ಟೀಂ ಇಂಡಿಯಾಗೆ ಮತ್ತೊಂದು ಭರ್ಜರಿ ಗೆಲುವು
213 ರನ್ಗಳನ್ನು ಡಿಫೆಂಡ್ ಮಾಡಿಕೊಂಡ ಭಾರತ
ಕುಲ್ದೀಪ್ ಮತ್ತೆ ಕಮಾಲ್, ಜಡ್ಡು, ಬುಮ್ರಾಗೂ ವಿಕೆಟ್
ಏಷ್ಯಾಕಪ್ ಪಂದ್ಯದಲ್ಲಿ ನಿನ್ನೆ ಭಾರತ ತಂಡವು ಸಿಂಹಳಿಯರನ್ನು ಬೇಟೆಯಾಡಿದೆ. ಬರೋಬ್ಬರಿ 41 ರನ್ಗಳ ಅಂತರದಿಂದ ರೋಹಿತ್ ಪಡೆ ಗೆದ್ದುಬೀಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಪಡೆಗೆ ಲಂಕಾ ಬೌಲರ್ಸ್ ಬಿಗ್ ಶಾಕ್ ನೀಡಿದರು.
49.1 ಓವರ್ನಲ್ಲಿ 10 ವಿಕೆಟ್ ತೆಗೆದು ಕೇವಲ 213 ರನ್ಗಳಿಗೆ ಭಾರತ ತಂಡವನ್ನು ಕಟ್ಟಿ ಹಾಕಿದ್ದರು. ಕೇವಲ 213 ರನ್ಗಳನ್ನು ಡಿಫೆಂಡ್ ಮಾಡಿಕೊಳ್ಳುವ ಸವಾಲು ಟೀಂ ಇಂಡಿಯಾ ಬೌಲರ್ಸ್ಗಳದ್ದಾಗಿತ್ತು. ದಿಟ್ಟ ಪ್ರದರ್ಶನ ನೀಡಿದ ಭಾರತೀಯ ಬೌಲರ್ಸ್, 41.3 ಓವರ್ನಲ್ಲಿ ಲಂಕಾ ಆಟಗಾರರ ಮಗ್ಗಲು ಮುರಿಯುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ 41 ರನ್ಗಳ ಅಂತರದಿಂದ ಗೆಲುವು ಸಾಧಿಸಿತು.
ಟೀಂ ಇಂಡಿಯಾ ಪರ ಪಾಕ್ ವಿರುದ್ಧ ಐದು ವಿಕೆಟ್ ಪಡೆದು ಮಿಂಚಿದ್ದ ಕುಲ್ದೀಪ್ ಯಾದವ್ ನಿನ್ನೆಯೂ ಕೂಡ ಮಿಂಚಿದರು. 4 ವಿಕೆಟ್ಗಳನ್ನು ಕಿತ್ತು ಕಮಾಲ್ ಮಾಡಿದ್ದ ಕುಲ್ದೀಪ್ಗೆ ಬೂಮ್ರಾ, ಜಡೇಜಾ ಸಾಥ್ ನೀಡಿದರು. ಇವರಿಬ್ಬರು ತಲಾ ಎರಡು ವಿಕೆಟ್ ಪಡೆದು ಭಾರತದ ಗೆಲುವಿಗೆ ಸಹಕಾರಿಯಾದರು. ಜೊತೆಗೆ ಸಿರಾಜ್, ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್