newsfirstkannada.com

Asia Cup 2023: ಟೀಮ್​ಗೆ ಆಯ್ಕೆಯಾಗದ ಧವನ್, ಚಹಲ್, ಅಶ್ವಿನ್ ಸೇರಿ ಇತರೆ ಪ್ಲೇಯರ್ಸ್​ ಕಥೆ ಏನು?​

Share :

22-08-2023

    ಕಮರಿ ಹೋಯಿತು ಆಟಗಾರರ ಏಷ್ಯಾಕಪ್​ ಆಡೋ ಕನಸು

    ವಿಶ್ವಕಪ್​ ತಂಡದಲ್ಲಿ ಸ್ಥಾನವಿಲ್ಲ ಅನ್ನೋದು ಈಗ ಕನ್​ಫರ್ಮ್​

    ಭುವನೇಶ್ವರ್​ ಕುಮಾರ್​​ ಕ್ರಿಕೆಟ್​ ಕರಿಯರ್​ ಮುಗಿಯಿತಾ..?

ಏಷ್ಯಾಕಪ್​ ಮಹಾ ಸಮರಕ್ಕೆ ಟೀಮ್​ ಅನೌನ್ಸ್​ ಆಗೋದ್ರೊಂದಿಗೆ ಇಷ್ಟು ದಿನ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ. ಇದ್ರ ಜೊತೆಗೆ ಹಲವು ಆಟಗಾರರ ಕರಿಯರ್​ಗೂ ಕೊನೆ ಮೊಳೆ ಬಿದ್ದಿದೆ. ಇನ್ನು, ಕೆಲವರ ಕರಿಯರ್ ಅಂತೂ​​ ಅತಂತ್ರಕ್ಕೆ ಸಿಲುಕಿ ಬಿಟ್ಟಿದೆ.

ಏಷ್ಯಾಕಪ್​ ಟೂರ್ನಿಗೆ ಯಾವಾಗ ಟೀಮ್​ ಅನೌನ್ಸ್​ ಆಗುತ್ತೆ.? ಅನ್ನೋ ಬಹುದಿನದ ಪ್ರಶ್ನೆಗೆ ಕೊನೆಗೂ ತೆರೆಬಿದ್ದಿದೆ. ಸುಮಾರು ಒಂದೂವರೆ ಗಂಟೆ ಹೈವೋಲ್ಟೆಜ್​ ಮೀಟಿಂಗ್​ ನಡೆಸಿದ ಸೆಲೆಕ್ಷನ್​ ಕಮಿಟಿ, ಟೀಮ್​ ಮ್ಯಾನೇಜ್​ಮೆಂಟ್​​ 17 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದೆ. ಚಾನ್ಸ್​​ ಗಿಟ್ಟಿಸಿಕೊಂಡವರೂ ಫುಲ್​ ಜೋಷ್​​ನಲ್ಲಿದ್ರೆ, ಚಾನ್ಸ್​​ ಮಿಸ್​​ ಮಾಡಿಕೊಂಡ ಕಥೆ ಅಡಕತ್ತರಿಗೆ ಸಿಲುಕಿದೆ.

ಭಾರತದ ಕ್ರಿಕೆಟರ್​ ಶಿಖರ್ ಧವನ್

ಶಿಖರ್​ ಧವನ್​ ಕರಿಯರ್​ಗೆ ಫುಲ್ ಸ್ಟಾಫ್​.?

ರೇಸ್​ನಲ್ಲಿ ಮುಂಚೂಣಿಯಲ್ಲಿರಲಿಲ್ಲ. ಹಾಗಿದ್ರೂ, ಧವನ್​ ಸ್ಥಾನ ಸಿಗಬಹುದು ಅನ್ನೋ ಟಾಕ್​ ಸಣ್ಣಮಟ್ಟಿಗೆ ಇತ್ತು. ಆದ್ರೆ, ಆ ನಿರೀಕ್ಷೆ ಹುಸಿಯಾಗಿದೆ. ಇದರೊಂದಿಗೆ ಶಿಖರ್​ ಧವನ್​ ಕರಿಯರ್​​ಗೂ ಬಹುತೇಕ ಫುಲ್​ಸ್ಟಾಫ್​ ಬಿದ್ದಂತಾಗಿದೆ.

