್​ ಯಾರು, ಯಾಕಾಗಿ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

ಆಶಿಸ್​ ನೆಹ್ರಾ ಭಾರತೀಯ ಕ್ರಿಕೆಟ್​​ ಕಂಡ ಯಶಸ್ವಿ ಬೌಲರ್​​ಗಳಲ್ಲಿ ಒಬ್ಬರು. ಕರಾರುವಕ್ ದಾಳಿಯಿಂದಲೇ ದಶಕಗಳ ಕಾಲ ಛಾಪು ಮೂಡಿಸಿದ್ದರು. ಅಪಾರ ಮನ್ನಣೆ ಗಳಿಸಿದ ಈ ಬೌಲರ್​​​​ ಈಗಲೂ ನೊಕಿಯಾ ಕೀಪ್ಯಾಡ್​​​ ಮೊಬೈಲ್​​ ಬಳಸ್ತಾರೆ. ಈ ಸುದ್ದಿ ಕೇಳೋಕೆ ನಿಮಗೆ ಅಚ್ಚರಿ ಅನ್ನಿಸಬಹುದು. ಆದ್ರು ಸತ್ಯ. ಎಲ್ಲರೂ ಡಿಜಿಟಲ್​​​​ ಯುಗದಲ್ಲಿ ಮಿಂದೇಳ್ತಿದ್ದಾರೆ. ಆದ್ರೆ ಆಶಿಶ್​​ ನೆಹ್ರಾ ಮಾತ್ರ ಇನ್ನೂ ಓಬೆರಾಯನ ಕಾಲದಲ್ಲಿದ್ದಾರೆ.

ಹೌದು, ಆಶಿಶ್​​ ನೆಹ್ರಾ ಬಳಿ ಈಗಲೂ ನೊಕಿಯಾ E51 ಬೇಸಿಕ್​​ ಮೊಬೈಲ್​ ಸೆಟ್ ಇದೆ. ಸ್ಮಾರ್ಟ್​ಫೋನ್​​ ಬಗ್ಗೆ ಗಾಳಿ ಗಂದಾನೇ ಗೊತ್ತಿಲ್ಲ. ಫೇಸ್​ಬುಕ್​​​​, ಇನ್​ಸ್ಟಾಗ್ರಾಮ್​​ ಹಾಗೂ ಟ್ವೀಟರ್ ಅನ್ನ ನೆಹ್ರಾ ಬಳಸೋದೆ ಇಲ್ಲ. ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿದ್ರೆ, ನೆಹ್ರಾ ಮಾತ್ರ ಎಲ್ಲದರಿಂದ ದೂರವಿದ್ದಾರೆ. ಇವತ್ತಿನ ಮಟ್ಟಿಗೆ ನೆಹ್ರಾ ನಿಜಕ್ಕೂ ಓಲ್ಡ್​ ವರ್ಸನ್​​​​​. ಇಂತಹ ನೆಹ್ರಾಗೆ ಪತ್ನಿ ಇತ್ತೀಚೆಗಷ್ಟೇ ಐಫೋನ್​​​- 7 ಮೊಬೈಲ್​ ಗಿಫ್ಟ್​ ಮಾಡಿದ್ದಾರೆ. ಅದ್ರಲ್ಲಿ ಕಾಲ್ ಡಯಲ್​​​ ಮತ್ತು ರಿಸೀವ್ ಮಾಡೋಕೆ ಮಾತ್ರ ಬರುತ್ತೆ. ಬಿಟ್ರೆ ಏನೂ ಸರಿಯಾಗಿ ಗೊತ್ತಿಲ್ಲ. ಈಗೀಗ ಅಲ್ಪ-ಸ್ವಲ್ಪ ವಾಟ್ಸಾಪ್​​​​​​ ಬಳಸೋಕೆ ಶುರು ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸ್ಮಾರ್ಟ್ ಪೋನ್​ ಬಳಸೋದೆ ಗೊತ್ತಿಲ್ಲ.. ಕೀಪ್ಯಾಡ್​ ಮೊಬೈಲ್​ ಬಳಸ್ತಿದ್ದ ಮಾಜಿ ಕ್ರಿಕೆಟರ್​ಗೆ ಪತ್ನಿಯಿಂದ iPhone ಗಿಫ್ಟ್​!

https://newsfirstlive.com/wp-content/uploads/2023/07/Ashish_nehra_2.jpg

Load More