newsfirstkannada.com

ಕ್ಯಾನ್ಸರ್​ನಿಂದ ಬಳಲುತ್ತಿರುವ ಅಪ್ಪು ಅಭಿಮಾನಿಗೆ ಆಸರೆಯಾದ ಅಶ್ವಿನಿ ಪುನೀತ್ ರಾಜ್​​ಕುಮಾರ್

Share :

07-11-2023

    ಅಪ್ಪು ಫೋಟೋವನ್ನು ನೋಡಿ ಪುಟ್ಟ ಕಂದಮ್ಮ ಮುಖದಲ್ಲಿ ನಗು

    ಅಪ್ಪು ಕಾರಿನ ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಳು​

    ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿ ಫೋಟೋ ವೈರಲ್​

ಸ್ಯಾಂಡಲ್​ವುಡ್ ನಟ​ ಪವರ್ ಸ್ಟಾರ್, ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅಪ್ಪು ನಮ್ಮನ್ನು ಅಗಲಿ 2 ವರ್ಷ ಕಳೆದರೂ ಕೂಡ ಇಂದಿಗೂ ಎಲ್ಲರ ಮನದಲ್ಲಿ ಅಪ್ಪು ಅಜರಾಮರ ಆಗಿ ಉಳಿದಿದ್ದಾರೆ. ಅವರ ಮೇಲಿನ ಪ್ರೀತಿ, ಗೌರವ ಇಂದಿಗೂ ಸಹ ಹಾಗೇ ಉಳಿದುಕೊಂಡಿದೆ.

ಅಪ್ಪುಗೆ ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳಿಗೂ ಕೂಡ ಅಪ್ಪು ಅಂದ್ರೆ ಅಷ್ಟೇ ಇಷ್ಟ. ಇದೀಗ ಅಪ್ಪು ಅಭಿಮಾನಿಯಾಗಿರೋ ಈ ಪುಟ್ಟ ಬಾಲಕಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪುನೀತ್ ಅವರ ಪುಟ್ಟ ಅಭಿಮಾನಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಧೈರ್ಯ ತುಂಬಿದ್ದಾರೆ. ಪುನೀತ್ ರಾಜ್​ಕುಮಾರ್​​ ಅವರ ಮನೆಗೆ ಬಂದ ಪುಟ್ಟ ಬಾಲಕಿ ಅಪ್ಪು ಫೋಟೋವನ್ನು ನೋಡ್ತಿದ್ದಂತೆ ಖುಷಿಯಾಗಿದೆ.

ಬಳಿಕ ಅಪ್ಪು ಫೋಟೋದ ಪಕ್ಕದಲ್ಲಿ ನಿಂತುಕೊಂಡು ಕ್ಯಾಮೆರಾಗೆ ಪೋಸ್​​​ ಕೊಟ್ಟಿದೆ. ಅಪ್ಪು ಮನೆಯಲ್ಲಿರುವ ನೀಲಿ ಬಣ್ಣದ ಕಾರಿನ ಮುಂದೆ ನಿಂತುಕೊಂಡು ಫೋಟೋಗೆ ಪೋಸ್ ಕೊಟ್ಟಿದೆ. ಅಪ್ಪು ಅಭಿಮಾನಿಯನ್ನು ನೋಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಪಕ್ಕದಲ್ಲಿ ಕೂರಿಸಿಕೊಂಡು ಮುದ್ದಾಗಿ ಮಾತಾಡಿಸಿದ್ದಾರೆ. ಜೊತೆಗೆ ಪುಟ್ಟ ಕಂದಮ್ಮನ ಜೊತೆ ಫೋಟೋ ಕ್ಲಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಲ್ಲಿ ವೈರಲ್​​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾನ್ಸರ್​ನಿಂದ ಬಳಲುತ್ತಿರುವ ಅಪ್ಪು ಅಭಿಮಾನಿಗೆ ಆಸರೆಯಾದ ಅಶ್ವಿನಿ ಪುನೀತ್ ರಾಜ್​​ಕುಮಾರ್

https://newsfirstlive.com/wp-content/uploads/2023/11/appu-fan.jpg

Load More