ಇದು ಏಷ್ಯಾಕಪ್ ಅಲ್ಲ, ವಿವಾದದ ಟೂರ್ನಿ
ಕೈ ಕೊಟ್ಟ ಫ್ಲಡ್ಲೈಟ್, ಪಂದ್ಯ ಅರ್ಧಗಂಟೆ ಸ್ಥಗಿತ
ಇಂಡೋ-ಪಾಕ್ ಪಂದ್ಯ ಮಳೆಗೆ ಬಲಿ.. ಫ್ಯಾನ್ಸ್ ಬೇಸರ
ಏಷ್ಯಾಕಪ್ ಟೂರ್ನಿ. ಏಷ್ಯನ್ ಚಾಂಪಿಯನ್ ಪಟ್ಟವನ್ನ ನಿರ್ಧರಿಸುವ ಮಹತ್ವದ ಟೂರ್ನಿ. ಆದರ, ಸದ್ಯ ನಡೆಯುತ್ತಿರುವ ಟೂರ್ನಿಯನ್ನ, ಏಷ್ಯಾಕಪ್ ಸಂಗ್ರಾಮ ಅಂತ ಕರೆಯುವ ಬದಲು ಕಾಂಟ್ರವರ್ಸಿಗಳ ಸಮಾಗಮ ಅಂತ ಕರೆಯೋದೆ ಬೆಸ್ಟ್ ಅನ್ಸುತ್ತೆ.! ಯಾಕಂದ್ರೆ, ಈ ಟೂರ್ನಿಯಲ್ಲಿ ಗೆಲುವು – ಸೋಲಿಗಿಂತ ವಿವಾದಗಳ ಸದ್ದೇ ಜೋರಾಗಿದೆ.!
ಉದ್ದೇಶ, ಉತ್ಸಾಹ, ಭಾವನೆ, ಆಕ್ರಮಣಶೀಲತೆ, ಉದ್ವೇಗ ಮತ್ತು ಎಪಿಕ್ ಶೋ! ಈ ಎಲ್ಲವನ್ನ ನೋಡಲು ಸಿಗುವ ಟೂರ್ನಿ ಅಂದ್ರೆ ಅದು ಏಷ್ಯಾಕಪ್. ಏಷ್ಯನ್ ಚಾಂಪಿಯನ್ ಪಟ್ಟಕ್ಕಾಗಿ ನಡೆಯುವ ಈ ಮಹಾಕಾಳಗಕ್ಕೆ 39 ವರ್ಷಗಳ ಇತಿಹಾಸವಿದೆ. ಇಲ್ಲಿವರೆಗೆ ನಡೆದ ಪಂದ್ಯಾವಳಿ ಎಂದೆಂದೂ ಕ್ರಿಕೆಟ್ ಪ್ರಿಯರನ್ನ ಬೇಸರಪಡಿಸಿದ್ದೆ ಇಲ್ಲ. ಇಂತಹ ಸಕ್ಸಸ್ಫುಲ್ ಟೂರ್ನಿಗೆ ಈ ಬಾರಿ ವಿವಾದಗಳ ಸರಮಾಲೆಯೇ ಸುತ್ತಿಕೊಂಡಿದೆ.
9 ದಿನ..9 ವಿವಾದ..ಫ್ಯಾನ್ಸ್ ಛೀಮಾರಿ..!
ಹೌದು, ಆಗಸ್ಟ್ 30ರಂದು ಆರಂಭಗೊಂಡ ಏಷ್ಯಾಕಪ್ ಟೂರ್ನಿ ಸದ್ಯ ವಿವಾದದ ಕೇಂದ್ರಬಿಂದುವಾಗಿದೆ. 9 ದಿನದಲ್ಲಿ 9 ವಿವಾದ ನಡೆದು, ಫ್ಯಾನ್ಸ್ಗಳಿಂದ ಛೀಮಾರಿ ಹಾಕಿಸಿಕೊಳ್ತಿದೆ. ಆ ಕಾಂಟ್ರವರ್ಸಿಗಳು ಯಾವುವು ಅನ್ನೋದನ್ನ ನೋಡೋಣ.
