newsfirstkannada.com

ನಾಳಿನ ಪಂದ್ಯಕ್ಕೆ ಅಶ್ವಿನ್​ ಬೇಕೇಬೇಕು.. ನ್ಯೂಜಿಲೆಂಡ್ ವಿಕೆಟ್​ ಉರುಳಿಸಲು ಸ್ಪಿನ್​​ ಮಾಂತ್ರಿಕನಿಗೆ ಮಣೆಹಾಕುತ್ತಾ ಮ್ಯಾನೇಜ್​ಮೆಂಟ್​

Share :

14-11-2023

  ಲೀಗ್​​​ ಒಕೆ..ಸೆಮೀಸ್​​ಗೆ ಅಶ್ವಿನ್ ಬೇಕೇಬೇಕು..!

  ನ್ಯೂಜಿಲೆಂಡ್​​​ನ​​ ಮಣಿಸಿ ಫೈನಲ್​​​​​ ಪ್ರವೇಶಿಸಬೇಕಾ..?

  ಅಶ್ಚಿನ್ ಅನುಭವ ನಿರ್ಣಾಯಕ ಸೆಮೀಸ್​ ಪಂದ್ಯಕ್ಕೆ ಅಗತ್ಯ

ಟೀಮ್ ಇಂಡಿಯಾ ಒನ್​ಡೇ ವಿಶ್ವಕಪ್​​​ ಕಿರೀಟಕ್ಕೆ ಮುತ್ತಿಡಲು ಉಳಿದಿರೋದು ಇನ್ನೆರಡೇ ಹೆಜ್ಜೆ..! ಆದರೆ, ಮೊದಲ ಹೆಜ್ಜೆಯಲ್ಲೇ ಅಗ್ನಿಪರೀಕ್ಷೆ ಎದುರಾಗಿದೆ. ಸೆಮಿಫೈನಲ್​ ಬ್ಯಾಟಲ್​​ನಲ್ಲಿ ಸೈಲೆಂಟ್ ಕಿಲ್ಲರ್​ ನ್ಯೂಜಿಲೆಂಡ್​ ತಂಡವನ್ನ ಎದುರಿಸಬೇಕಿದೆ. ಬಲಾಡ್ಯ ಕಿವೀಸ್​ ತಂಡಕ್ಕೆ ಚೆಕ್​​ಮೇಟ್​​ ಕೊಡಬೇಕಾದ್ರೆ ಸ್ಪಿನ್ ಮಾಂತ್ರಿಕ ಆರ್​​​​​​ ಅಶ್ವಿನ್​​ ವಾಂಖೆಡೆಯಲ್ಲಿ ಆಡಲೇಬೇಕು. ಅಷ್ಟಕ್ಕೂ ಕೇರಂ ಸ್ಪೆಷಲಿಸ್ಟ್​​​ಗೆ​​​​​​ ಯಾಕೆ ಚಾನ್ಸ್ ಕೊಡಬೇಕು ? ಆಗೋ ಲಾಭವೇನು? ಇಲ್ಲಿದೆ ಉತ್ತರ​​​​.

ಏಕದಿನ ವಿಶ್ವಕಪ್​​​ನ ಲೀಗ್​​ ಪಂದ್ಯಗಳಿಗೆ ತೆರೆ ಬಿದ್ದಿದೆ. ಇನ್ನೇನಿದ್ರೂ ನಾಕೌಟ್​​​ ಪಂದ್ಯಗಳದ್ದೇ ಸದ್ದು. ಎರಡು ದಿನ ವಿಶ್ರಾಂತಿ ಬಳಿಕ ಸೆಮಿಫೈನಲ್​​ ಪಂದ್ಯಗಳು ಆರಂಭಗೊಳ್ಳಲಿವೆ. ನಾಳೆ ನಡೆಯುವ ಮೊದಲ ಸೆಮಿಫೈನಲ್​ ಕಾಳಗದಲ್ಲಿ ಕ್ರಿಕೆಟ್​​ನ ಮದಗಜಗಳಾದ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್​​​ ತಂಡಗಳು ತೊಡೆ ತಟ್ಟಲಿವೆ. ಒಂದೂ ಸೋಲೇ ಅರಿಯದ ಭಾರತ, ವಾಂಖೆಡೆಯಲ್ಲಿ ಬ್ಲ್ಯಾಕ್​​​​ಕ್ಯಾಪ್ಸ್​​​​​​​​ ಸೋಲಿಸಿ ಫೈನಲ್​​ಗೆ ಎಂಟ್ರಿಕೊಡುವ ತವಕದಲ್ಲಿದೆ.

