ಗಿಲ್ಗೆ ಬ್ಯಾಟಿಂಗ್ ಟಿಪ್ಸ್ ನೀಡಿದ 'ರನ್ ಮಾಸ್ಟರ್'
ಸುದೀರ್ಘ ಚರ್ಚೆ..ಪ್ರಿನ್ಸ್ಗೆ ಕೊಹ್ಲಿಯ ಪಾಠವೇನು..?
ಗಿಲ್ ಬ್ಯಾಟಿಂಗ್ನ ಸೂಕ್ಷ್ಮವಾಗಿ ಗಮನಿಸಿದ ಕೊಹ್ಲಿ.!
ಶುಭ್ಮನ್ ಗಿಲ್ ಏಷ್ಯಾಕಪ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇಂದಿನಿಂದ ಟೂರ್ನಿ ಆರಂಭಗೊಳ್ಳಲಿದ್ದು ಪ್ರಿನ್ಸ್ ಶುಭ್ಮನ್ಗೆ ಕಿಂಗ್ ಕೊಹ್ಲಿ ಪಾಠ ಮಾಡಿದ್ದಾರೆ. ರನ್ ಮಾಸ್ಟರ್ ಪಾಠ ಕೇಳಿ ಗಿಲ್ ಜೋಶ್ ಡಬಲ್ ಆಗಿದೆ. ಪ್ರಿನ್ಸ್ಗೆ ಕಿಂಗ್ ಮಾಡಿದ ಪಾಠದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಏಷ್ಯಾಕಪ್..! ಏಷ್ಯಾದ ಅಧಿಪತಿ ಪಟ್ಟಕ್ಕಾಗಿ ನಡೆಯುವ ಮಹಾಕದನ. ಈ ಏಷ್ಯಾ ಬ್ಯಾಟಲ್ನಲ್ಲಿ ರಾಕಿಂಗ್ ಪರ್ಫಾಮೆನ್ಸ್ ನೀಡಲು ಯಂಗ್ಗನ್ ಶುಭ್ಮನ್ ಗಿಲ್ ಸಜ್ಜಾಗಿದ್ದಾರೆ. ಆರು ದಿನಗಳ ಕ್ಯಾಂಪ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಿದ್ದು, ಹೈ ಪ್ರೊಫೈಲ್ ಟೂರ್ನಿಯಲ್ಲಿ ದಮ್ದಾರ್ ಪರ್ಫಾಮೆನ್ಸ್ ನೀಡುವ ಇರಾದೆಯಲ್ಲಿದ್ದಾರೆ.
ಕಳೆದ 6 ಇನ್ನಿಂಗ್ಸ್ಗಳಿಂದ ಗಿಲ್ ಸಿಡಿಸಿರೋದು 1 ಅರ್ಧಶತಕ.!
ಈ ವರ್ಷಾರಂಭದಲ್ಲಿ ಉತ್ತಮ ಪ್ರದರ್ಶನ ನಡೆಸಿ ದರ್ಬಾರ್ ನಡೆಸಿದ್ದ ಗಿಲ್ ಸದ್ಯ ಯಾಕೋ ಸೈಲೆಂಟಾಗಿದ್ದಾರೆ. ಕಳೆದ ಆರು ಏಕದಿನ ಪಂದ್ಯಗಳಿಂದ ಬರೀ 188 ರನ್ ಹೊಡೆದಿದ್ದಾರೆ. ಈ ಪೈಕಿ ಬರೀ ಒಂದು ಅರ್ಧಶತಕವನ್ನಷ್ಟೇ ಬಾರಿಸಿದ್ದಾರೆ. ಇಂದಿನಿಂದ ಏಷ್ಯಾಕಪ್ ಆರಂಭಗೊಳ್ಳಲಿದ್ದು, ಗಿಲ್ ಮತ್ತೆ ಜಬರ್ದಸ್ತ್ ಪ್ರದರ್ಶನ ನೀಡಬೇಕಿದೆ. ಹೀಗಾಗಿ ಪ್ರಿನ್ಸ್ ಶುಭ್ಮನ್ ಕಿಂಗ್ ಕೊಹ್ಲಿಯ ಮೊರೆ ಹೋಗಿದ್ದಾರೆ.
