newsfirstkannada.com

ಅನಿಲ್ ಕುಂಬ್ಳೆ-ಹರ್ಭಜನ್ ಸಿಂಗ್​ರನ್ನು ಓವರ್ ಟೇಕ್ ಮಾಡಿದ ಟೀಂ ಇಂಡಿಯಾದ ಈ ಸೂಪರ್ ಜೋಡಿ.. ಯಾರವರು?

Share :

Published July 24, 2023 at 10:15am

Update July 24, 2023 at 10:17am

    ಟೀಮ್ ಇಂಡಿಯಾದ ಡೆಡ್ಲಿ ಬೌಲಿಂಗ್ ಜೋಡಿ..!

    ಇವರೇ ಟೀಮ್ ಇಂಡಿಯಾದ ಸಕ್ಸಸ್​ ಸಿಕ್ರೇಟ್​​​

    2012ರಿಂದ ಕಮಾಲ್ ಮಾಡ್ತಿದ್ದಾರೆ ಈ ಕಿಲಾಡಿಗಳು

ಇಷ್ಟು ದಿನ.. ಟೀಮ್ ಇಂಡಿಯಾದ ಸಕ್ಸಸ್​ಫುಲ್​ ಸ್ಪಿನ್​ ಜೋಡಿ ಯಾರು ಎಂಬ ಪ್ರಶ್ನೆ ಎದುರಾದ್ರೆ ಅಭಿಮಾನಿಗಳಿಗೆ ಥಟ್ ಅಂತ ಕುಂಬ್ಳೆ ಆ್ಯಂಡ್ ಹರ್ಭಜನ್ ನೆನಪಿಗೆ ಬರ್ತಿದ್ರು. ಆದ್ರೀಗ, ಫ್ಯಾನ್ಸ್​ ಅಶ್ವಿನ್​ ಮತ್ತು ಜಡೇಜಾ ಹೆಸರು ಹೇಳ್ತಿದ್ದಾರೆ. ಸ್ಪಿನ್​​ ಮೋಡಿ ಮಾಡ್ತಿರೋ ಆ್ಯಷ್​​ & ಜಡ್ಡು ಜೋಡಿ, ಕುಂಬ್ಳೆ ಮತ್ತು ಹರ್ಭಜನ್​ರನ್ನ​ ಓವರ್​ ಟೇಕ್​ ಮಾಡಿದ್ದಾರೆ.

ಟೀಮ್ ಇಂಡಿಯಾದ ಯಶಸ್ಸಿನ ಗುಟ್ಟು ಸ್ಪಿನ್​​.. ಬಹು ವರ್ಷಗಳಿಂದ ಟೀಮ್ ಇಂಡಿಯಾ ಬಲವೇ ಸ್ಪಿನ್ನರ್​ಗಳು. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಕೆಲವೇ ಕೆಲ ಬೌಲಿಂಗ್ ಕಾಂಬಿನೇಷನ್​. ಇಂದಿಗೂ ನೆನಪಲ್ಲಿ ಉಳಿಯುತ್ತದೆ. ಈ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲೋ ಜೋಡಿಯೇ ದಿಗ್ಗಜ ಅನಿಲ್ ಕುಂಬ್ಳೆ ಆ್ಯಂಡ್ ಹರ್ಭಜ್ ಸಿಂಗ್. ಆದ್ರೀಗ ಇವರನ್ನೇ ಮೀರಿಸಿದ ಜೋಡೆತ್ತುಗಳು ಟೀಮ್ ಇಂಡಿಯಾದಲ್ಲಿದ್ದಾರೆ. ಆ ಸ್ಪಿನ್ ಟ್ವಿನ್ಸ್ ಬೇಱರೂ ಅಲ್ಲ. ಅಶ್ವಿನ್ ಅಂಡ್ ಜಡೇಜಾ.

