newsfirstkannada.com

ಶಾಹೀನ್ ಆರ್ಭಟಕ್ಕೆ ಕೊಹ್ಲಿ, ರೋಹಿತ್ ಕ್ಲೀನ್ ಬೋಲ್ಡ್​.. ಭರ್ಜರಿ ಬ್ಯಾಟಿಂಗ್ ಮಾಡಿದ ಇಶನ್ ಕಿಶನ್, ಪಾಂಡ್ಯ

Share :

03-09-2023

  4 ವಿಕೆಟ್ ಉರುಳಿಸಿದ ಪಾಕಿಸ್ತಾನದ ಶಾಹೀನ್ ಆಫ್ರಿದಿ

  ಟೀಮ್ ಇಂಡಿಯಾಕ್ಕೆ ಆಸರೆಯಾದ ಇಶನ್, ಪಾಂಡ್ಯ

  ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕ್ಲೀನ್​ ಬೋಲ್ಡ್​

ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಮಳೆಯಿಂದಾಗಿ ರದ್ದಾಗಿರುವುದು ಫ್ಯಾನ್ಸ್‌ಗೆ ಭಾರೀ ನಿರಾಸೆಯನ್ನುಂಟು ಮಾಡಿದೆ. ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕ್ಯಾಪ್ಟನ್​ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡು ಎದುರಾಳಿ ಬಾಬರ್ ಪಡೆಯನ್ನು ಫೀಲ್ಡಿಂಗ್​ಗೆ ಆಹ್ವಾನಿಸಿದ್ದರು.

ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ ಉತ್ತಮ ಆರಂಭವೇನು ಪಡೆಯಲಿಲ್ಲ. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಮತ್ತು ಶುಭ್​ಮನ್​ ಗಿಲ್ ಹೆಚ್ಚು ಹೊತ್ತು ಬ್ಯಾಟ್​ ಬೀಸಲಿಲ್ಲ. ರೋಹಿತ್ ಕೇವಲ 11 ರನ್​ಗೆ ಔಟ್ ಆದ್ರೆ, ವಿರಾಟ್​ ಬಂದಷ್ಟೇ ವೇಗದಲ್ಲಿ 4 ರನ್ ಗಳಿಸಿ ಆಡುವಾಗ ಶಾಹೀನ್ ಆಫ್ರಿದಿ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ಗಿಲ್ 10 ರನ್​ಗೆ ವಿಕೆಟ್​ ಒಪ್ಪಿಸಿದರು. ಶ್ರೇಯಸ್ ಅಯ್ಯರ್ ಕೂಡ ಕ್ರೀಸ್​ ಕಾಯ್ದುಕೊಳ್ಳುವಲ್ಲಿ ವಿಫಲವಾಗಿ 14 ರನ್​ಗೆ ಜಾಗ ಖಾಲಿ ಮಾಡಿದರು.

ನಂತರ ಕ್ರೀಸ್​ಗೆ ಬಂದ ಇಶನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಸೇರಿ ಭರ್ಜರಿ ಬ್ಯಾಟಿಂಗ್ ಮಾಡಿ ಪಾಕ್ ಬೌಲರ್​ಗಳಿಗೆ ಬೆವರಿಳಿಸಿದರು. ಇಶನ್ 81 ಎಸೆತದಲ್ಲಿ 9 ಬೌಂಡರಿ, 2 ಸಿಕ್ಸರ್ ಸಮೇತ 82 ರನ್​ಗಳನ್ನು ಬಾರಿಸಿದರು. ಇದರಿಂದ ಭಾರತ ಉತ್ತಮ ಲಯ ಕಂಡುಕೊಂಡಿತು. ಇಶನ್​ಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್​ ಪಾಂಡ್ಯ ಕೂಡ 90 ಎಸೆತದಲ್ಲಿ 87 ರನ್​ಗಳನ್ನು ಸಿಡಿಸಿದರು. ತಂಡದ ಮೊತ್ತ 200ರ ಗಡಿ ದಾಟಿಸಿ ಇಶನ್ ಔಟ್ ಆದ್ರೆ, ತಂಡದ ಮೊತ್ತ 239 ರನ್ ಇರುವಾಗ ಪಾಂಡ್ಯ ವಿಕೆಟ್ ಒಪ್ಪಿಸಿದರು. ಬಳಿಕ ಇವರ ನಂತರ ಬಂದ ಆಟಗಾರರು ಬೇಗ ಆಟ ಮುಗಿಸಿದರು. ಇದರಿಂದ ಭಾರತ 48.5 ಓವರ್​ಗಳಲ್ಲಿ 266 ರನ್​ ಗಳಿಸಿ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು.

ಇನ್ನು ಪಾಕ್ ಪರ ಬೌಲಿಂಗ್ ಮಾಡಿದ ಶಾಹೀನ್ 4 ವಿಕೆಟ್ ಉರುಳಿಸಿದ್ರೆ, ಹರೀಶ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಪಡೆದರು. ಬಳಿಕ 267 ರನ್​ಗಳ ಸುಲಭ ಗುರಿ ಪಡೆದ ಪಾಕಿಸ್ತಾನ ತಂಡ ಬ್ಯಾಟಿಂಗ್​ ಆರಂಭಿಸುವುದಕ್ಕೂ ಮೊದಲೇ ಮೈದಾನದಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಇದರಿಂದ ಪಂದ್ಯವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯವನ್ನು ಮ್ಯಾನೇಜ್​ಮೆಂಟ್ ರದ್ದುಗೊಳಿಸಿತು. ಹೀಗಾಗಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕಗಳನ್ನು ನೀಡಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶಾಹೀನ್ ಆರ್ಭಟಕ್ಕೆ ಕೊಹ್ಲಿ, ರೋಹಿತ್ ಕ್ಲೀನ್ ಬೋಲ್ಡ್​.. ಭರ್ಜರಿ ಬ್ಯಾಟಿಂಗ್ ಮಾಡಿದ ಇಶನ್ ಕಿಶನ್, ಪಾಂಡ್ಯ

https://newsfirstlive.com/wp-content/uploads/2023/09/ISHAN_HARDHIK_KOHLI.jpg

Load More