ಚೆನ್ನೈ ಮೈದಾನದಲ್ಲಿ ಅಪ್ಪ, ಮಗನ ಬಾಂಧವ್ಯ ಹೇಗಿತ್ತು ಗೊತ್ತಾ?
ಸೆಂಚುರಿ ಮಾತ್ರವಲ್ಲ, ಈ ಸಾಧನೆಯನ್ನ ಮಾಡಿದ್ದಾರೆ R ಅಶ್ವಿನ್
ತಂದೆ ಮುಂದೆ ರವಿಚಂದ್ರನ್ ಅಶ್ವಿನ್ ಭಾರೀ ಸಾಧನೆಗಳೇನು?
ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ಆರ್. ಅಶ್ವಿನ್ ಅವರು ಅಮೋಘ ಪ್ರದರ್ಶನ ನೀಡಿದ್ದಾರೆ. ಅಶ್ವಿನ್ ಅವರ ಅದ್ಭುತವಾದ ಬ್ಯಾಟಿಂಗ್ ಹಾಗೂ ಬೌಲಿಂಗ್ನಿಂದ ಟೀಮ್ ಇಂಡಿಯಾ 280 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಎಲ್ಲದರ ಮಧ್ಯೆ ಅಶ್ವಿನ್ಗೆ ಈ ಪಂದ್ಯ ಭಾವನಾತ್ಮಕವಾಗಿ ಕೂಡಿತ್ತು ಎನ್ನುವುದು ಇಲ್ಲಿ ನೆನಪಿಸಿಕೊಳ್ಳಬೇಕು.
ಆರ್.ಅಶ್ವಿನ್ ಅವರ ತವರೂರಾದ ಚೆನ್ನೈನಲ್ಲೇ ಟೆಸ್ಟ್ ಪಂದ್ಯ ನಡೆದಿದ್ದರಿಂದ ಅವರ ಫ್ಯಾಮಿಲಿ ಪಂದ್ಯ ವೀಕ್ಷಣೆಗೆ ಸ್ಟೇಡಿಯಂಗೆ ಆಗಮಿಸಿತ್ತು. ಮ್ಯಾಚ್ ನೋಡಲು ತಂದೆ ಸ್ಟೇಡಿಯಂಗೆ ಬಂದಾಗ ಮಗ ಸೆಂಚುರಿ ಜೊತೆಗೆ 6 ವಿಕೆಟ್ ಪಡೆದು ಪಂದ್ಯದ ಗೆಲುವಿಗೆ ಮುಖ್ಯ ಕಾರಣವಾಗಿದ್ದಾರೆ ಎಂದರೆ ಆ ಸಂತಸ, ಆ ಭಾವನಾತ್ಮಕತೆ ಇನ್ನು ಎಲ್ಲಿಯು ಇರುವುದಿಲ್ಲ. ಇಂತಹ ಸಂದರ್ಭಕ್ಕೆ ಸಾಕ್ಷಿ ಆಗಿದ್ದು ಆರ್.ಅಶ್ವಿನ್ ಹಾಗೂ ಅವರ ತಂದೆ ರವಿಚಂದ್ರನ್. ಅಪ್ಪನ ಮುಂದೆ ಮಗ ಶತಕ ಸಿಡಿಸುವ ಅದೃಷ್ಟ ಕೋಟಿಗೊಬ್ಬ ಆಟಗಾರನಿಗೆ ಸಿಗಬಹುದು ಎಂದು ಹೇಳಬಹುದು.
ಇದನ್ನೂ ಓದಿ: ಬಾಂಗ್ಲಾಗೆ ಚಮಕ್ ಕೊಟ್ಟ R ಅಶ್ವಿನ್, ಜಡೇಜಾ.. ಟೀಮ್ ಇಂಡಿಯಾಗೆ ಭರ್ಜರಿ ಗೆಲುವು
ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಆರ್ ಅಶ್ವಿನ್ ಅವರು ತಂದೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಇಬ್ಬರ ನಡುವೆ ಬಾಂಧವ್ಯ ನೋಡುಗರನ್ನು ಬೆರಗುಗೊಳಿಸಿತು. ಈ ಪಂದ್ಯದಲ್ಲಿ ಅಶ್ವಿನ್ ಮ್ಯಾನ್ ಆಫ್ ದೀ ಮ್ಯಾಚ್ ಪ್ರಶಸ್ತಿ ಕೂಡ ಪಡೆದುಕೊಂಡರು. ಅಲ್ಲದೇ ಅಶ್ವಿನ್ ಅವರ ಹೆಂಡತಿ ಹಾಗೂ ಮಕ್ಕಳು ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು. ಪಂದ್ಯ ಗೆದ್ದಾಗ ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಈ ಪಂದ್ಯದಲ್ಲಿ ಆರ್ ಅಶ್ವಿನ್ ಅವರು ಮೊದಲ ಇನ್ನಿಂಗ್ಸ್ನಲ್ಲಿ 133 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಮೇತ 113 ರನ್ಗಳನ್ನು ಗಳಿಸಿದ್ದರು. ಆದರೆ ಬೌಲಿಂಗ್ನಲ್ಲಿ ಯಾವುದೇ ವಿಕೆಟ್ ಪಡೆಯಲಾಗಲಿಲ್ಲ. ಇನ್ನು 2ನೇ ಇನ್ನಿಂಗ್ಸ್ನಲ್ಲಿ ಭಾರತ ಡಿಕ್ಲೇರ್ ಮಾಡಿಕೊಂಡಿದ್ದರಿಂದ ಅಶ್ವಿನ್ಗೆ ಬ್ಯಾಟಿಂಗ್ ಸಿಗಲಿಲ್ಲ. ಆದರೆ ಬೌಲಿಂಗ್ನಲ್ಲಿ ಪರಾಕ್ರಮ ಮೆರೆದ ಚೆನ್ನೈ ಎಕ್ಸ್ಪ್ರೆಸ್ 21 ಓವರ್ಗಳಲ್ಲಿ 88 ರನ್ ನೀಡಿ 6 ವಿಕೆಟ್ಗಳನ್ನು ಕಿತ್ತು ಸಾಧನೆ ಮಾಡಿದರು.
ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
ಆರ್ ಅಶ್ವಿನ್ ಸಾಧನೆ ಏನೇನು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