newsfirstkannada.com

ಏನಾಗಿದೆ ರಾಹುಲ್​ಗೆ? ಮೊದಲೆರೆಡು ಪಂದ್ಯಗಳಿಗೆ ಅಲಭ್ಯ! ಸೆಪ್ಟೆಂಬರ್​ 4ಕ್ಕೆ ಭವಿಷ್ಯ ನಿರ್ಧಾರ

Share :

30-08-2023

    KL ಅಲಭ್ಯತೆ ಮ್ಯಾನೇಜ್​ಮೆಂಟ್​ಗೆ ತಲೆನೋವು

    ಬ್ಯಾಟಿಂಗ್​ ಆರ್ಡರ್​ನಲ್ಲಿ ಭಾರೀ ಬದಲಾವಣೆ..?

    ಇಶಾನ್​ಗಾಗಿ ಸ್ಥಾನ ತ್ಯಾಗ ಮಾಡ್ತಾರಾ ರೋಹಿತ್​..?

ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಬಿಗ್​ ಶಾಕ್ ಎದುರಾಗಿದೆ. ಕೆ.ಎಲ್.ರಾಹುಲ್, ಅಲಭ್ಯತೆ ಟೀಮ್ ಇಂಡಿಯಾದ ಲೆಕ್ಕಾಚಾರಗಳನ್ನ ಉಲ್ಟಾ ಮಾಡಿದೆ. ಇದರಿಂದ ಟೀಮ್​ ಮ್ಯಾನೇಜ್​ಮೆಂಟ್​​ಗೆ ಆಗಿರೋ ತಲೆನೋವು ಅಷ್ಟಿಷ್ಟಲ್ಲ. ಹೀಗಾಗಿ, ಇಡೀ ಬ್ಯಾಟಿಂಗ್​ ಆರ್ಡರ್​ ಬದಲಾದ್ರೂ ಅಚ್ಚರಿ ಪಡಬೇಕಿಲ್ಲ.

ಮೊದಲ 2 ಪಂದ್ಯಗಳಿಂದ ಕೆ.ಎಲ್​.ರಾಹುಲ್​ ಔಟ್​​..!

ಏಷ್ಯಾಕಪ್​ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಬಿಗ್​​ ಶಾಕ್ ಎದುರಾಗಿದೆ. ಅಭ್ಯಾಸದ ಅಖಾಡದಲ್ಲಿ ಬ್ಯಾಟಿಂಗ್​, ಕೀಪಿಂಗ್​ ಎಲ್ಲದರಲ್ಲೂ ಮಿಂಚಿದ್ದ ರಾಹುಲ್​, ಕಂಪ್ಲೀಟ್​ ಫಿಟ್​ ಎಂದೇ ಹೇಳಲಾಗಿತ್ತು. ಆದರೆ, ಈಗ ನೋಡಿದ್ರೆ, ರಾಹುಲ್​ ಟೂರ್ನಿಯ ಮೊದಲ 2 ಪಂದ್ಯದಿಂದ ಕಿಕ್​​ಔಟ್​ ಆಗಿದ್ದಾರೆ. ಸ್ವತಃ ಹೆಡ್ ಕೋಚ್ ರಾಹುಲ್ ದ್ರಾವಿಡ್ ಈ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ.

ಸೆಪ್ಟೆಂಬರ್​ 4ಕ್ಕೆ ಕನ್ನಡಿಗನ ಭವಿಷ್ಯ ನಿರ್ಧಾರ..?

ಹೌದು.! ಐಪಿಎಲ್​ ವೇಳೆ ಇಂಜುರಿಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆ.ಎಲ್.ರಾಹುಲ್ ರನ್ನ ಕಂಪ್ಲೀಟ್​ ಫಿಟ್​ ಆಗೋಕೆ ಮುನ್ನವೇ ಏಷ್ಯಾಕಪ್​​ಗೆ ಆಯ್ಕೆ ಮಾಡಲಾಗಿತ್ತು. ತಂಡಕ್ಕೆ ಆಯ್ಕೆ ಮಾಡಿದಾಗ್ಲೆ, ಪಾಕ್​​ ವಿರುದ್ಧದ ಪಂದ್ಯವನ್ನ ಅಡೋದು ಅನುಮಾನ ಅಂತಾ ಸ್ವತಃ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದ್ರು. ಇದೀಗ ಟೀಮ್ ಇಂಡಿಯಾ ಕ್ಯಾಂಪ್​ ಮುಕ್ತಾಯದ ಬೆನ್ನಲ್ಲೇ ಕೆ.ಎಲ್.ರಾಹುಲ್, ಪಾಕ್ ಹಾಗೂ ನೇಪಾಳ ವಿರುದ್ಧದ ಮೊದಲೆರೆಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮತ್ತೆ ಎನ್​​ಸಿಎಗೆ ಹಿಂತಿರುಗಲಿರುವ ಕೆ.ಎಲ್.ರಾಹುಲ್, ಸೆಪ್ಟೆಂಬರ್ 4ರಂದು ಮರು ಫಿಟ್ನೆಸ್ ಟೆಸ್ಟ್​​​ಗೆ ಒಳಪಡಲಿದ್ದಾರೆ.

