ಆಫ್ ದಿ ಫೀಲ್ಡ್ನಲ್ಲೂ ಈ ಎರಡು ಟೀಮ್ ಬಗ್ಗೆ ದೊಡ್ಡ ಚರ್ಚೆ
ಆಟಗಾರರ ಮನಸ್ಥಿತಿ ಅಲ್ಲೆ ಡ್ರಾ ಅಲ್ಲೆ ಬಹುಮಾನವಾಗಿರುತ್ತೆ
ವಿರಾಟ್ ಕೊಹ್ಲಿನ ಕಂಡ್ರೆ ಕ್ಯಾಪ್ಟನ್ ಬಾಬರ್ಗೂ ಫುಲ್ ಪ್ರೀತಿ
ಇಂಡೋ -ಪಾಕ್ ಪಂದ್ಯ ಅಂದ್ರೆ, ಇಡೀ ಕ್ರಿಕೆಟ್ ಜಗತ್ತು ತುದಿಗಾಲಲ್ಲಿ ಕಾದು ಕುಳಿತಿರುತ್ತೆ. ಆನ್ಫೀಲ್ಡ್ ಆಟ ಬಿಡಿ. ಆ ಪಂದ್ಯಕ್ಕೂ ಮುನ್ನ ಹೊರ ಜಗತ್ತಿನಲ್ಲಿ ಟಾಕ್ವಾರ್ಗಳು ಆಫ್ ದ ಫೀಲ್ಡ್ನಲ್ಲಿ ತೀವ್ರವಾಗ್ತವೆ. ಪಂದ್ಯ ವಾರ್ನಂತೆ ಬಿಂಬಿತವಾಗುತ್ತೆ. ಆದ್ರೆ, ಆಟಗಾರರಿಗೆ ಇದೊಂದು ಪಂದ್ಯವಷ್ಟೇ, ಯುದ್ಧವಲ್ಲ.
ಇಡೀ ವಿಶ್ಚವೇ ಇಂಡೋ- ಪಾಕ್ ಕ್ರಿಕೆಟ್ ಪಂದ್ಯವಂದ್ರೆ ಕಾಯುತ್ತಿರುತ್ತೆ. ಎರಡು ತಂಡಗಳ ಮುಖಾಮುಖಿಗಿರುವ ಇತಿಹಾಸ. ಹಿಂದಾದ ಸ್ಲೆಡ್ಜಿಂಗ್ ವಾರ್ಗಳು ಪಂದ್ಯದ ಕಾವನ್ನ ಹೆಚ್ಚಿಸ್ತವೆ. ಆಟಗಾರರು ಕೂಡ ಜಿದ್ದಿಗೆ ಬಿದ್ದಂತೆ ಹೋರಾಡ್ತಾರೆ. ಅಲ್ಲೆ ಡ್ರಾ ಅಲ್ಲೆ ಬಹುಮಾನ ಅನ್ನೋ ಮನಸ್ಥಿತಿ ಆಟಗಾರರದ್ದಾಗಿರುತ್ತೆ. ಆದ್ರೆ, ಇದೆಲ್ಲವೂ ಆನ್ ಫೀಲ್ಡ್ಗೆ ಮಾತ್ರ ಸೀಮಿತ. ಆಫ್ ದ ಫೀಲ್ಡ್ನಲ್ಲಿ ಎಲ್ಲರೂ ಭಾಯಿ..ಭಾಯಿ..! ಈ ವಿಚಾರದಲ್ಲಿ ನಿಜಕ್ಕೂ ಟೀಮ್ ಇಂಡಿಯಾ ಆಟಗಾರರು ಮಾದರಿ.
Best video on internet ♥️🇵🇰 🇮🇳 #INDvsPAK pic.twitter.com/Ig7hnJb60U
— Ihtisham Ul Haq (@iihtishamm) September 1, 2023
ಕಿಂಗ್ ಕೊಹ್ಲಿಗೆ ಸಲಾಂ ಎಂದ ಬಾಬರ್ ಅಝಂ.!
ಕೊಹ್ಲಿ VS ಬಾಬರ್.. ಇಬ್ಬರಲ್ಲಿ ಯಾರು ಕಿಂಗ್.? ಎಂಬ ಚರ್ಚೆ ಹೊರ ಜಗತ್ತಿನಲ್ಲಿ ತೀವ್ರವಾಗಿ ನಡೀತಾ ಇದೆ. ಆದ್ರೆ, ಇವರಿಬ್ಬರಿಗೂ ಇದು ಮ್ಯಾಟರೇ ಅಲ್ಲ. ವೈಯಕ್ತಿವಾಗಿ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸ್ತಾರೆ. ಇದಕ್ಕೆ ಬಾಬರ್ ಅಝಂ ಆಡಿರುವ ಈ ಮಾತುಗಳೇ ಬೆಸ್ಟ್ ಏಕ್ಸಾಂಪಲ್.
