ಶುಬ್ಮನ್ ಗಿಲ್ ಆಮೋಘ ಶತಕ, ಆದರೆ ಗೆಲುವು ಸಿಗಲಿಲ್ಲ
ಶಕೀಬ್ ಅವರ ಅಮೋಘ ಶತಕದಿಂದ ಬಾಂಗ್ಲಾ ತಂಡಕ್ಕೆ ಆಸರೆ
ಮತ್ತೆ ವಿಫಲ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್, ತಿಲಕ್
ಕೊಲೊಂಬೋದ ಆರ್.ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 6 ರನ್ಗಳಿಂದ ಸೋಲೋಪ್ಪಿಕೊಂಡಿದೆ. ಓಪನರ್ ಶುಭ್ಮನ್ ಗಿಲ್ ಶತಕ ಬಾರಿಸಿದರೂ ಗೆಲ್ಲಲು ಆಗಲಿಲ್ಲ.
2023ರ ಏಷ್ಯಾಕಪ್ನ ಸೂಪರ್- 4 ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡು ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಟೀಮ್ ಬಾಂಗ್ಲಾದೇಶವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಓಪನರ್ಸ್ ಆಗಿ ಕ್ರೀಸ್ ಆಗಮಿಸಿದ ಹಸನ್ ಮತ್ತು ಲಿಟ್ಟನ್ ದಾಸ್ಗೆ ಭಾರತದ ಬೌಲರ್ಸ್ ಬಹು ಬೇಗ ಪೆವಿಲಿಯನ್ ದಾರಿ ತೋರಿಸಿದರು. ನಾಯಕ ಶಕೀಬ್ ಅವರ ಚತುರತನದ ಆಟದಿಂದ 80 ರನ್ ಸಿಡಿಸಿ ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ತೌಹಿದ್ ಹರಿದೋಯಿ 54 ಹಾಗೂ ನಸುಮ್ ಅಹಮದ್ 44 ರನ್ ಬಾರಿಸಿ ತಂಡಕ್ಕೆ ಕಾಣಿಕೆ ನೀಡಿದರು. ಇದರಿಂದ ಬಾಂಗ್ಲಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 265 ರನ್ಗಳ ಗುರಿಯನ್ನು ಭಾರತ ತಂಡಕ್ಕೆ ನೀಡಿತು.
ಈ ಗುರಿ ಬೆನ್ನಟ್ಟಿದ ಭಾರತ ತಂಡ ಪ್ರಾರಂಭದಲ್ಲಿ ಅಷ್ಟೇನೂ ಉತ್ತಮವಾಗಿ ಆಡಲಿಲ್ಲ. ಓಪನರ್ಸ್ ಆಗಿ ಬ್ಯಾಟಿಂಗ್ ಮಾಡಲು ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಸೊನ್ನೆ ಸುತ್ತಿ ಪೆವಿಲಿಯನ್ಗೆ ಮರಳಿದರು. ಇನ್ನೊಂದು ಕಡೆ ಗಟ್ಟಿಯಾಗಿ ನಿಂತು ಆಟ ಮುಂದುವರೆಸಿದ ಶುಭ್ಮನ್ ಗಿಲ್ 133 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಮೇತ ಅದ್ಭುತವಾದ ಸಿಂಚುರಿಸಿ ಸಿಡಿಸಿದರು. ಸೂರ್ಯಕುಮಾರ್ 26, ಅಕ್ಷರ್ ಪಟೇಲ್ 44 ಇವರನ್ನು ಬಿಟ್ಟರೇ ಉಳಿದ ಭಾರತದ ಆಟಗಾರರು 20 ರ ಗಡಿ ದಾಟಲು ಹೆಣಗಾಡಿದರು. ಇದರಿಂದ ಭಾರತ 49.5 ಓವರ್ಗೆ 10 ವಿಕೆಟ್ಗಳನ್ನು ಕಳೆದುಕೊಂಡು 259 ರನ್ ಮಾತ್ರ ಗಳಿಸಲು ಶಕ್ತವಾಯಿತು. ಗುರಿ ಮುಟ್ಟಲು ಇನ್ನು 6 ರನ್ ಇರುವಾಗಲೇ ಭಾರತ ಸೋಲು ಕಂಡಿತು.
ಈಗಾಗಲೇ ಭಾರತ ಏಷ್ಯಾಕಪ್ನಲ್ಲಿ ಫೈನಲ್ಗೆ ಪ್ರವೇಶಿಸಿದ್ದರಿಂದ ಇದೊಂದು ಔಪಚಾರಿಕ ಪಂದ್ಯವಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಂಡ್ಯ, ಬೂಮ್ರಾ, ಕುಲ್ದೀಪ್ ಯಾದವ್, ಸಿರಾಜ್ಗೆ ವಿಶ್ರಾಂತಿ ನೀಡಿ ಉಳಿದ ಯುವ ಆಟಗಾರರನ್ನು ಆಡಿಸಿ ಬಿಸಿಸಿಐ ಪ್ರಯೋಗ ಮಾಡಿತು. ಆದರೆ ಯಶಸ್ಸು ಕಾಣುವಲ್ಲಿ ಕೊಂಚದರಲ್ಲಿ ತಪ್ಪಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