ಹಾಗಾದ್ರೆ ಆಫ್​ ಸ್ಪಿನ್ನರ್​​ ಅಶ್ವಿನ್​​ಗೆ ಚಾನ್ಸ್ ಕೊಡಿ

ಭಾರತ ತಂಡ ಆಲ್​ರೆಡಿ ಲೀಗ್​​ನಲ್ಲಿ ಬ್ಲ್ಯಾಕ್​ಕ್ಯಾಪ್ಸ್​​​ಗೆ ಒಮ್ಮೆ ಸೋಲಿನ ರುಚಿ ತೋರಿಸಿದೆ. ಇದೇ ಆತ್ಮವಿಶ್ವಾಸದಲ್ಲಿ ನಾಳೆ ಕಿವೀಸ್​​ ತಂಡವನ್ನ ಬಗ್ಗುಬಡಿಯುವ ಹುಮ್ಮಸ್ಸಿನಲ್ಲಿದೆ. ಆದ್ರೆ ಅದು ಅಂದುಕೊಂಡಷ್ಟು ಸುಲಭವಿಲ್ಲ. ಯಾಕಂದ್ರೆ ಕಿವೀಸ್​​​ ಮೋಸ್ಟ್​​ ಡೇಂಜರಸ್​​​ ತಂಡ. ಇಂತಹ ಬಲಿಷ್ಠ ತಂಡಕ್ಕೆ ಶಾಕ್​ ಕೊಡಲು ಇರೋದೊಂದೇ ದಾರಿ. ಆಫ್ ಸ್ಪಿನ್ನರ್​​​​ ಅಶ್ವಿನ್​ರನ್ನ ಸೆಮಿಫೈನಲ್​​​​​​​​ನಲ್ಲಿ ಆಡಿಸೋದು.

ಹೌದು, ವಾಂಖೆಡೆಯಲ್ಲಿ ಕಿವೀಸ್​ ವಿರುದ್ಧ ಸೆಮಿಫೈನಲ್​​​​​​​​​​​​​​​​​​​​​​​ ಬ್ಯಾಟಲ್​ನಲ್ಲಿ ಭಾರತ ಪರ ಯಾರು ಆಡ್ತಾರೋ, ಬಿಡ್ತಾರೋ ಗೊತ್ತಿಲ್ಲ. ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಕೇರಂ ಸ್ಪೆಷಲಿಸ್ಟ್​​​​ ಅಶ್ವಿನ್​​​​ರನ್ನ ಆಡಿಸಲೇಬೇಕಿದೆ. ಈ ವಿಶ್ವಕಪ್​ನಲ್ಲಿ ಅಶ್ವಿನ್​​​​ ಆಸ್ಟ್ರೇಲಿಯಾ ವಿರುದ್ಧ ಆಡಿದ್ದು ಬಿಟ್ರೆ ಉಳಿದ 8 ಪಂದ್ಯಗಳಲ್ಲಿ ಬೆಂಚ್​​ಗೆ ಸೀಮಿತವಾಗಿದ್ದಾರೆ. ವಿಕೆಟ್ ಟೇಕರ್​ ಬೆಂಚ್​ ಕಾದಿದ್ದು ಸಾಕು, ನಾಳೆ ನಡೆಯುವ ಹೈವೋಲ್ಟೇಜ್​​​​​​ ಮ್ಯಾಚ್​​ನಲ್ಲಿ ಟೀಮ್ ಮ್ಯಾನೇಜ್​​ಮೆಂಟ್​​​​​ ಅಶ್ವಿನ್​​ಗೆ ಮಣೆ ಹಾಕಲೇಬೇಕಿದೆ. ಅಷ್ಟಕ್ಕೂ ಕಿವೀಸ್​ ವಿರುದ್ಧ ಅಶ್ವಿನ್​​​​​ ಯಾಕೆ ಆಡಬೇಕು ಗೊತ್ತಾ?

