‘ಸ್ನೇಹಿತನಿಗೆ ಹೇಳದೇ ಇನ್ಯಾರಿಗೆ ಹೇಳೋಕೆ ಸಾಧ್ಯ’
‘ನನ್ನ ಹೆಸರು ಕೆಂಪೇಗೌಡ, ಇತಿಹಾಸ ಗೊತ್ತಾಗಲಿದೆ’
ಕ್ರಿಯೆಗೆ-ಪ್ರತಿಕ್ರಿಯೆ, ಏಟಿಗೆ-ಎದುರೇಟು ಹೇಗಿದೆ ವಾಕ್ಸಮರ?
ದ್ವೇಷದ ರಾಜಕಾರಣ ಮಾಡದೇ ಪ್ರೀತಿಯ ರಾಜಕಾರಣ ಮಾಡುವಂತೆ ಆದಿಚುಂಚನಗಿರಿಯ ನಿರ್ಮಲಾನಂದ ನಾಥ ಶ್ರೀಗಳು ಕಿವಿಮಾತು ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ಹಾಗೂ ಅಶ್ವಥ್ ನಾರಾಯಣ್ ನಿರಾಕರಿಸಿ, ಮಾಧ್ಯಮಗಳ ಮುಂದೆ ಪರಸ್ಪರ ಕೌಂಟರ್ ಮತ್ತು ಪ್ರತಿಕೌಂಟರ್ ಕೊಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಕೌಂಟರ್..!
ನನ್ನ ಫ್ರೆಂಡ್‌ಗೆ ಹೇಳದೇ ಇನ್ಯಾರಿಗೆ ಹೇಳೋಕೆ ಸಾಧ್ಯ. ಚರಿತ್ರೆ ಗೊತ್ತಿಲ್ಲ ಅಂದರೆ ಚರಿತ್ರೆ ಸೃಷ್ಟಿ ಮಾಡೋಕೆ ಸಾಧ್ಯವಿಲ್ಲ. ಇತಿಹಾಸ ಗೊತ್ತಾಗಬೇಕಾಲ್ವಾ? ನಾನು 6ನೇ ಕ್ಲಾಸ್‌ಗೆ ಬಂದು ಎನ್‌ಪಿಎಸ್‌ನಲ್ಲಿ ಓದಿದ್ದೇನೆ. ಸುಮ್ಮನೇ ಬಂದಿದ್ದೀನಾ? ಕೆಲವೊಂದು ಸಂದರ್ಭಗಳಲ್ಲಿ ಗೊತ್ತಿಲ್ಲದೇ ಇರೋದನ್ನ ನೆನಪಿಸಬೇಕಾಗುತ್ತೆ ಎಂದು ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಶ್ವಥ್ ನಾರಾಯಣ್.. ನಾನು ಡಿ.ಕೆ.ಶಿವಕುಮಾರ್ರನ್ನು ಪ್ರಶ್ನೆ ಮಾಡೋಕೆ ಕಾರಣ ಇದೆ. ನನಗೂ ರಾಮನಗರಕ್ಕೆ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದರು. ಯಾವ ಸರ್ಕಾರ ಕೂಡ ಕೊಡದಷ್ಟು ಯೋಜನೆಗಳನ್ನು ನಾವು ರಾಮನಗರಕ್ಕೆ ಕೊಟ್ಟಿದ್ದೇವೆ. ರಾಮನಗರವನ್ನು ಅಭಿವೃದ್ಧಿ ಮಾಡಿದ್ದೇವೆ. ಕೆಂಪಾಬುದಿಯಲ್ಲಿ ಇವರು ಘೋಷಣೆ ಮಾತ್ರ ಮಾಡಿದ್ರು ಆದ್ರೆ ಅಭಿವೃದ್ಧಿ ಮಾಡಿದ್ದೇವೆ ಎಂದರು.
ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹೆಸರು ಕೆಂಪೇಗೌಡ, ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸ ಗೊತ್ತಾಗಲಿದೆ. ನನ್ನ ಕೊಡುಗೆ ಏನು ಎಂದು ಕೆಲಸ ಮಾತನಾಡುತ್ತದೆ. ನಾನು ಯಾವುದೇ ವ್ಯಕ್ತಿಗತವಾಗಿ ಮಾತನಾಡಿಲ್ಲ. ನಾನು ದ್ವೇಷ ಮಾತನಾಡೋಕೆ ಬಂದಿಲ್ಲ. ಯಾವುದೇ ವೈಮನಸ್ಸು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