ಏಷ್ಯಾ ಕಪ್-2023 ಆಗಸ್ಟ್ 30 ರಿಂದ ಪ್ರಾರಂಭ
ಶೀಘ್ರದಲ್ಲೇ ಭಾರತ ತಂಡ ಪ್ರಕಟ ಸಾಧ್ಯತೆ
ಕಾಮೆಂಟೇಟರ್‌ಗಳ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ..?
ಏಷ್ಯಾ ಕಪ್-2023 ಆಗಸ್ಟ್ 30 ರಿಂದ ಪ್ರಾರಂಭ ಆಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬಿಸಿಸಿಐ ಶೀಘ್ರದಲ್ಲೇ ಟೀಂ ಇಂಡಿಯಾವನ್ನು ಪ್ರಕಟಿಸಬಹುದು. ತಂಡ ಪ್ರಕಟಕ್ಕೂ ಮೊದಲು ಏಷ್ಯಾಕಪ್‌ಗೆ ಕಾಮೆಂಟೇಟರ್‌ಗಳ ಪಟ್ಟಿ ರಿಲೀಸ್ ಆಗಿದೆ.
ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಸೇರಿದಂತೆ ಭಾರತದ ಹಲವು ಮಾಜಿ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಭಾರತದೊಂದಿಗೆ ಪಾಕಿಸ್ತಾನ, ಜಿಂಬಾಬ್ವೆ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಸಹ ಸೇರಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ರವಿಶಾಸ್ತ್ರಿ ಹೆಸರು ಮೊದಲ ಸ್ಥಾನದಲ್ಲಿದೆ. ಗಂಭೀರ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಪಿಯೂಷ್ ಚಾವ್ಲಾ ಮತ್ತು ಸಂಜಯ್ ಬಂಗಾರ್ ಸ್ಥಾನ ಪಡೆದಿದ್ದಾರೆ. ಸಂಜಯ್ ಮಂಜ್ರೇಕರ್, ಮೊಹಮ್ಮದ್ ಕೈಫ್, ದೀಪ್ ದಾಸ್‌ಗುಪ್ತಾ, ಮೊಹಮ್ಮದ್ ಕೈಫ್, ಆದಿತ್ಯ ತಾರೆ ಮತ್ತು ರಜತ್ ಭಾಟಿಯಾ ಕಾಮೆಂಟರಿ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಪಾಕ್ನ ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಂ ಮತ್ತು ವಕಾರ್ ಯೂನಿಸ್ ಹೆಸರೂ ಸೇರಿದೆ. ಈ ಪಟ್ಟಿಯಲ್ಲಿ ಅಮೀರ್ ಸೊಹೈಲ್ ಮತ್ತು ಬಾಜಿದ್ ಖಾನ್ ಇದ್ದಾರೆ. ಜಿಂಬಾಬ್ವೆಯ ಮಾಜಿ ಆಟಗಾರ ಮತ್ತು ಮಾಜಿ ಕೋಚ್ ಆಂಡಿ ಫ್ಲವರ್ ಕಾಮೆಂಟರಿ ಪ್ಯಾನೆಲ್‌ನಲ್ಲಿದ್ದಾರೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಾರ್ವನ್ ಅಟಪಟ್ಟು, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೆಡನ್, ಇಂಗ್ಲೆಂಡ್‌ನ ಡೊಮಿನಿಕ್ ಕಾರ್ಕ್ ಈ ಪಟ್ಟಿಯಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್