newsfirstkannada.com

Asia Cup: ಇಂದು ಭಾರತ-ಶ್ರೀಲಂಕಾ ಮ್ಯಾಚ್​.. ಬಲಿಷ್ಠ ರೋಹಿತ್ ಪಡೆಗೆ ಸವಾಲೊಡ್ಡುತ್ತ ಲಂಕಾ ಪಡೆ

Share :

Published September 12, 2023 at 2:08pm

Update September 12, 2023 at 2:13pm

    ಬಾಂಗ್ಲಾವನ್ನು ಸೋಲಿಸಿ ಗೆಲುವಿನ ರುಚಿಯಲ್ಲಿರುವ ಶ್ರೀಲಂಕಾ

    ಸೂಪರ್- 4ರಲ್ಲಿ ಎರಡು ತಂಡಗಳು ಒಂದೊಂದು ಪಂದ್ಯ ವಿನ್​

    ನಿನ್ನೆ ಭಾರತದ ಬ್ಯಾಟ್ಸ್​ಮನ್ಸ್​ ಬ್ಯಾಟಿಂಗ್​ ಮತ್ತೆ ಮರುಕಳಿಸುತ್ತಾ?

ಪಾಕಿಸ್ತಾನವನ್ನು ಉಡೀಸ್ ಮಾಡಿರುವ ರೋಹಿತ್ ಶರ್ಮಾ ಪಡೆ ಶ್ರೀಲಂಕಾದ ವಿರುದ್ಧ ಇಂದು ಕೊಲೊಂಬೋದ ಆರ್​ ಪ್ರೇಮದಾಸ್ ಸ್ಟೇಡಿಯಂನಲ್ಲಿ ಪಂದ್ಯವಾಡಲಿದೆ. ಈಗಾಗಲೇ ಸೂಪರ್- 4ನಲ್ಲಿ ಭಾರತ, ಶ್ರೀಲಂಕಾ ಶುಭಾರಂಭ ಮಾಡಿದ್ದು ಬಾಂಗ್ಲಾ ಮಣಿಸಿರುವ ದಸುನ್ ಶನಕ ಟೀಮ್​ ಗೆಲುವಿನ ಅಲೆಯಲ್ಲಿದ್ದರೇ, ಇತ್ತ ನಿನ್ನೆ ಪಾಕ್​ ವಿರುದ್ಧ ಭಾರತ ಜಯಭೇರಿ ಬಾರಿಸಿದೆ. ಮಧ್ಯಾಹ್ನ 3 ಗಂಟೆಗೆ ನಡೆಯುವ ಹಣಾಹಣಿಯಲ್ಲಿ ಎರಡು ತಂಡಗಳು ಸಖತ್ ಪೈಪೋಟಿ ಕೊಡುವ ನೀರಿಕ್ಷೆ ಇದೆ.

ಏಷ್ಯಾಕಪ್​ನ ಸೂಪರ್​- 4ನ ಪಾಯಿಂಟ್ ಟೇಬಲ್​ನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು ಶ್ರೀಲಂಕಾ 2ನೇ ಸ್ಥಾನದಲ್ಲಿ ಇದೆ. ಇಂದು ಭಾರತ ಟಾಸ್ ಗೆದ್ದುಕೊಂಡರೇ ಬ್ಯಾಟಿಂಗ್ ಅನ್ನೇ ಆಯ್ದುಕೊಳ್ಳಬಹುದು. ಏಕೆಂದರೆ ನಿನ್ನೆಯ ಪಾಕ್​ ವಿರುದ್ಧ ಭಾರತದ ಆಟ ನೋಡಿದರೆ, ಮೊದಲ ಬ್ಯಾಟಿಂಗ್ ಮಾಡಿದವರಿಗೆ ಪಿಚ್ ಹೆಚ್ಚು ಅನುಕೂಲವಾಗಿತ್ತು. ಅಲ್ಲದೇ ಈ ಪಿಚ್​ ಸ್ಪಿನ್ನರ್​ಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಹೀಗಾಗಿ ಈ ಸ್ಟೇಡಿಯಂನಲ್ಲಿ ರನ್ ಚೇಸ್ ಮಾಡುವುದು ಕಷ್ಟಕರ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಬ್ಯಾಟಿಂಗ್

ಭಾರತದ ಬ್ಯಾಟ್ಸ್​ಮನ್​ಗಳು ಉತ್ತಮ ಫಾರ್ಮ್​ನಲ್ಲಿದ್ದು ಭರ್ಜರಿ ಬ್ಯಾಟಿಂಗ್ ಮಾಡುವ ನೀರಿಕ್ಷೆ ಇದೆ. ಓಪರ್ನಸ್​ ರೋಹಿತ್ ಮತ್ತು ಶುಭ್​ಮನ್​ ಗಿಲ್ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ನಿನ್ನೆಯೇ ಸೆಂಚುರಿ ಸಿಡಿಸಿರುವ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಕೂಡ ಅಬ್ಬರದ ಬ್ಯಾಟಿಂಗ್ ಮಾಡುವ ಉತ್ಸುಕದಲ್ಲಿದ್ದಾರೆ. ಆದರೆ ತವರಿನಲ್ಲಿ ಲಂಕನ್ನರನ್ನು ಕಟ್ಟಿ ಹಾಕಬೇಕು ಎನ್ನುವುದೇ ರೋಹಿತ್ ಪಡೆಯ ಮುಂದಿನ ಸವಾಲಾಗಿದೆ.

ಆರ್​ ಪ್ರೇಮದಾಸ್ ಸ್ಟೇಡಿಯಂ ಸುತ್ತ ಮಳೆ ಬರುತ್ತ..?

ಶ್ರೀಲಂಕಾ-ಭಾರತದ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇದೆ. ಸಂಜೆ 7 ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು ಮಳೆ ಬಂದ ಮೇಲೆ ಆ ಬಗ್ಗೆ ಗೊತ್ತಗಲಿದೆ. ಆದರೆ, ರಾತ್ರಿ 10 ಗಂಟೆ ನಂತರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮಳೆಯಿಂದ ಈ ಪಂದ್ಯಕ್ಕೆ ಹೆಚ್ಚಿನ ಸಮಸ್ಯೆ ಏನು ಇಲ್ಲ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup: ಇಂದು ಭಾರತ-ಶ್ರೀಲಂಕಾ ಮ್ಯಾಚ್​.. ಬಲಿಷ್ಠ ರೋಹಿತ್ ಪಡೆಗೆ ಸವಾಲೊಡ್ಡುತ್ತ ಲಂಕಾ ಪಡೆ

https://newsfirstlive.com/wp-content/uploads/2023/09/VIRAT_KOHLI_BAT.jpg

Load More