 1. ಕಿವೀಸ್​ ಬ್ಯಾಟರ್ಸ್​ ಸ್ಪಿನ್ನರ್ಸ್​ ವಿರುದ್ಧ ಪರದಾಟ
 2. ಮುಂಬೈನ ವಾಂಖೆಡೆ ಪಿಚ್​ ಸ್ಲೋ ಆಗಿ ವರ್ತಿಸುತ್ತೆ
 3. ಅಶ್ವಿನ್​ ಬೌಲಿಂಗ್​​ನಲ್ಲಿ ವೇರಿಯೇಷನ್​ ಮಾಡುವ ಚತುರ
 4. ನ್ಯೂಜಿಲೆಂಡ್​ ತಂಡದಲ್ಲಿ 6 ಮಂದಿ ಎಡಗೈ ಬ್ಯಾಟರ್ಸ್​
 5. ಅಶ್ವಿನ್​ ಬತ್ತಳಿಕೆಯಲ್ಲಿದೆ ವಿಕೆಟ್​​ ಕಬಳಿಸುವ ಅಸ್ತ್ರಗಳು
 6. ವಾಂಖೆಡೆ ಪಿಚ್​​ ಅಶ್ವಿನ್​ಗೆ ಸಖತ್ ಸೂಟ್ ಆಗುತ್ತೆ
 7. ಇವರ ಅನುಭವ ನಿರ್ಣಾಯಕ ಸೆಮೀಸ್​ ಪಂದ್ಯಕ್ಕೆ ಅಗತ್ಯ

ನ್ಯೂಜಿಲೆಂಡ್​​​​​​​​​​ ಬ್ಯಾಟ್ಸ್​​ಮನ್​​ಗಳು ಸ್ಪಿನ್ನರ್ಸ್​ ವಿರುದ್ಧ ಪರದಾಟ ನಡೆಸುತ್ತಾರೆ. ಇದರ ಲಾಭವನ್ನ ಅಶ್ವಿನ್ ಪಡೆಯಬಹುದು. ಮುಂಬೈನ ವಾಂಖೆಡೆ ಪಿಚ್​​​​​​​ ಸ್ಲೋ ಆಗಿ ಆಗಿರುತ್ತೆ. ಇದು ಕೂಡ ಅಶ್ವಿನ್​​ಗೆ ವರದಾನ. ಎಲ್ಲಕ್ಕಿಂತ ಹೆಚ್ಚಾಗಿ ಅಶ್ವಿನ್​ಗೆ ಬೌಲಿಂಗ್​​ನಲ್ಲಿ ವೇರಿಯೇಶನ್​ ಮಾಡುವ ಕಲೆ ಇದೆ. ಕಿವೀಸ್​ ತಂಡದಲ್ಲಿ ಬರೋಬ್ಬರಿ 6 ಮಂದಿ ಲೆಫ್ಟ್​​​ ಹ್ಯಾಂಡೆಡ್​​ ಬ್ಯಾಟ್ಸ್​​​ಮನ್​​​​​​ಗಳಿದ್ದು, ಅಶ್ವಿನ್​ ಬತ್ತಳಿಕೆಯಲ್ಲಿ ಇವರ ವಿಕೆಟ್​​ ಕಬಳಿಸುವ ಅಸ್ತ್ರಗಳಿವೆ. ಆಫ್ ಸ್ಪಿನ್ನರ್ ಆಗಿರೋ ಅಶ್ವಿನ್​ಗೆ ವಾಂಖೆಡೆ ಪಿಚ್​ ಸಖತ್ ಸೂಟ್​ ಆಗುವುದಲ್ಲದೇ, ಇವರ ಅನುಭವ ಸೆಮಿಫೈನಲ್​​​​​​ನಂತ ಬಿಗ್​ ಸ್ಟೇಜ್​​ನಲ್ಲಿ ತಂಡಕ್ಕೆ ನೆರವಾಗಲಿದೆ.