ಟೀಮ್ ಇಂಡಿಯಾ ಕ್ಯಾಂಪ್​​ನಲ್ಲಿ ವಿಕೆಟ್ ಕೀಪಿಂಗ್ & ಬ್ಯಾಟಿಂಗ್ ಮಾಡಿ ಆ್ಯಕ್ಟೀವ್ ಆಗಿದ್ದ ರಾಹುಲ್, ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿರುವುದು ಭಾರೀ ಹೊಡೆತವನ್ನೇ ಕೊಟ್ಟಿದೆ. ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಮೇಲೆ ಭಾರೀ ಪರಿಣಾಮ ಬೀರುವಂತೆ ಮಾಡಿದೆ.

ವಿಕೆಟ್​ ಕೀಪರ್​ ಕೋಟಾದಲ್ಲಿ ಕಿಶನ್​ಗೆ ಸ್ಥಾನ ಫಿಕ್ಸ್​.!

ಸದ್ಯ ಕೆ.ಎಲ್.ರಾಹುಲ್ ಅಲಭ್ಯತೆ ಇಶಾನ್ ಕಿಶನ್​ರ ಅದೃಷ್ಟ ಬದಲಾಗುವಂತೆ ಮಾಡಿದೆ. ಸೆಕೆಂಡ್ ಚಾಯ್ಸ್ ವಿಕೆಟ್ ಕೀಪರ್ ಆಗಿದ್ದ ಇಶಾನ್, ಈಗ ಗ್ಲೌಸ್ ತೊಟ್ಟು ಕಣಕ್ಕಿಳಿಯೋದು ಬಹುತೇಕ ಫಿಕ್ಸ್ ಆಗಿದೆ. ಆದರೆ, ಇಶಾನ್ ಯಾವ ಸ್ಲಾಟ್​ನಲ್ಲಿ ಆಡ್ತಾರೆ ಅನ್ನೋದೇ ಯಕ್ಷಪ್ರಶ್ನೆಯಾಗಿದೆ.!

ಬ್ಯಾಟಿಂಗ್​ ಆರ್ಡರ್​ನಲ್ಲಿ ಆಗುತ್ತಾ ಭಾರೀ ಬದಲಾವಣೆ..?

ಕೆ.ಎಲ್.ರಾಹುಲ್ ಅಲಭ್ಯತೆ ಟೀಮ್ ಮ್ಯಾನೇಜ್​ಮೆಂಟ್​​ಗೆ ತಲೆನೋವಾಗಿ ಮಾರ್ಪಡಲಿದೆ. ಏಕಂದ್ರೆ, 5ನೇ ಸ್ಲಾಟ್​ನಲ್ಲಿ ಬ್ಯಾಟ್ ಬೀಸಬೇಕಿದ್ದ ಕೆ.ಎಲ್.ರಾಹುಲ್​​ ​ಬದಲು ಮಿಡಲ್ ಆರ್ಡರ್​ನಲ್ಲಿ ಬ್ಯಾಟಿಂಗ್​ ನಡೆಸೋದು ಯಾರು ಎಂಬ ಪ್ರಶ್ನೆ ಕಾಡಲಿದೆ. ಇಶಾನ್​ ಕಿಶನ್​ ಮಿಡಲ್​ ಆರ್ಡರ್​ನಲ್ಲಿ ಆಡ್ತಾರಾ, ಓಪನರ್​​ ಆಗ್ತಾರಾ ಅನ್ನೋದು ಪ್ರಶ್ನೆಯಾಗಿದೆ.

ಗಿಲ್​​-ಕಿಶನ್​ ಓಪನರ್ಸ್​​, ಮಿಡಲ್​ ಆರ್ಡರ್​ನಲ್ಲಿ ರೋಹಿತ್​..?

