ನಾಳೆ ಭಾರತ ಮತ್ತು ಪಾಕ್ ನಡುವಿನ ಮೊದಲ ಜಿದ್ದಾಜಿದ್ದಿ
ಸಿಂಹಳೀಯರ ನಾಡಲ್ಲಿ ಇಂಡೋ -ಪಾಕ್ ತಂಡಗಳ ಹೋರಾಟ
ಟ್ರೋಫಿ ಗೆಲ್ಲೋ ಲೆಕ್ಕಾಚಾರದಲ್ಲಿದೆ ಟೀಂ ಇಂಡಿಯಾ
ಪಾಕ್ ವಿರುದ್ಧದ ಕಾಳಗದಲ್ಲಿ ಟೀಮ್ ಇಂಡಿಯಾನೇ ಗೆಲ್ಲೋ ಫೇವರಿಟ್ ಅನ್ನೋದ್ರಲ್ಲಿ ನೋ ಡೌಟ್!. ಹಾಗಂತ, ಮೈ ಮರೆಯುವಂತಿಲ್ಲ. ಆತ್ಮವಿಶ್ವಾಸ ಒಕೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ್ರೆ ಕಷ್ಟ ಕಷ್ಟ..! ಪಾಕ್ ಪಡೆಯನ್ನ ನಗ್ಲೆಟ್ ಮಾಡುವಂತೆ ಇಲ್ಲ.!
ವಿಶ್ವ ಕ್ರಿಕೆಟ್ ಲೋಕ ತುದಿಗಾಲಲ್ಲಿ ನಿಂತು ಕಾಯ್ತಿರುವ ಬದ್ಧವೈರಿಗಳ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಸಿಂಹಳೀಯರ ನಾಡಲ್ಲಿ ನಾಳೆ ಇಂಡೋ -ಪಾಕ್ ತಂಡಗಳ ರಣಾಂಗಣಕ್ಕಿಳಿಯಲಿವೆ. ಇಂಡೋ -ಪಾಕ್ ಪಂದ್ಯ ಅಂದಮೇಲೆ ಅದರ ಬಗ್ಗೆ ಜಾಸ್ತಿ ವಿವರಿಸೋ ಅಗತ್ಯಾನೇ ಇಲ್ಲ. ಉಭಯ ತಂಡಗಳಿಗೂ ಗೆಲುವೊಂದೆ ಗುರಿ.! ಸೋಲು ಅನ್ನೋ ಪದವನ್ನೇ ಸಹಿಸಲ್ಲ..! ಇಂತಾ ಜಿದ್ದಾಜಿದ್ದಿನ ಕದನಕ್ಕೆ ವೇದಿಕೆ ಸಜ್ಜಾಗಿದೆ.
ಪೆಲ್ಲೆಕೆಲೆಯಲ್ಲಿ ನಾಳೆ ನಡೆಯಲಿರೋ ಪಂದ್ಯದಲ್ಲೂ ಭಾರತವೇ ಗೆಲ್ಲೋ ಫೇವರಿಟ್ ಆಗಿ ಗುರುತಿಸಿಕೊಂಡಿದೆ. ಟೀಮ್ ಇಂಡಿಯಾದ ಸ್ಟಾರ್ಗಳೆಲ್ಲಾ ಸಾಲಿಡ್ ಫಾರ್ಮ್ನಲ್ಲಿರೋದು ತಂಡದಲ್ಲೂ ಆತ್ಮವಿಶ್ವಾಸ ಹೆಚ್ಚಿಸಿದೆ. ಭರ್ಜರಿ ಅಭ್ಯಾಸವನ್ನ ನಡೆಸಿರೋ ರೋಹಿತ್ ಪಡೆ, ಟ್ರೋಫಿ ಗೆಲ್ಲೋ ಲೆಕ್ಕಾಚಾರದಲ್ಲಿ ಶ್ರೀಲಂಕಾಗೆ ಕಾಲಿಟ್ಟಿದೆ. ಆದರೆ ಟ್ರೋಫಿ ಗೆಲುವಿನ ಕನಸು ನನಸಾಗಬೇಕಂದ್ರೆ ಎಚ್ಚರಿಕೆಯ ಆಟ ಅನಿವಾರ್ಯವಾಗಿದೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ್ರೆ, ಪಾಕ್ ವಿರುದ್ಧದ ಗೆಲುವೇ ಕಷ್ಟವಾಗಲಿದೆ.
