ಭಾರತ- ಪಾಕ್ ಬಿಗ್ ಫೈಟ್.. ಕುತೂಹಲದಲ್ಲಿ ಫ್ಯಾನ್ಸ್
ಬೂಮ್ರಾ ಕಮ್ಬ್ಯಾಕ್ ಮಾಡಿದ್ರೂ ಟೆನ್ಶನ್.. ಟೆನ್ಶನ್
ಟೀಮ್ ಇಂಡಿಯಾ ಅಭಿಮಾನಿಗಳಿಗೆ ಕಾಡ್ತಿದೆ ಆತಂಕ
ಏಷ್ಯಾಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗ್ತಿದ್ದಂತೆ ಇಂಡೋ – ಪಾಕ್ ಫೈಟ್ನ ಫೀವರ್ ಕ್ರಿಕೆಟ್ ವಲಯದಲ್ಲಿ ಹೆಚ್ಚಾಗ್ತಿದೆ. ಇಂಡೋ -ಪಾಕ್ ಪಂದ್ಯ ಅಂದ ಮೇಲೆ ಯಾರು ಗೆಲ್ತಾರೆ ಅನ್ನೋ ಪ್ರಶ್ನೆಯೇ ಉದ್ಭವಿಸಲ್ಲ. ಭಾರತವೇ ಗೆಲ್ಬೇಕು ಅನ್ನೋದು ಅಭಿಮಾನಿಗಳ ಆಸೆ. ಆದ್ರೆ, ಇದು ಸಾಧ್ಯಾನಾ?.
ಮಹತ್ವದ ಏಷ್ಯಾಕಪ್ ಟೂರ್ನಿ ಆರಂಭವಾಗಿ 3 ದಿನ ಆಯಿತು. 2 ಪಂದ್ಯಗಳೂ ಮುಗಿದಿವೆ. ಆದ್ರೆ, ಇಡೀ ಜಗತ್ತೆ ಏಷ್ಯಾಕಪ್ನತ್ತ ತಿರುಗಿ ನೋಡ್ತಿದೆ. ಯಾಕಂದ್ರೆ, ಅಸಲಿ ಟೂರ್ನಿ ಆರಂಭವಾಗ್ತಿರೋದು ಇವತ್ತು.
ಇಂಡೋ -ಪಾಕ್ ಫೈಟ್ ನೋಡಲು ಫ್ಯಾನ್ಸ್ ಕಾತರ
ಪಲ್ಲೆಕೆಲೆಯಲ್ಲಿ ರಿಯಲ್ ದಂಗಲ್ ನೋಡಲು ಇಡೀ ವಿಶ್ವವೇ ಕಾದು ಕುಳಿತಿದ್ದು, ಇಂಡೋ-ಪಾಕ್ ಮ್ಯಾಚ್ ಫೀವರ್ ಈಗಾಗಲೇ ಹೆಚ್ಚಿದೆ. ಟೂರ್ನಿಯಲ್ಲಿ ಇಂಡಿಯಾ ಚಾಂಪಿಯನ್ ಆಗುತ್ತೋ.. ಇಲ್ವೋ.. ಪಾಕ್ ವಿರುದ್ಧ ಸೋಲಬಾರದು ಅನ್ನೋದಷ್ಟೇ ಫ್ಯಾನ್ಸ್ ಪ್ರಾರ್ಥನೆ.
ಟೀಮ್ ಇಂಡಿಯಾ ಅಭಿಮಾನಿಗಳಿಗೆ ಕಾಡ್ತಿದೆ ಆತಂಕ.!
ಗೊಂದಲದ ಗೂಡಾಗಿರೋ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಕಾನ್ಫಿಡೆನ್ಸ್ ಮಾಯವಾಗಿದೆ. ತಂಡದಲ್ಲಿರೋ ಸಮಸ್ಯೆಗಳೆ ಬಗೆಹರಿದಿಲ್ಲ. ಇದ್ರ ನಡುವೆ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಬೌಲಿಂಗ್ ಯುನಿಟ್ ಆತಂಕವನ್ನ ಹೆಚ್ಚಿಸಿದೆ. ಪಾಕ್ನ ಬಲಿಷ್ಠ ಬೌಲಿಂಗ್ ಅಟ್ಯಾಕ್ ಮುಂದೆ ನಮ್ಮ ಬೌಲರ್ಸ್ ದುರ್ಬಲವಾಗಿ ಕಾಣ್ತಿದೆ.
ಬೂಮ್ರಾ ಕಮ್ಬ್ಯಾಕ್ ಮಾಡಿದ್ರೂ ಟೆನ್ಶನ್.. ಟೆನ್ಶನ್.!
