newsfirstkannada.com

ಏಷ್ಯಾಕಪ್​ ಅಲ್ಲ.. ರೋಹಿತ್​ ಟಾರ್ಗೆಟ್​ ಬೇರೆನೇ! ಆ ಟ್ರೋಫಿ ಮೇಲಿದೆ ಮುಂಬೈಕರ್ ಕಣ್ಣು​​

Share :

30-08-2023

  ವಿಶ್ವಕಪ್​ ಟ್ರೋಫಿ ಗೆಲುವಿನ ಕನವರಿಕೆಯಲ್ಲಿ ರೋಹಿತ್​.!

  ಹಿಟ್​ಮ್ಯಾನ್​ಗೆ ಟ್ರೋಫಿಗೆ ಮುತ್ತಿಕ್ಕುವ ಹಂಬಲ

  ಮಾನಸಿಕವಾಗಿ ಸಿದ್ಧರಾಗ್ತಿದ್ದಾರಂತೆ ಮುಂಬೈಕರ್​

ಪ್ರತಿಷ್ಠೆಯ ಏಷ್ಯಾಕಪ್​ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಪಾಕ್​​ ವಿರುದ್ಧದ ಹೈವೋಲ್ಟೆಜ್​ ಕದನದೊಂದಿಗೆ ಟೀಮ್​ ಇಂಡಿಯಾದ ಅಭಿಯಾನ ಶನಿವಾರದಿಂದ ಆರಂಭವಾಗಲಿದೆ. ಆದ್ರೆ, ಕ್ಯಾಪ್ಟನ್​ ರೋಹಿತ್​ ಶರ್ಮಾ ಟಾರ್ಗೆಟ್​ ಏಷ್ಯಾಕಪ್​ ಅಲ್ಲವೇ ಅಲ್ಲ. ಹಿಟ್​​ಮ್ಯಾನ್​​ ಶರ್ಮಾ ದೊಡ್ಡ ಕನಸನ್ನ ನನಸು ಮಾಡಿಕೊಳ್ಳಲು ಪಣ ತೊಟ್ಟಿದ್ದಾರೆ.

ಭಾರತ – ಪಾಕಿಸ್ತಾನ ನಡುವೆ ಶನಿವಾರ ನಡೆಯಲಿರೋ ಹೈವೋಲ್ಟೆಜ್​ ಕದನದತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಬದ್ಧವೈರಿಗಳ ಕದನದಲ್ಲಿ ಗೆದ್ದು ಬೀಗಲಿ ಅನ್ನೋದ್ರ ಜೊತೆಗೆ ಟೀಮ್​ ಇಂಡಿಯಾ ಏಷ್ಯಾಕಪ್​​ ಟ್ರೋಫಿ ಜಯಿಸಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಆದ್ರೆ, ಕ್ಯಾಪ್ಟನ್​ ರೋಹಿತ್​ ಶರ್ಮಾ ಟಾರ್ಗೆಟ್​ ಬೇರೆನೆ ಇದೆ.

ಏಷ್ಯಾಕಪ್​ ಅಲ್ಲ.. ರೋಹಿತ್​ ಟಾರ್ಗೆಟ್​ ಬೇರೆನೇ..

‘Marna tho marna dinosaurs ko marna’ ಅನ್ನೋ ಮಾತಿದೆ. ಸದ್ಯ ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಮನಸ್ಥಿತಿಯೂ ಹಾಗೇ ಇದೆ. ಏಷ್ಯಾಕಪ್ ಟೂರ್ನಿಯಲ್ಲಿ ಇನ್ನು 3 ದಿನದಲ್ಲಿ ಟೀಮ್​ ಇಂಡಿಯಾ ಅಭಿಯಾನ ಆರಂಭವಾಗಲಿದೆ. ಪಾಕಿಸ್ತಾನ ವಿರುದ್ಧ ಹೈ ಪ್ರೆಶರ್​ ಗೇಮ್​ ಆಡಬೇಕಿದೆ. ಆದ್ರೆ, ರೋಹಿತ್​ ಶರ್ಮಾ ಮಾತ್ರ ವಿಶ್ವಕಪ್​ ಟೂರ್ನಿಯ ಕನವರಿಕೆಯಲ್ಲಿದ್ದಾರೆ.