ವಿವಾದ ನಂ.1: ಇಂಡೋ-ಪಾಕ್ ಪಂದ್ಯ ಮಳೆಗೆ ಬಲಿ..ಫ್ಯಾನ್ಸ್ ಬೇಸರ
ಪ್ರತಿ ಟೂರ್ನಿ ವೇಳೆ ಇಂಡೋ-ಪಾಕ್ ಪಂದ್ಯಕ್ಕೆ ಸಿಕ್ಕಾಪಟ್ಟೆ ಹೈಪ್ ಇರುತ್ತೆ. ಈ ಬಾರಿಯು ಅದೇ ನಿರೀಕ್ಷೆ ಇತ್ತು. ಆದ್ರೆ, ಮಳೆರಾಯ ಆ ಎಲ್ಲಾ ಆಸೆಗೆ ತಣ್ಣೀರೆರೆಚಿದ. ಟೂರ್ನಿಯ ಬಿಗ್ ಪಂದ್ಯವೇ ರದ್ದಾಗಿದ್ದಕ್ಕೆ ಫ್ಯಾನ್ಸ್ ಸೇರಿದಂತೆ, ಕ್ರಿಕೆಟ್ ಎಕ್ಸ್ಪರ್ಟ್ಸ್ಗಳು ಆಯೋಜಕರ ವಿರುದ್ಧ ಕಿಡಿ ಕಾರಿದ್ದಾರೆ.
ವಿವಾದ ನಂ.2: ಎರಡು ದೇಶದಲ್ಲಿ ಟೂರ್ನಿ, ಪ್ಲೇಯರ್ಸ್ ಹೈರಾಣ.!
ಇನ್ನು ಈ ಸಲದ ಏಷ್ಯಾಕಪ್ ಟೂರ್ನಿ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿದೆ. ತಂಡಗಳು ಎರಡು ದೇಶಗಳಿಗೆ ಟ್ರಾವೆಲ್ ಮಾಡಬೇಕಿದ್ದು ಹೈರಾಣಾಗಿವೆ. ಅಭ್ಯಾಸಕ್ಕೆ ಹೆಚ್ಚಿನ ಸಮಯವಿಲ್ಲ. ಫ್ಲೈಟ್ನಲ್ಲೇ ಹೆಚ್ಚಿನ ಸಮಯ ಕಳೆಯಬೇಕಿದೆ. ಇದು ತಂಡಗಳ ರಿಸಲ್ಟ್ ಮೇಲೆ ಪರಿಣಾಮ ಬೀರಿದೆ.
ವಿವಾದ ನಂ.3: ಬಿಗ್ ಟೂರ್ನಿಯಾದ್ರೂ ಸ್ಟೇಡಿಯಂ ಖಾಲಿ ಖಾಲಿ
ಇನ್ನು ಏಷ್ಯಾಕಪ್ ಯಾವಾಗ್ಲೇ ನಡೀಲಿ. ಪ್ರೇಕ್ಷಕರ ಅಪಾರ ಬೆಂಬಲವಿರುತ್ತೆ. ಆದ್ರೆ ಈ ಬಾರಿ ಸ್ಟೇಡಿಯಮ್ಸ್ ಖಾಲಿ ಖಾಲಿಯಾಗಿವೆ. ಅಪ್ಘಾನಿಸ್ತಾನ-ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಪಂದ್ಯವನ್ನ ವೀಕ್ಷಿಸಲು ಬೆರಣಿಕೆಯಷ್ಟು ಪ್ರೇಕ್ಷಕರು ಮಾತ್ರ ಆಗಮಿಸಿದ್ರು.
ವಿವಾದ ನಂ.4: ಕೈ ಕೊಟ್ಟ ಫ್ಲಡ್ಲೈಟ್, ಪಂದ್ಯ ಅರ್ಧಗಂಟೆ ಸ್ಥಗಿತ
ಇದನ್ನಂತೂ ಹೇಳೋದೆ ಬೇಡ. ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಫ್ಲಡ್ ಲೈಟ್ ಕೈ ಕೊಟ್ಟಿತ್ತು. ಸುಮಾರು ಅರ್ಧಗಂಟೆಗಳ ಕಾಲ ಪಂದ್ಯ ಸ್ಥಗಿತಗೊಂಡು ಬಳಿಕ ಆರಂಭಗೊಂಡಿತ್ತು. ಇಂಟರ್ನ್ಯಾಷನಲ್ ಪಂದ್ಯ ನಡೆಯುತ್ತಿದ್ದಾಗ ಹೀಗಾದ್ರೆ ಹೇಗೆ ಹೇಳಿ.. ಇದರಿಂದ ಟೂರ್ನಿಗೆ ಆಯೋಜನೆ ವಹಿಸಿರೋ ಪಾಕ್ಗೆ ದೊಡ್ಡ ಮುಖಭಂಗವಾಗಿದೆ.