ಇನ್ನು, ಇದಿಷ್ಟೇ ಅಲ್ಲ, ನ್ಯೂಜಿಲೆಂಡ್​ ವಿರುದ್ಧ ಅಶ್ವಿನ್​​​​​​​​ರ ಟ್ರ್ಯಾಕ್​ ರೆಕಾರ್ಡ್​ ಕೂಡ ಉತ್ತಮವಾಗಿದೆ.ಆಡಿದ್ದು ಕೆಲವೇ ಪಂದ್ಯವಾದ್ರು ಬ್ಲ್ಯಾಕ್​​​​ಕ್ಯಾಪ್ಸ್​ ಪಡೆಯನ್ನ ಇನ್ನಿಲ್ಲದಂತೆ ಕಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಅಶ್ವಿನ್​ ಸಾಧನೆ 

ಇನ್ನಿಂಗ್ಸ್​ – 10
ವಿಕೆಟ್​​ – 12
ಬೆಸ್ಟ್​​​​​​ – 3/24

ನ್ಯೂಜಿಲೆಂಡ್​ ವಿರುದ್ಧ 10 ಇನ್ನಿಂಗ್ಸ್ ಆಡಿರೋ ಆರ್​ ಅಶ್ವಿನ್​ 12 ವಿಕೆಟ್​ ಕಬಳಿಸಿದ್ದಾರೆ. 34 ರನ್​ಗೆ 3 ವಿಕೆಟ್ ಪಡೆದಿರೋದು ಬೆಸ್ಟ್​ ಅಚೀವ್​ಮೆಂಟ್ ಆಗಿದೆ.

ಒಟ್ಟಿನಲ್ಲಿ, ಅಂಕಿ-ಅಂಶಗಳು ಹಾಗೂ ಅಡ್ವಾಂಟೇಜ್​ಗಳನ್ನ ಗಮನಿಸಿದ್ರೆ, ಆರ್​​​​​​.ಅಶ್ವಿನ್​ ಅವಶ್ಯಕತೆ ತಂಡಕ್ಕಿದೆ ಅನ್ನೋದು ಸ್ವಷ್ಟವಾಗ್ತಿದೆ. ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್​​ಕೋಚ್ ರಾಹುಲ್​​​​​ ದ್ರಾವಿಡ್ ವಿನ್ನಿಂಗ್​ ಕಾಂಬಿನೇಷನ್​​ನ ಡಿಸ್ವರ್ಬ್​ ಮಾಡ್ತಾರಾ.? ಚಾನ್ಸ್​ ಕೊಟ್ರೂ,​​​​ ಯಾರನ್ನ ಕೂರಿಸಿ ಸ್ಪಿನ್​ ಮೆಜಿಶಿಯನ್​ಗೆ ಮಣೆ ಹಾಕ್ತಾರೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳಿನ ಪಂದ್ಯಕ್ಕೆ ಅಶ್ವಿನ್​ ಬೇಕೇಬೇಕು.. ನ್ಯೂಜಿಲೆಂಡ್ ವಿಕೆಟ್​ ಉರುಳಿಸಲು ಸ್ಪಿನ್​​ ಮಾಂತ್ರಿಕನಿಗೆ ಮಣೆಹಾಕುತ್ತಾ ಮ್ಯಾನೇಜ್​ಮೆಂಟ್​

https://newsfirstlive.com/wp-content/uploads/2023/09/ASHWIN_ROHIT.jpg

Load More