ಟ್ರೋಫಿಗೆ ಮುತ್ತಿಕ್ಕುವ ಹಂಬಲದಲ್ಲಿ ಹಿಟ್​​​ಮ್ಯಾನ್​.!

ಟೀಮ್​ ಇಂಡಿಯಾ ಈ ಹಿಂದೆ ವಿಶ್ವಕಪ್​ ಗೆದ್ದಾಗ ರೋಹಿತ್​ ಶರ್ಮಾ ತಂಡದಿಂದ ಡ್ರಾಪ್​ ಆಗಿದ್ರು. ಇದೀಗ 12 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಪ್ರತಿಷ್ಠೆಯ ಟೂರ್ನಿ ನಡೀತಾ ಇದ್ದು, ಈಗ ರೋಹಿತ್​ ಶರ್ಮಾನೇ ಕ್ಯಾಪ್ಟನ್​ ಆಗಿದ್ದಾರೆ. ಈ ಬಾರಿ ತವರಿನಂಗಳಲ್ಲಿ ಟ್ರೋಫಿಗೆ ಮುತ್ತಿಕ್ಕಬೇಕು ಅನ್ನೋದು ಹಿಟ್​ಮ್ಯಾನ್​ ಹಂಬಲ.!

2019ರ ವಿಶ್ವಕಪ್​ ಮಂತ್ರ ಪಠಿಸಿದ ರೋಹಿತ್​.!

2019ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲಲಿಲ್ಲ.. ಆದ್ರೆ, ರೋಹಿತ್​ ಶರ್ಮಾ ರೌದ್ರಾವತಾರ ವಿಶ್ವದ ಗಮನ ಸೆಳೆದಿತ್ತು. ಆಂಗ್ಲರ ನಾಡಲ್ಲಿ ಘರ್ಜಿಸಿದ್ದ ಹಿಟ್​ಮ್ಯಾನ್​, ಬರೋಬ್ಬರಿ 5 ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ರು. ಹಿಟ್​​ಮ್ಯಾನ್​ ಬ್ಯಾಟಿಂಗ್​ ಅಬ್ಬರದ ಮುಂದೆ ಬೌಲರ್​ಗಳು, ಕಂಗಾಲ್​ ಆದ್ರೆ, ಎದುರಾಳಿಗಳು ಥಂಡಾ ಆಗಿದ್ರು.

ಕಳೆದ ವಿಶ್ವಕಪ್​ನಲ್ಲಿ ಆರ್ಭಟಿಸಿದ ರೋಹಿತ್​, ಈ ಬಾರಿ ತವರಿನಂಗಳದಲ್ಲಿ ಮಿಂಚೋ ಇರಾದೆಯಲ್ಲಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸ್ತಿರುವ ಕ್ಯಾಪ್ಟನ್, ಮೆಂಟಲಿ ಫುಲ್​ ಫಿಟ್​ ಆಗೋ ಲೆಕ್ಕಾಚಾರದಲ್ಲಿದ್ದಾರಂತೆ. ಈ ಹಿಂದೆ 2019ರ ವಿಶ್ವಕಪ್​ಗೂ ಮುನ್ನ ಹೇಗಿದ್ರೂ, ಹಾಗೆ ಇರೋಕೆ ಪ್ರಯತ್ನ ಪಡ್ತಿದ್ದಾರಂತೆ.