ಸಾಲಿಡ್ ಫಾರ್ಮ್ನಲ್ಲಿ ಕ್ಯಾಪ್ಟನ್ ಬಾಬರ್ ಅಝಂ.!
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂನ ಟೀಮ್ ಇಂಡಿಯಾಗಿರೋ ಬಿಗ್ಥ್ರೆಟ್. ಸಾಲಿಡ್ ಫಾರ್ಮ್ ಕಂಡುಕೊಂಡಿರುವ ಬಾಬರ್, ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ 151 ರನ್ ಚಚ್ಚಿ ಆರ್ಭಟಿಸಿದ್ದಾರೆ. ಬಾಬರ್ ಶತಕ ಸಿಡಿಸಿದ್ದು ನೇಪಾಳದ ವಿರುದ್ಧವಾದ್ರೂ, ಸಂದೇಶ ರವಾನಿಸಿರೋದು ಟೀಮ್ ಇಂಡಿಯಾಗೆ!.
ಸೈಲೆಂಟ್ ಕಿಲ್ಲರ್ ಇಫ್ತಿಕಾರ್ ಅಹಮ್ಮದ್.!
ಸ್ವಲ್ಪ ಯಾಮಾರಿದ್ರೂ, ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕಟ್ಟಬಲ್ಲ ಸಾಮರ್ಥ್ಯ ಇಫ್ತಿಕಾರ್ ಅಹಮ್ಮದ್ಗಿದೆ. ಇದಕ್ಕೆ ನೇಪಾಳ ವಿರುದ್ಧದ ಪಂದ್ಯವೇ ಬೆಸ್ಟ್ ಎಕ್ಸಾಂಪಲ್.! ನೇಪಾಳದ ವಿರುದ್ಧ ಕ್ರೂಶಿಯಲ್ ಟೈಮ್ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕಟ್ಟಿದ ಇಫ್ತಿಕಾರ್, ಸೆಂಚುರಿ ಸಿಡಸಿ ಆರ್ಭಟಿಸಿದ್ರು. ಹೀಗಾಗಿ ಇಫ್ತಿಕಾರ್ ಅಹಮ್ಮದ್ರನ್ನ ಟೀಮ್ ಇಂಡಿಯಾ ಪಡೆ ಲಘುವಾಗಿ ಪರಿಗಣಿಸುವಂತಿಲ್ಲ.
ಡೇಂಜರಸ್ ವೆಪನ್ ಮೊಹಮ್ಮದ್ ರಿಜ್ವಾನ್.!
ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಕೂಡ ಏಷ್ಯಾಕಪ್ನ ಮೊದಲ ಪಂದ್ಯದಲ್ಲೇ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ಡಿಸೇಂಟ್ ಬ್ಯಾಟಿಂಗ್ ನಡೆಸಿರುವ ರಿಜ್ವಾನ್ ಕಟ್ಟಿ ಹಾಕಲು ರೋಹಿತ್ & ಟೀಂ ವಿಶೇಷ ಗೇಮ್ಪ್ಲಾನ್ ರೂಪಿಸಲೇಬೇಕು. ಯಾಕಂದ್ರೆ, ಸಾಲಿಡ್ ಫಾರ್ಮ್ನಲ್ಲಿರೋ ರಿಜ್ವಾನ್, ಭಾರತದ ವಿರುದ್ಧ ಪಂದ್ಯ ಅಂದ್ರೆ, ತೊಡೆ ತಟ್ಟಿ ನಿಲ್ತಾರೆ. ಇದಕ್ಕೆ 2021ರ ಟಿ20 ವಿಶ್ವಕಪ್ ಪಂದ್ಯಕ್ಕಿಂತ ಉದಾಹರಣೆ ಬೇಕಾ..?