11 ತಿಂಗಳ ಬಳಿಕ ಬೂಮ್ರಾ ಕಮ್ಬ್ಯಾಕ್ ಮಾಡಿದ್ದಾರೆ. ಇದು ತಂಡದ ಬೌಲಿಂಗ್ ಬಲವನ್ನ ಹೆಚ್ಚಿಸಿದೆ. ಆದ್ರೆ, ಬೂಮ್ರಾ ಕಮ್ಬ್ಯಾಕ್ ಮಾಡಿದ್ರೂ, ಟೆನ್ಶನ್ ಕಡಿಮೆಯಾಗಿಲ್ಲ. ಯಾಕಂದ್ರೆ, ಇಂಜುರಿಯಿಂದ ವಾಪಾಸ್ಸಾಗಿರೋ ಬೂಮ್ರಾ, ಪರ್ಫಾಮೆನ್ಸ್ ಹಾಗೂ ಫಿಟ್ನೆಸ್ ಬಗ್ಗೆ ಕಾನ್ಫಿಡೆನ್ಸ್ ಇಲ್ಲ.
ಮೊಹಮ್ಮದ್ ಶಮಿ ಹಾಗೂ ಸಿರಾಜ್ ಡಿಪೆಂಡ್ ಆಗುವಂತೆ ಇಲ್ಲ. ಯಾಕಂದ್ರೆ, ಒತ್ತಡದ ಪಂದ್ಯಗಳಲ್ಲಿ ಸಿರಾಜ್ ಪರ್ಫಾಮೆನ್ಸ್ ಅಷ್ಟಕಷ್ಟೇ.. ಆಲ್ರೌಂಡರ್ ಶಾರ್ದೂಲ್ ಠಾಕೂರ್ ಪರ್ಫಾಮೆನ್ಸ್ ಕೂಡ ಅವರೇಜ್. ಹೀಗಾಗಿ ಪೇಸ್ ಬೌಲಿಂಗ್ ಅಟ್ಯಾಕ್ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸದ್ಯಕ್ಕೆ ಸ್ಪಿನ್ನರ್ ಕುಲ್ದೀಪ್ ಟೀಮ್ ಇಂಡಿಯಾ ಪಾಲಿನ ಗುಡ್ನ್ಯೂಸ್..
ಸಾಲಿಡ್ ಫಾರ್ಮ್ನಲ್ಲಿ ಟಾಪ್-3 ಪೇಸರ್ಸ್.!
ಒಂದೆಡೆ ಟೀಮ್ ಇಂಡಿಯಾ ಬೌಲಿಂಗ್ ಪಡೆಯಲ್ಲಿ ಆತ್ಮವಿಶ್ವಾಸವೇ ಇಲ್ಲದಿದ್ರೆ, ಪಾಕ್ ಪಡೆಯ ಪೇಸರ್ಸ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಶಾಹೀನ್ ಶಾ ಅಫ್ರಿದಿ, ಹ್ಯಾರೀಸ್ ರವೂಫ್, ನಸೀಮ್ ಶಾ 2023ರಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ್ದಾರೆ. ವಿಕೆಟ್ ಟೇಕಿಂಗ್, ಏಕಾನಮಿ ಎಲ್ಲದರಲ್ಲೂ ದಿ ಬೆಸ್ಟ್ ಅನಿಸಿಕೊಂಡಿದ್ದಾರೆ.
2023ರಲ್ಲಿ ಪಾಕ್ ಪೇಸರ್ಸ್
2023ರಲ್ಲಿ 10 ಇನ್ನಿಂಗ್ಸ್ ಆಡಿರುವ ಹ್ಯಾರಿಸ್ ರವೂಫ್ 5.62ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು 17 ವಿಕೆಟ್ ಕಬಳಿಸಿದ್ದಾರೆ. ಇನ್ನು, 8 ಇನ್ನಿಂಗ್ಸ್ ಆಡಿರುವ ನಸೀಮ್ ಶಾ 16 ವಿಕೆಟ್ ಕಬಳಿಸಿದ್ದು 4.68ರ ಎಕಾನಮಿ ಹೊಂದಿದ್ದಾರೆ. ಶಾಹಿನ್ ಅಫ್ರಿದಿ 5.40ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟು 17 ವಿಕೆಟ್ ಕಬಳಿಸಿದ್ದಾರೆ.
ಈ ಸೀಸನ್ನಲ್ಲಿ ಪಾಕ್ ಬೌಲರ್ಗಳು ನೀಡಿರುವ ಈ ಪರ್ಫಾಮೆನ್ಸ್, ಸದ್ಯ ಟೀಮ್ ಇಂಡಿಯಾ ಪಾಳಯದಲ್ಲಿ ಆತಂಕ ಹುಟ್ಟಿಸಿರೋದು ಸುಳ್ಳಲ್ಲ. ಹೀಗಾಗಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಎಚ್ಚರಿಕೆಯ ಆಟವಾಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