ಏಷ್ಯಾ ಕದನಕ್ಕೂ ಮುನ್ನ ಪ್ರಿನ್ಸ್ಗೆ ಕಿಂಗ್ ಪಾಠ
ಶುಭ್ಮನ್ ಗಿಲ್ ಏಷ್ಯಾಕಪ್ನಲ್ಲಿ ಭಾರತಕ್ಕೆ ಬ್ಯಾಟಿಂಗ್ ಶಕ್ತಿ. ಒಮ್ಮೆ ಕ್ರೀಸ್ಕಚ್ಚಿ ನಿಂತ್ರೆ ಸಾಕು ಬೌಲರ್ಗಳ ಮಾರಣಹೋಮವೇ ನಡೆಯುತ್ತೆ. ಇನ್ನು, ಏಷ್ಯಾಕಪ್ ಅಂದ್ರೆ ಕೇಳ್ಬೇಕಾ ಹೇಳಿ ? ಗಿಲ್ ಮತ್ತಷ್ಟು ಡೇಂಜರಸ್.! ಇಂತಾ ಪ್ರಿನ್ಸ್ಗೆ ಏಷ್ಯಾಕಪ್ ದಂಗಲ್ ಆರಂಭಕ್ಕೂ ಮುನ್ನವೇ ಕಿಂಗ್ ಕೊಹ್ಲಿ ಬ್ಯಾಟಿಂಗ್ಸ್ ಟಿಪ್ಸ್ ನೀಡಿದ್ದಾರೆ. ಹೀಗಾಗಿ ಗಿಲ್ ಮೇಲಿನ ಎಕ್ಸ್ಪೆಕ್ಟೇಶನ್ ಇನ್ನಷ್ಟು ಹೆಚ್ಚಾಗಿದೆ.
ದ್ರಾವಿಡ್ ಜೊತೆ ಗಿಲ್ ಬ್ಯಾಟಿಂಗ್ ಮೇಲೆ ಹದ್ದಿನ ಕಣ್ಣು..!
ಟೀಮ್ ಇಂಡಿಯಾದ ಏಷ್ಯಾಕಪ್ ಪೂರ್ವಭಾವಿ ತಯಾರಿ ಕ್ಯಾಂಪ್ ನಿನ್ನೆಗೆ ಮುಗಿದಿದೆ. ಫೈನಲ್ ಡೇ ಕೊಹ್ಲಿ-ಗಿಲ್ ಜೊತೆ ಬಹಳಷ್ಟು ಮಾತುಕತೆ ನಡೆಸಿದ್ರು. ಯಂಗ್ಸ್ಟರ್ಗಳನ್ನ ಸದಾ ಹುರಿದುಂಬಿಸೋ ಕೊಹ್ಲಿ ನೆಟ್ಸ್ನಲ್ಲಿ ಗಿಲ್ ಬಳಿ ತೆರಳಿ ಕೆಲ ಸಮಯ ಮಾತುಕತೆ ನಡೆಸಿದ್ರು. ಆ ಮೂಲಕ ಏಷ್ಯಾಕಪ್ ಸಮರದಲ್ಲಿ ಒತ್ತಡವನ್ನ ಹೇಗೆ ಮೆಟ್ಟಿನಿಲ್ಲಬೇಕು ಹಾಗೂ ಬ್ಯಾಟಿಂಗ್ ಅಪ್ರೋಚ್ ಹೇಗಿರಬೇಕು ಅನ್ನೋದರ ಬಗ್ಗೆ ಉಪಯುಕ್ತ ಬ್ಯಾಟಿಂಗ್ಸ್ ಸಲಹೆ ನೀಡಿದ್ದಾರೆ.