ಶುಭ್​ಮನ್​ಗಿಲ್​ ಆರಂಭಿಕನಾಗಿ ಒಂದು ಸ್ಲಾಟ್​ನಲ್ಲಿ ಆಡಿದ್ರೆ, ಇನ್ನೊಂದು ಸ್ಲಾಟ್​ನಲ್ಲಿ ರೋಹಿತ್​ ಆಡೋದು ಈ ಹಿಂದಿನ ಪ್ಲಾನ್​ ಆಗಿತ್ತು. ಆದ್ರೆ, ಕಿಶನ್​ ಏನಾದ್ರೂ ಒಪನರ್​ ಆಗಿ ಕಣಕ್ಕಿಳಿದ್ರೆ, ರೋಹಿತ್​ ಮಿಡಲ್​ ಆರ್ಡರ್​ನಲ್ಲಿ ಆಡಲಿದ್ದಾರೆ. ಆಲೂರಿನಲ್ಲಿ ನಡೆದ ಅಭ್ಯಾಸದ ವೇಳೆಯೂ ರೋಹಿತ್​, ಶ್ರೇಯಸ್​​ ಅಯ್ಯರ್​​ ಜೊತೆಗಾರನಾಗಿ ಬ್ಯಾಟಿಂಗ್​ ನಡೆಸಿದ್ರು. ಹೀಗೆ ಅಭ್ಯಾಸ ನಡೆಸಿದ್ರ ಸೀಕ್ರೆಟ್​​, ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆ ಎನ್ನಲಾಗ್ತಿದೆ.

ಸಂಜು ಸ್ಯಾಮ್ಸನ್ ಲಾಟರಿ, ಫ್ಲೈಟ್​ ಟಿಕೆಟ್​ ಪಕ್ಕಾ.!

ಕೆ.ಎಲ್​.ರಾಹುಲ್ ಫಿಟ್ನೆಸ್ ಇಶ್ಯು, ಸಂಜು ಸ್ಯಾಮ್ಸನ್​​ಗೆ ಜಾಕ್​ಪಾಟ್​ ಹೊಡೆಯುವಂತೆ ಮಾಡಿದೆ. ಯಾಕಂದ್ರೆ, ರಾಹುಲ್ ಭವಿಷ್ಯ ಸೆಪ್ಟೆಂಬರ್​ 4ಕ್ಕೆ ನಿರ್ಧಾರವಾಗಲಿದೆ. ಹೀಗಾಗಿ ಟ್ರಾವೆಲ್​ ರಿಸರ್ವ್​ ಆಟಗಾರನಾಗಿದ್ದ ಸಂಜು ಸ್ಯಾಮ್ಸನ್​ಗೆ ಲಂಕಾ ಫ್ಲೈಟ್​ ಟಿಕೆಟ್​ ಸಿಗುವಂತೆ ಮಾಡಿದೆ. ಒಂದು ವೇಳೆ ಕೆ.ಎಲ್.ರಾಹುಲ್ ಸಂಪೂರ್ಣ ಫಿಟ್ನೆಸ್​ ಸಾಧಿಸುವಲ್ಲಿ ವಿಫಲವಾದ್ರೆ, ಏಷ್ಯಾಕಪ್ ಜೊತೆ ಏಕದಿನ ವಿಶ್ವಕಪ್ ಟಿಕೆಟ್​ ಕೂಡ ಸಂಜುಗೆ ಸಿಗಲಿದೆ.

ಟೀಮ್ ಇಂಡಿಯಾ ಜೊತೆ ಸಿಂಹಳೀಯರ ನಾಡಿಗೆ ಹಾರಬೇಕಿದ್ದ ರಾಹುಲ್, ಇನ್ನೂ, ಮೂರ್ನಾಲ್ಕು ದಿನ ಬೆಂಗಳೂರಿನಲ್ಲೇ ಉಳಿಯಲಿದ್ದಾರೆ. ಈಗಾಗಲೇ ಮೊದಲ 2 ಪಂದ್ಯದಿಂದ ಔಟ್​ ಆಗಿರುವ ರಾಹುಲ್​, ಉಳಿದ ಪಂದ್ಯಕ್ಕಾದ್ರೂ ಲಭ್ಯರಾಗ್ತಾರಾ.? ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಏನಾಗಿದೆ ರಾಹುಲ್​ಗೆ? ಮೊದಲೆರೆಡು ಪಂದ್ಯಗಳಿಗೆ ಅಲಭ್ಯ! ಸೆಪ್ಟೆಂಬರ್​ 4ಕ್ಕೆ ಭವಿಷ್ಯ ನಿರ್ಧಾರ

https://newsfirstlive.com/wp-content/uploads/2023/08/K-L-rahul-1.jpg

Load More