ವಿವಾದ ನಂ.5: ಟೂರ್ನಿ ನಡುವೆ ಪಂದ್ಯಗಳು ಕೊಲಂಬೋಗೆ ಶಿಫ್ಟ್
ಶ್ರೀಲಂಕಾದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಟೂರ್ನಿ ನಡುವೆಯೆ ಎಸಿಸಿ ಸೂಪರ್-4 ಹಾಗೂ ಫೈನಲ್ ಪಂದ್ಯದ ಸ್ಥಳ ಬದಲಾಯಿಸಿದೆ. ಕ್ಯಾಂಡಿಯಿಂದ ಕೊಲಂಬೋಗೆ ಪಂದ್ಯಗಳನ್ನ ಶಿಫ್ಟ್ ಮಾಡಲಾಗಿದೆ. ಇದು ಕೂಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇದಿಷ್ಟೇ ಅಲ್ಲದೇ ಬೇರೆ ವಿವಾದಗಳಿಂದಲೂ ಟೂರ್ನಿ ಸುದ್ದಿಯಲ್ಲಿದೆ.
ಪಾಕಿಸ್ತಾನಕ್ಕೆ ತೆರಳಲು ಟೀಮ್ ಇಂಡಿಯಾ ಒಲ್ಲೆ ಎಂದಿದ್ದಕ್ಕೆ ಆಯೋಜನೆಯ ಹಕ್ಕು ಹೊಂದಿದ್ದ ಪಾಕ್ ಹಾಗೂ ಬಿಸಿಸಿಐ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಹೀಗಾಗಿ ವೇಳಾಪಟ್ಟಿ ತಡವಾಗಿ ಪ್ರಕಟಗೊಂಡಿತು. ಯುಎಇನಲ್ಲಿ ಟೂರ್ನಿ ನಡೆಸಲು ಪಿಸಿಬಿ ಹಠ ಹಿಡಿದಿತ್ತು. ಆದರೆ ಇದಕ್ಕೆ ಎಸಿಸಿ ಸೊಪ್ಪು ಹಾಕಲಿಲ್ಲ. ಕೊನೆಗೆ ಪಾಕ್ ಹಾಗೂ ಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಯ್ತು. ಇದೀಗ ಶ್ರೀಲಂಕಾದಲ್ಲಿ ಮಳೆಯಿಂದ ಪಂದ್ಯ ನೋಡಲು ವೀಕ್ಷಕರು ಬರುತ್ತಿಲ್ಲ. ಟಿಕೆಟ್ ಸೇಲಾಗದೇ ಉಳಿದಿದ್ದು ಪಿಸಿಬಿ ಇದಕ್ಕೆ ಪರಿಹಾರ ನೀಡುವಂತೆ ಎಸಿಸಿಗೆ ಬೇಡಿಕೆ ಇಟ್ಟಿದೆ. ಇದರ ಜೊತೆ ಸೂಪರ್ ಪಂದ್ಯಗಳನ್ನ ಕ್ಯಾಂಡಿಯಿಂದ ಕೊಲಂಬೋಗೆ ಶಿಫ್ಟ್ ಮಾಡಿದ್ರೂ, ಮಳೆಯ ಭೀತಿ ಕಾಡ್ತಿದೆ.
ಒಟ್ಟಿನಲ್ಲಿ, ಬಿಸಿಸಿಐ ಹಾಗೂ ಪಿಸಿಬಿ ನಡುವಿನ ತಿಕ್ಕಾಟದಲ್ಲಿ ಏಷ್ಯಾಕಪ್ ಟೂರ್ನಿ ಬಡವಾಗಿದ್ದಂತೂ ಸುಳ್ಳಲ್ಲ. ಮುಂದಾದ್ರೂಈ ವಿವಾದಗಳು ಮರೆಯಾಗಿ, ಫ್ಯಾನ್ಸ್ಗೆ ಅಸಲಿ ಮಜಾ ಸಿಗುತ್ತಾ.? ಅಥವಾ ಕಾಂಟ್ರವರ್ಸಿಗಳಲ್ಲೇ ಟೂರ್ನಿ ಅಂತ್ಯ ಕಾಣುತ್ತಾ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