ಇನ್ನು ಪ್ರತ್ಯೇಕವಾಗಿ ಗಿಲ್ ಜೊತೆ ಮಾತುಕತೆ ನಡೆಸಿದ ಕೊಹ್ಲಿ ಅಷ್ಟಕ್ಕೆ ಸುಮ್ಮನಾಗಲಿಲ್ಲ. ನೆಟ್ಸ್ನಲ್ಲಿ ಪಂಜಾಬ್ ಪುತ್ತರ್ ಬ್ಯಾಟಿಂಗ್ ನಡೆಸ್ತಿದ್ರೆ ಇತ್ತ ಕೊಹ್ಲಿ ಗಿಲ್ರ ಬ್ಯಾಟಿಂಗ್ ಅನ್ನ ಕಂಪ್ಲೀಟ್ ಆಗಿ ವಾಚ್ ಮಾಡಿದ್ರು. ಅದು ಒಬ್ಬರೇ ಅಲ್ಲ. ಹೆಡ್ಕೋಚ್ ರಾಹುಲ್ ದ್ರಾವಿಡ್ ಜೊತೆ ಸೇರಿಕೊಂಡು ಗಿಲ್ ಬ್ಯಾಟಿಂಗ್ ವೈಖರಿಯನ್ನ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ.
ಕೊಹ್ಲಿ ಪಂಜಾಬ್ ಪುತ್ತರ್ಗೆ ಟಿಪ್ಸ್ ನೀಡಿದ್ಯಾಕೆ..?
ಈ ಪ್ರಶ್ನೆ ಬಹುತೇಕರನ್ನ ಕಾಡೋದು ಸಹಜ. ಕಿಂಗ್ ಕೊಹ್ಲಿ ಎಲ್ಲರನ್ನೂ ಬಿಟ್ಟು ಗಿಲ್ಗೆ ಬ್ಯಾಟಿಂಗ್ ಪಾಠ ಮಾಡಲು ಕಾರಣವಿದೆ. ಕಿಂಗ್ ಕೊಹ್ಲಿ ಯಶೋಗಾಥೆ ಎಂತವರಿಗೂ ಸ್ಪೂರ್ತಿ. 15 ವರ್ಷಗಳ ಕ್ರಿಕೆಟ್ ಕರಿಯರ್ನಲ್ಲಿ ಏಕದಿನ-ಟಿ20 ಸೇರಿ ಒಟ್ಟು 8 ವಿಶ್ವಕಪ್ಗಳನ್ನ ಆಡಿದ್ದಾರೆ. ಏಷ್ಯಾಕಪ್ ಅನುಭವವೂ ಸಾಕಷ್ಟಿದೆ. ಬಿಗ್ ಸ್ಟೇಜ್ನಲ್ಲಿ ಹೇಗೆ ಆಡಬೇಕು ? ಎದುರಾಳಿ ತಂಡವನ್ನ ಹೇಗೆ ಎದುರಿಸಬೇಕು ಅನ್ನೋದು ಚೆನ್ನಾಗಿ ಗೊತ್ತಿರುತ್ತೆ. ಈ ಎಲ್ಲಾ ಅನುಭವದ ಪಾಠವನ್ನ ವಿರಾಟ್, ಗಿಲ್ಗೆ ಮಾಡಿದ್ದಾರೆ.
ಏಷ್ಯಾಕಪ್ ಹಾಗೂ ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಶುಭ್ಮನ್ ರಗಢ್ ಫಾರ್ಮ್ ಟೀಮ್ ಇಂಡಿಯಾಗೆ ಅತ್ಯಗತ್ಯ. ಹೀಗಾಗಿಯೇ ಟೂರ್ನಿ ಶುರುವಿಗೂ ಮುನ್ನವೇ ಕಿಂಗ್ ಕೊಹ್ಲಿ, ಪ್ರಿನ್ಸ್ ಶುಭ್ಮನ್ಗೆ ಬ್ಯಾಟಿಂಗ್ ಟಿಪ್ಸ್ ನೀಡಿದ್ದಾರೆ. ವಿರಾಟ್ರ ಬ್ಯಾಟಿಂಗ್ ಟಿಪ್ಸ್ ಅನ್ನ ಗಿಲ್ ಎನ್ಕ್ಯಾಶ್ ಮಾಡಿಕೊಳ್ತಾರಾ.? ಅನ್ನೋದಕ್ಕೆ ಏಷ್ಯಾಕಪ್ ಸಮರದಲ್ಲಿ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