ನಾನು 2019ರ ವಿಶ್ವಕಪ್ ಸಮಯದಲ್ಲಿ ಕೊಹ್ಲಿ ಬಳಿ ಹೋಗಿದ್ದೆ. ಆಗಲೂ ಅವರು ಉತ್ತುಂಗದಲ್ಲಿದ್ರು. ಈಗಲೂ ಅಷ್ಟೇ. ಆಗ ನಾನು ಹಲವು ಪ್ರಶ್ನೆಗಳನ್ನ ಕೇಳಿದೆ. ಅದಕ್ಕೆ ಅವರು ತುಂಬಾ ಉತ್ತಮವಾಗಿ ಉತ್ತರಿಸಿದರು. ಇದರಿಂದ ನನಗೆ ತುಂಬಾ ಸಹಾಯವಾಯಿತು.
ಬಾಬರ್ ಅಝಂ, ಪಾಕ್ ಕ್ಯಾಪ್ಟನ್
ಬಾಬರ್ ಬೆಸ್ಟ್ ಬ್ಯಾಟ್ಸ್ಮನ್, ಕೊಹ್ಲಿ ಗುಣಗಾನ.!
ಬಾಬರ್ ಅಝಂ ಮಾತ್ರವಲ್ಲ, ವಿರಾಟ್ ಕೊಹ್ಲಿ ಕೂಡ ಬಾಬರ್ರನ್ನ ಅಷ್ಟೇ ಗೌರವದಿಂದ ಕಾಣ್ತಾರೆ. ಸದ್ಯ ಕ್ರಿಕೆಟ್ ಜಗತ್ತಿನ ಒನ್ ಆಫ್ ದ ಬೆಸ್ಟ್ ಬ್ಯಾಟ್ಸ್ಮನ್ ಅನ್ನೋದು ಕೊಹ್ಲಿ ಮಾತು. ಇದಕ್ಕಿಂತ ಕಾಂಪ್ಲಿಮೆಂಟ್ ಬೇಕಾ..?
ಮೊದಲ ದಿನದಿಂದ ನಾನು ಬಾಬರ್ರಲ್ಲಿ ಗೌರವವನ್ನ ನೋಡಿದ್ದೆನೆ. ಅದು ಬದಲಾಗಿಲ್ಲ. ಅವರೂ ಎಲ್ಲ ಮಾದರಿಯಲ್ಲಿ ವಿಶ್ವದ ಉತ್ತಮ ಆಟಗಾರನಾಗಿ ಹೊರ ಹೊಮ್ಮಿದ್ದರೂ ಕೂಡ. ಸ್ಥಿರವಾಗಿ ಪ್ರದರ್ಶನ ನೀಡ್ತಿದ್ದಾರೆ. ನಾನು ಅವರ ಆಟವನ್ನ ಏಂಜಾಯ್ ಮಾಡ್ತೀನಿ. ಆದ್ರೆ, ಗೌರವ ಬದಲಾಗಿಲ್ಲ. ಆ್ಯಟಿಟ್ಯೂಡ್ನಲ್ಲಾಗಲಿ, ಅಪ್ರೋಚ್ನಲ್ಲಾಗಲಿ ಬದಲಾವಣೆಯಾಗಿಲ್ಲ.
ವಿರಾಟ್ ಕೊಹ್ಲಿ, ಭಾರತದ ಆಟಗಾರ
ಶಾಹೀನ್ ಶಾ ಅಫ್ರಿದಿಗೆ ಮೊಹಮ್ಮದ್ ಶಮಿ ಟಿಪ್ಸ್.!
2022ರ ಟಿ20 ವಿಶ್ವಕಪ್ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಮೊಹಮ್ಮದ್ ಶಮಿ, ಪಾಕಿಸ್ತಾನ ಪೇಸರ್ ಶಾಹೀನ್ ಅಫ್ರಿದಿ ಬೌಲಿಂಗ್ ಟಿಪ್ಸ್ ಹೇಳಿಕೊಟ್ಟಿದ್ರು. ಶಮಿಯ ನಡೆಗೆ ತೀವ್ರ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೊಂದೆ ಅಲ್ಲ.. ಕಳೆದ ಏಷ್ಯಾಕಪ್ ಟೂರ್ನಿಯ ವೇಳೆ ಶಾಹೀನ್ ಅಫ್ರಿದಿ ಗಂಭೀರ ಇಂಜುರಿಗೆ ತುತ್ತಾಗಿದ್ರು. ಸರ್ಜರಿಗೆ ಒಳಗಾಗಿ ಬಂದಿದ್ದ ಶಾಹೀನ್ ಬಳಿ ತೆರಳಿ ಕುಶಲೋಪರಿ ವಿಚಾರಿಸಿದ್ದ ಟೀಮ್ ಇಂಡಿಯಾ ಆಟಗಾರರು ಸಹೋದರತ್ವದ ಸಂದೇಶ ಸಾರಿದ್ರು.