2019ರ ವಿಶ್ವಕಪ್​ಗೂ ಮುನ್ನ ಇದ್ದಂತೆ ಇರಲು ಯತ್ನ

‘ಪಾಸಿಟಿವ್​ ಅಥವಾ ನೆಗೆಟಿವ್ ಯಾವುದೇ ಇದ್ದರೂ ಹೊರಗಿನ ಅಂಶಗಳು ನನ್ನ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿದ್ದೇನೆ. ನಾನು 2019ರ ವಿಶ್ವಕಪ್​ಗೂ ಮುನ್ನ ಹೇಗಿದ್ದೆನೋ ಹಾಗಿರಲು ಬಯಸುತ್ತಿದ್ದೇನೆ. ಆಗ ನಾನು ಉತ್ತಮ ಮೈಂಡ್​​ಸೆಟ್​ ಹೊಂದಿದ್ದೆ. ಆಗ ಏನೆಲ್ಲಾ ಸರಿ ಮಾಡಿದ್ದೆನೋ ಅವುಗಳನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ. ಆದೇ ರೀತಿಯಲ್ಲಿ ಇರಲು ಪ್ರಯತ್ನ ಪಡ್ತಿದ್ದೇನೆ’
ರೋಹಿತ್ ಶರ್ಮಾ, ನಾಯಕ

ಕೇವಲ ಮಾತಿನಲ್ಲಿ ಮಾತ್ರವಲ್ಲ, ಹೇಳಿದಂತೆ ಇರೋದಕ್ಕೂ ರೋಹಿತ್​ ಪ್ರಯತ್ನ ಪಡ್ತಿದ್ದಾರೆ. 2019ರ ವಿಶ್ವಕಪ್​ಗೂ ಮುನ್ನ ತಿರುಪತಿ ತಿಮ್ಮಪ್ಪನ ಆಶಿರ್ವಾದ ಪಡೆದು ಬಂದಿದ್ದ ಹಿಟ್​ಮ್ಯಾನ್​, ಈಗಲೂ ವೆಂಕಟೇಶ್ವರನ ದರ್ಶನ ಪಡೆದು ಬಂದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರಾಕ್ಟೀಸ್​ ಕ್ಯಾಂಪ್​ ಕೂಲ್​ & ಕಾಮ್​ ನಡೆಯಿಂದ ಗಮನ ಸೆಳೆದಿದ್ದಾರೆ.

ವಿಶ್ವಕಪ್​ ರೋಹಿತ್​ ಪಾಲಿಗೆ ಅಗ್ನಿ​​ಪರೀಕ್ಷೆಯ ಕಣ.!

ಐಪಿಎಲ್​ನಲ್ಲಿ ಯಶಸ್ವಿ ಕ್ಯಾಪ್ಟನ್​ ಆಗಿ ಗುರುತಿಸಿಕೊಂಡಿದ್ದ ರೋಹಿತ್​ ಶರ್ಮಾ ಟೀಮ್​ ಇಂಡಿಯಾ ಪರ ಫ್ಲಾಪ್ ಆಗಿದ್ದಾರೆ. ನಾಯಕನಾದ ಬಳಿಕ ಏಷ್ಯಾಕಪ್​, ಟಿ20 ವಿಶ್ವಕಪ್​ ಸೇರಿದಂತೆ ಮಹತ್ವದ ಟೂರ್ನಿಗಳಲ್ಲಿ ತಂಡ ಮುಗ್ಗರಿಸಿದೆ. ಹೀಗಾಗಿ ರೋಹಿತ್​ ಮೇಲೆ ಹೆಚ್ಚಿನ ಒತ್ತಡ ಇದ್ದು, ಅದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಏಷ್ಯಾಕಪ್​ ಅಲ್ಲ.. ರೋಹಿತ್​ ಟಾರ್ಗೆಟ್​ ಬೇರೆನೇ! ಆ ಟ್ರೋಫಿ ಮೇಲಿದೆ ಮುಂಬೈಕರ್ ಕಣ್ಣು​​

https://newsfirstlive.com/wp-content/uploads/2023/07/Kohli-Rohit.jpg

Load More