ಅಶ್ವಿನ್ ಆ್ಯಂಡ್ ರವೀಂದ್ರ ಜಡೇಜಾ.. ವಿಶ್ವ ಕ್ರಿಕೆಟ್​ನ ಶ್ರೇಷ್ಠ ಸ್ಪಿನ್ನರ್​ಗಳು, ಇವರ ಮ್ಯಾಜಿಕ್ ಆಫ್ ಸ್ಪಿನ್​​, ಒನ್​ ಆಫ್ ದಿ ರೇರೆಸ್ಟ್​ ಸ್ಪಿನ್​​ ಕಾಂಬಿನೇಷನ್​. ಕೆಲವು ವರ್ಷಗಳಿಂದ ಟೀಮ್ ಇಂಡಿಯಾದ ಸಕ್ಸಸ್​ನ ಭಾಗ ಇವರಿಬ್ಬರೇ ಅನ್ನೋದು ಓಪನ್ ಸಿಕ್ರೇಟ್​ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಆದ್ರೀಗ ಈ ಜೋಡೆತ್ತು ಟೀಮ್ ಇಂಡಿಯಾ ಇತಿಹಾಸದಲ್ಲೇ ಮೋಸ್ಟ್​ ಡೆಡ್ಲಿ ಕಾಂಬಿನೇಷನ್ ಆಗಿ ಮಾರ್ಪಟ್ಟಿದೆ.

2012ರಿಂದ ಟೀಮ್ ಇಂಡಿಯಾದಲ್ಲಿ ಇವರದ್ದೇ ಹವಾ

2012ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ನಾಗ್ಪುರ ಟೆಸ್ಟ್​ನಲ್ಲಿ ಜೊತೆಯಾದ ಈ ಇಬ್ಬರು, ಅಂದು ನಿಜಕ್ಕೂ 11 ವರ್ಷಗಳ ಕಾಲ ಜೊತೆಯಾಗಿ ಆಡ್ತಾರೆ ಅನ್ನೋ ನಿರೀಕ್ಷೆಯೇ ಇರಲಿಲ್ಲ. ಡ್ರಾನಲ್ಲಿ ಮುಕ್ತಾಯವಾಗಿದ್ದ ಆ ಟೆಸ್ಟ್​ನಲ್ಲಿ ಅಶ್ವಿನ್, ಬ್ಯಾಟಿಂಗ್​ನಲ್ಲಿ ಝಲಕ್ ತೋರಿಸಿದ್ರೆ. ಜಡೇಜಾ ಬೌಲಿಂಗ್​ನಲ್ಲಿ ಜಾದೂ ಮಾಡಿದ್ದರು. ಅಂದು ಜೊತೆಯಾದ ಈ ಲೆಫ್ಟಿ, ರೈಟಿ ಕಾಂಬಿನೇಷನ್, ಇಂದಿನ ತನಕ ಮುಂದುವರಿದಿದೆ. ಸ್ವದೇಶದಲ್ಲೇ ಅಲ್ಲ. ಓವರ್​ ಸೀಸ್​ನಲ್ಲೂ ಟೀಮ್ ಇಂಡಿಯಾ ಸಕ್ಸಸ್​​ನ ಬಹುಪಾಲು ಕ್ರೆಡಿಟ್ ಇವರಿಗೆ ಸಲ್ಲೋದ್ರಲ್ಲಿ ಎರಡು ಮಾತಿಲ್ಲ.

ಕುಂಬ್ಳೆ-ಭಜ್ಜಿ ಸೂಪರ್ ದಾಖಲೆ ​​ಉಡೀಸ್​ಗೆ ಬೇಕು 2 ವಿಕೆಟ್

ಟೀಮ್ ಇಂಡಿಯಾ ಪರ ಜಂಟಿಯಾಗಿ 501 ವಿಕೆಟ್ ಉರುಳಿಸಿದ ಹೆಗ್ಗಳಿಕೆ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್​ ಸಿಂಗ್​ಗೆ ಸೇರುತ್ತೆ. ಈ ದಾಖಲೆಯನ್ನು ಬ್ರೇಕ್​ ಮಾಡಲು ಅಶ್ವಿನ್​ ಜಡೇಜಾ ಸಜ್ಜಾಗಿದ್ದಾರೆ. ಟ್ರಿನಿಡಾಡ್​ ಟೆಸ್ಟ್​ನ ಇಂದಿನ ದಿನದಾಟದಲ್ಲಿ ಜೊತೆಯಾಗಿ 2 ವಿಕೆಟ್​ ಉರುಳಿಸಿದ್ರೆ, ಅಶ್ವಿನ್​ ಜಡೇಜಾ ದಾಖಲೆ ಬರೆಯಲಿದ್ದಾರೆ.