ಯುಜುವೇಂದ್ರ ಚಹಲ್​ ಭವಿಷ್ಯ ಅತಂತ್ರ.!

ಏಷ್ಯಾಕಪ್​ ತಂಡದ ಆಯ್ಕೆ ರೇಸ್​​ನಲ್ಲಿ ಕುಲ್​ದೀಪ್​ ಯಾದವ್​​, ಸ್ಪಿನ್ನರ್​ ಯುಜುವೇಂದ್ರ ಚಹಲ್​ರನ್ನ ಓವರ್​​ಟೇಕ್​ ಮಾಡಿದ್ದಾರೆ. ಇದ್ರೊಂದಿಗೆ ಚಹಲ್​ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ನಿಜ ಹೇಳಬೇಕು ಅಂದ್ರೆ, ವೈಟ್​​ಬಾಲ್​ ಸ್ಪೆಷಲಿಸ್ಟ್​ ಅನ್ನೋ ಟ್ಯಾಗ್​ ಲೈನ್​ ಇದ್ರೂ, ಫೀಲ್ಡಿಂಗ್​, ಬ್ಯಾಟಿಂಗ್​ನಲ್ಲಿ ತೀವ್ರ ಹಿನ್ನಡೆ ಅನುಭವಿಸ್ತಾ ಇರೋ ಚಹಲ್​​ ಕರಿಯರ್​​ ಅಡಕತ್ತರಿಗೆ ಸಿಲುಕಿದೆ.

ಅಶ್ವಿನ್​ ಪಾಲಿಗೆ ಏಕದಿನ ಡೋರ್​​ ಕ್ಲೋಸ್​​.?

ಅನುಭವಿ ಆಫ್​ ಸ್ಪಿನ್ನರ್​ ಆರ್​​. ಅಶ್ವಿನ್​ಗೆ ಏಷ್ಯಾಕಪ್​ ತಂಡದಲ್ಲಿ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಇದ್ರೊಂದಿಗೆ ವಿಶ್ವಕಪ್​ ತಂಡದಲ್ಲೂ ಸ್ಥಾನ ಸಿಗಲ್ಲ ಅನ್ನೋದು ಕನ್​ಫರ್ಮ್​ ಆಗಿದ್ದು, ಬಹುತೇಕ ಏಕದಿನ ಕರಿಯರ್​​ ಅಂತ್ಯ ಕಂಡಂತಾಗಿದೆ.

ಭುವನೇಶ್ವರ್​ ಕುಮಾರ್​​​ ಕರಿಯರ್​ ಖತಂ.?

ಕಳೆದ ನ್ಯೂಜಿಲೆಂಡ್​​ ಪ್ರವಾಸದ ಬಳಿಕ ಟೀಮ್​ ಇಂಡಿಯಾದಿಂದ ಮರೆಯಾಗಿರುವ ವೇಗಿ ಭುವನೇಶ್ವರ್​ ಕುಮಾರ್​​ ಮತ್ತೆ ಕಮ್​ಬ್ಯಾಕ್​ ಮಾಡಲು ಕಸರತ್ತು ನಡೆಸ್ತಿದ್ದಾರೆ. ಆದ್ರೆ, ಟೀಮ್​ ಮ್ಯಾನೇಜ್​ಮೆಂಟ್​ ಹಾಗೂ ಸೆಲೆಕ್ಷನ್​ ಕಮಿಟಿ ಭುವನೇಶ್ವರ್​ ಕುಮಾರ್​ರನ್ನ ಬಿಟ್ಟು ಮುಂದೆ ಸಾಗಿದಂತಿದೆ. ಇದೀಗ ಏಷ್ಯಾಕಪ್​ನಿಂದ ಹೊರ ಬಿದ್ದಿರೋ ಭುವಿಗೆ ಮತ್ತೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಗೋದು ಡೌಟ್​.