ಗುಡ್ ಟಚ್ನಲ್ಲಿ ಸ್ಪಿನ್ ಮಾಸ್ಟರ್ ಶದಾಬ್ ಖಾನ್.!
ಪಾಕಿಸ್ತಾನದ ಸ್ಪಿನ್ನರ್ ಶದಾಬ್ ಖಾನ್ ಕೂಡ ಅಮೋಘ ಲಯದಲ್ಲಿದ್ದಾರೆ. ಪಾಕಿಸ್ತಾನ ಪಡೆಯ ಗೇಮ್ಚೇಂಜರ್ ಆಗ ಗುರುತಿಸಿಕೊಂಡಿರೋ ಶಬಾದ್, ಮೊದಲ ಪಂದ್ಯದಲ್ಲೇ 4 ವಿಕೆಟ್ ಉರುಳಿಸಿ ಮ್ಯಾಜಿಕ್ ಮಾಡಿದ್ದಾರೆ. ಹೇಳಿ-ಕೇಳಿ ಲಂಕಾದ ಪಿಚ್ಗಳು ಸ್ಪಿನ್ ಸ್ನೇಹಿಯಾಗಿರೋದ್ರಿಂದ, ಶದಾಬ್ ಖಾನ್ನ ಎಚ್ಚರಿಕೆಯಿಂದ ಡೀಲ್ ಮಾಡಬೇಕಿದೆ.
ವೇಗಿಗಳೂ ಕೂಡ ಮೋಸ್ಟ್ ಡೇಂಜರಸ್.!
ಪಾಕಿಸ್ತಾನದ ತ್ರಿವಳಿ ಜೋಡಿಗಳಾದ ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ ಹಾಗೂ ಹ್ಯಾರೀಸ್ ರೌಫ್ ಪಾಕ್ ಬತ್ತಳಿಕೆಯಲ್ಲಿರೋ ಮೋಸ್ಟ್ ಡೇಂಜರಸ್ ವೆಪನ್ಸ್.! ನೇಪಾಳ ವಿರುದ್ಧ ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ ತಲಾ 2 ವಿಕೆಟ್ ಉರುಳಿಸಿದ್ರೆ, ನಸೀಮ್ ಶಾ ಎಕಾನಮಿಕಲ್ ಸ್ಪೆಲ್ ಹಾಕಿ ಗಮನ ಸೆಳೆದಿದ್ದಾರೆ.
ಒಟ್ಟಿನಲ್ಲಿ, ಬದ್ಧವೈರಿಗಳ ನಡುವಿನ ಕದನದಲ್ಲಿ ಟೀಮ್ ಇಂಡಿಯಾ ಹೇಗೆ ಗೆಲುವನ್ನೇ ಗುರಿಯಾಗಿಸಿದೆಯೋ, ಹಾಗೇ ಪಾಕ್ ಸೇಡಿನ ಸಮರಕ್ಕೆ ಸಜ್ಜಾಗಿದೆ. ಕಳೆದ ಟಿ20 ವಿಶ್ವಕಪ್ ಸೋಲು ಇಂದಿಗೂ ಪಾಕ್ ಪಡೆಯನ್ನ ಬಿಟ್ಟೋ ಬಿಡದೇ ಕಾಡ್ತಿದೆ. ಈ ಸೇಡಿನ ಜ್ವಾಲೆಯು ಆಟಗಾರರ ಎದೆಯಲ್ಲಿ ಉರೀತಿದೆ. ಹೀಗಾಗಿ ಟೀಮ್ ಇಂಡಿಯಾಗೆ ಟಫ್ ಫೈಟ್ ಕೊಡೋದಂತೂ ಪಕ್ಕಾ.!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