ಮೋಸ್ಟ್​ ವಿಕೆಟ್ ಟೇಕಿಂಗ್ ಪೇರ್

54 ಪಂದ್ಯಗಳಲ್ಲಿ ಚೆಂಡು ಹಂಚಿಕೊಂಡಿದ್ದ ಅನಿಲ್ ಕುಂಬ್ಳೆ ಆ್ಯಂಡ್ ಹರ್ಭಜನ್ ಜೋಡಿ, ಪ್ರತಿ ಪಂದ್ಯಕ್ಕೆ 9.3 ವಿಕೆಟ್​ನಂತೆ 501 ವಿಕೆಟ್ ಉರುಳಿಸಿದ್ರೆ. 48 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರೋ ಅಶ್ವಿನ್ ಜಡೇಜಾ ಜೋಡಿ, 10.3 ವಿಕೆಟ್​ನಂತೆ 500 ವಿಕೆಟ್ ಉರುಳಿಸಿದ್ದಾರೆ. ಈ ಬಳಿಕ ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಉರುಳಿಸಿದ ಖ್ಯಾತಿ ಜಹೀರ್​-ಹರ್ಭಜನ್, ಅಶ್ವಿನ್, ಉಮೇಶ್ ಯಾದವ್ ಹಾಗೂ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್​ಗೆ ಸೇರುತ್ತೆ. ಆದ್ರೆ ಇವರನ್ನೆಲ್ಲ ಬೀಟ್ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದ್ದಾರೆ.

ಅನಿಲ್ ಕುಂಬ್ಳೆ-ಹರ್ಭಜನ್ ಜೋಡಿ ಬಳಿಕ ಅಶ್ವಿನ್ ಹಾಗೂ ಜಡೇಜಾ, ದಿಗ್ಗಜರ ಅನುಪಸ್ಥಿತಿ ಕಾಡದಂತೆ ನೋಡಿಕೊಂಡಿದ್ದಾರೆ. ಟೀಮ್ ಇಂಡಿಯಾದ ಮೋಸ್ಟ್​ ಸಕ್ಸಸ್​​ಫುಲ್ ಟ್ವಿನ್ಸ್ ಆಗಿ ಮಿಂಚುತ್ತಿರೋದಂತು ಸುಳ್ಳಲ್ಲ. ಸದ್ಯ ಟೀಮ್ ಇಂಡಿಯಾದ ಸಕ್ಸಸ್​ ಫುಲ್ ಜೋಡಿಯನ್ನು ಮೀರಿಸಿದ ಈ ಜೋಡಿ, ವಿಶ್ವ ಕ್ರಿಕೆಟ್​ನ ಮೋಸ್ಟ್​ ಡೆಡ್ಲಿ ಕಾಂಬಿನೇಷನ್​ ಜೇಮ್ಸ್ ಆ್ಯಂಡರ್ಸನ್-ಸ್ಟುವರ್ಟ್ ಬ್ರಾಡ್ ಹಾಗೂ ಆಸಿಸ್​ನ ಶೇನ್ ವಾರ್ನ್-ಗ್ಲೆನ್ ಮೆಗ್ರಾತ್​​ರ 1000 ವಿಕೆಟ್ ದಾಖಲೆಯನ್ನೂ ಬ್ರೇಕ್ ಮಾಡ್ಲಿ ಅನ್ನೋದೇ ಕ್ರಿಕೆಟ್ ಅಭಿಮಾನಿಗಳ ಆಶಯ

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅನಿಲ್ ಕುಂಬ್ಳೆ-ಹರ್ಭಜನ್ ಸಿಂಗ್​ರನ್ನು ಓವರ್ ಟೇಕ್ ಮಾಡಿದ ಟೀಂ ಇಂಡಿಯಾದ ಈ ಸೂಪರ್ ಜೋಡಿ.. ಯಾರವರು?

https://newsfirstlive.com/wp-content/uploads/2023/07/ANIL_KUMBLE.jpg

Load More