Mohammad Shami giving some tips to Shaheen Shah Afridi#IndiaVsPakistan #INDvPAK #INDvsPAK #AsiaCup #AsiaCup23 pic.twitter.com/U6cOzbrQsv
— Tarique Hasan || Tofi (@tariquespeaks) August 31, 2023
ನೋವಿನ ನಡುವೆಯೂ ಮಾದರಿಯಾಗಿದ್ದ ಭಾರತೀಯರು.!
ಇದು 2021ರ ಟಿ20 ವಿಶ್ವಕಪ್ನ ಕಥೆ. ಅಂದು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಟೀಮ್ ಇಂಡಿಯಾ, ಪಾಕ್ ಎದುರು ವಿಶ್ವಕಪ್ನಲ್ಲಿ ಸೋತಿತ್ತು. ಆ ಸೋಲಿನ ನೋವಿನ ನಡುವೆ ಕೊಹ್ಲಿ, ಪಾಕ್ನ ಮೊಹಮ್ಮದ್ ರಿಜ್ವಾನ್, ಬಾಬರ್ ಅಝಂರನ್ನ ತಬ್ಬಿಕೊಂಡು ಅಭಿನಂದಿಸಿದ್ರು. ಸ್ಪಿರಿಟ್ ಆಫ್ ದ ಗೇಮ್ ಅಂದ್ರೆ ಇದಲ್ವಾ..?
ಪಾಕ್ ಆಟಗಾರರೊಂದಿಗೆ ಮಾಹಿ ಆತ್ಮೀಯ ಮಾತುಕತೆ.!
ಕೊಹ್ಲಿ ಮಾತ್ರವಲ್ಲ, ಆ ಸಮಯದಲ್ಲಿ ಟೀಮ್ ಇಂಡಿಯಾ ಮೆಂಟರ್ ಆಗಿದ್ದ ಧೋನಿ ಕೂಡ ಪಾಕ್ ಆಟಗಾರರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದ್ರು.
ಪಾಕ್ ನಾಯಕಿಯ ಮಗುವನ್ನ ಎತ್ತಾಡಿಸಿದ್ದ ಹರ್ಮನ್ ಪಡೆ.!
2022ರ ಮಹಿಳಾ ವಿಶ್ವಕಪ್ನ ಓಪನರ್ ಗೇಮ್ನಲ್ಲಿ ಪಾಕಿಸ್ತಾನ ಪಡೆಯ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಆ ಬಳಿಕ ವಿಶ್ವ ಕ್ರಿಕೆಟ್ ಲೋಕದ ಅಭಿಮಾನಿಗಳ ಮನವನ್ನೂ ಗೆದ್ದಿತ್ತು. ಪಾಕ್ ನಾಯಕಿ ಬಿಸ್ಮಾ ಮರೂಫ್ರ ಮಗುವನ್ನ ಹರ್ಮನ್ ಪಡೆ ಎತ್ತಾಡಿಸಿದ ರೀತಿಗೆ ಎಲ್ಲರೂ ಕ್ಲೀನ್ ಬೋಲ್ಡ್ ಆಗಿದ್ರು.
ಇದಿಷ್ಟೇ ಅಲ್ಲ.. ಇತಿಹಾಸದ ಪುಟಗಳನ್ನ ಕೆದಕಿದ್ರೆ, ಇನ್ನೂ ಹಲವು ಗೆಳೆತನದ ಸಂದೇಶ ಸಾರುವ ಘಟನೆಗಳಿವೆ. ಕ್ರಿಕೆಟ್ ಅಂದ್ರೆನೇ ಹಾಗೇ.. ಬ್ಯಾಟ್ -ಬಾಲ್ನ ಬ್ಯಾಟಲ್ ಅನ್ನ ಮೀರಿ ಇಲ್ಲಿ ಸಂಬಂಧ, ಪರಸ್ಪರ ಗೌರವ ಅನ್ನೋದು ಇದ್ದೇ ಇರುತ್ತೆ. ಇದೇ ಕಾರಣಕ್ಕೆ ಕ್ರಿಕೆಟ್ ಒಂದು ಧರ್ಮ ಅಂತ ಗುರುತಿಸಿಕೊಳ್ಳೋದಲ್ವೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