newsfirstkannada.com

Ind vs Pak Asia cup; ಕೊಲಂಬೋ ತಲುಪಿದ ಟೀಮ್​ ಇಂಡಿಯಾ.. ಪಾಕ್​ ಬೇಟೆಗೆ ರೋಹಿತ್ ಪಡೆ ರೆಡಿ

Share :

31-08-2023

    ಬೆಂಗಳೂರಿನಿಂದ ಕೊಲಂಬೋಗೆ ತೆರಳಿದ ಭಾರತ ತಂಡ

    ಮೊದಲ ಪಂದ್ಯದಲ್ಲೇ ಪಾಕ್​ ಅನ್ನು ಎದುರಿಸಲಿರುವ ಭಾರತ

    ಈಗಾಗಲೇ ಟೂರ್ನಿಯಲ್ಲಿ ಒಂದು ಪಂದ್ಯ ಗೆದ್ದಿರುವ ಪಾಕ್​

ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಟೀಮ್​ ಇಂಡಿಯಾ ಆಟಗಾರರು ಸದ್ಯ 2023ರ ಏಷ್ಯಾಕಪ್ ಟೂರ್ನಿಗಾಗಿ ಶ್ರೀಲಂಕಾದ ಕೊಲಂಬೋವನ್ನು ತಲುಪಿದ್ದಾರೆ. ಭಾರತ ಸೆಪ್ಟೆಂಬರ್ 02 ರಂದು ಏಷ್ಯಾಕಪ್​ನ ಮೊದಲ ಪಂದ್ಯವನ್ನು ಪಾಕಿಸ್ತಾನ ತಂಡದ ವಿರುದ್ಧ ಆಡಲಿದೆ.

ಭಾರತ ತಂಡ  ಕೊಲಂಬೋವನ್ನು ತಲುಪಿರುವ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಎಕ್ಸ್​ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದು ಆಟಗಾರರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ. ​ಕಳೆದ 5 ದಿನದಿಂದ ಬೆಂಗಳೂರಿನ ಆಲೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದ ಟೀಮ್​ ಇಂಡಿಯಾದ ಆಟಗಾರರು ವಿಶೇಷ ವಿಮಾನ ಮೂಲಕ ಏಷ್ಯಾಕಪ್​ ಟೂರ್ನಿಗಾಗಿ ಶ್ರೀಲಂಕಾದ ಕೊಲಂಬೋಗೆ ತೆರಳಿದ್ದಾರೆ. ನಿನ್ನೆ ಬೆಳಗ್ಗೆ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿದ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಈಗಾಗಲೇ ಕೊಲಂಬೋದಲ್ಲಿ ಲ್ಯಾಂಡ್ ಆಗಿದ್ದಾರೆ. ಇಂದಿನಿಂದ ಭಾರತ ತಂಡ ಅಭ್ಯಾಸ ನಡೆಸುವ ಸಾಧ್ಯತೆಯಿದೆ. ಸೆಪ್ಟೆಂಬರ್​ 02 ರಂದು ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ಪಾಕ್​ ತಂಡವನ್ನು ಭಾರತ ಎದುರಿಸಲಿದೆ.

ಈಗಾಗಲೇ ಏಷ್ಯಾಕಪ್​ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು​ ನೇಪಾಳ ವಿರುದ್ಧ ಬೃಹತ್​ ರನ್​ಗಳಿಂದ ಗೆದ್ದು ಬೀಗಿದ್ದಾರೆ. ಹೀಗಾಗಿ ಬಾಬರ್​ ಪಡೆ ಗೆಲುವಿನ ಅಲೆಯಲ್ಲಿದೆ. ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Ind vs Pak Asia cup; ಕೊಲಂಬೋ ತಲುಪಿದ ಟೀಮ್​ ಇಂಡಿಯಾ.. ಪಾಕ್​ ಬೇಟೆಗೆ ರೋಹಿತ್ ಪಡೆ ರೆಡಿ

https://newsfirstlive.com/wp-content/uploads/2023/08/ROHIT_SELFI.jpg

Load More