ಅಡಕತ್ತರಿಗೆ ಸಿಲುಕಿದ ಹಲವರ ಭವಿಷ್ಯ..!

ಹಲವರ ಕರಿಯರ್​ಗೆ ಕೊನೆ ಮೊಳೆ ಬಿದ್ದಿದ್ರೆ, ಇನ್ನು ಕೆಲವರ ಕರಿಯರ್​ ಅತಂತ್ರಕ್ಕೆ ಸಿಲುಕಿದೆ. ಇವ್ರ ವಿಚಾರದಲ್ಲಿ ಸೆಲೆಕ್ಷನ್​ ಕಮಿಟಿ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​ ನಡೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತಾಗಿದೆ. ವಿಶ್ವಕಪ್​ ಟೂರ್ನಿಯನ್ನಾಡೋ ಕನಸು ಕೂಡ ಕಮರಿದೆ.

R ಆಶ್ವಿನ್​

ಅತಂತ್ರಕ್ಕೆ ಸಿಲುಕಿದ ಆಟಗಾರರು

ಅಫ್​ ಸ್ಪಿನ್ನರ್​ ವಾಷಿಂಗ್ಟನ್​ ಸುಂದರ್, ಯಂಗ್​ ಬ್ಯಾಟ್ಸ್​ಮನ್​ಋತುರಾಜ್​ ಗಾಯಕ್ವಾಡ್​ ಹಾಗೂ ಕೆಲವೇ ಪಂದ್ಯಗಳಿಗೆ ಸೀಮಿತವಾದ ದೀಪಕ್​ ಹೂಡ ಭವಿಷ್ಯ ಸದ್ಯ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇನ್ನು, ರವಿ ಬಿಷ್ನೋಯಿ, ಉಮ್ರಾನ್​ ಮಲಿಕ್​, ಮುಖೇಶ್​ ಕುಮಾರ್​​ 2ND STRING ಟೀಮ್​ಗೆ ಮಾತ್ರ ಸೀಮಿತವಾದಂತೆ ಕಾಣ್ತಿದೆ. ಇನ್ನು ಆವೇಶ್​ ಖಾನ್​, ಆರ್ಷ್​ದೀಪ್​ ಸಿಂಗ್​, ದೀಪಕ್​ ಚಹರ್​ ಭವಿಷ್ಯ ಕೂಡ ಉತ್ತರವಿಲ್ಲದ ಪ್ರಶ್ನೆಯಾಗಿದೆ.

ಏಷ್ಯಾಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಅನೌನ್ಸ್​ ಆಗೋದ್ರೊಂದಿಗೆ ಪ್ರಮುಖ ಆಟಗಾರರ ವಿಶ್ವಕಪ್​ ಆಡೋ ಕನಸು ಕಮರಿದ್ರೆ, ಇನ್ನು ಹಲವರ ಪಾಲಿಗೆ ಭವಿಷ್ಯ ದೊಡ್ಡ ಕೊಶ್ಚನ್​ ಮಾರ್ಕ್​ ಆಗುಳಿದಿದೆ. ಇದಕ್ಕೆ ಉತ್ತರ ಮುಂಬರುವ ವಿಶ್ವಕಪ್​ ಮುಗಿರೋವರೆಗೂ ಸಿಗೋದೂ ಅನುಮಾನವೇ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2023: ಟೀಮ್​ಗೆ ಆಯ್ಕೆಯಾಗದ ಧವನ್, ಚಹಲ್, ಅಶ್ವಿನ್ ಸೇರಿ ಇತರೆ ಪ್ಲೇಯರ್ಸ್​ ಕಥೆ ಏನು?​

https://newsfirstlive.com/wp-content/uploads/2023/08/ASHWIN_DHAWAN_CHAHAL.jpg

Load More