ಈ ಏಷ್ಯಾಕಪ್ ಬಳಿಕ ಆರಂಭವಾಗೋ ವಿಶ್ವಕಪ್ ಹಣಾಹಣಿ
ಮುಂದಿನ ಏಷ್ಯಾಕಪ್ನಲ್ಲಿ ರಾಹುಲ್ ಕಣಕ್ಕಿಳಿಯೋದು ಪಕ್ಕಾ
ಕೆ.ಎಲ್ ರಾಹುಲ್ ಫಿಟ್ನೆಸ್ ರಿಪೋರ್ಟ್‌ನಲ್ಲಿ ಹೇಳಿರೋದೇನು?
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಆಯ್ಕೆ ಮಾಡುವಲ್ಲೂ ಸೆಲೆಕ್ಷನ್ ಕಮಿಟಿ ಎಡವಿತಾ, ಆಯ್ಕೆಯ ವಿಚಾರದಲ್ಲಾದ ತುರಾತುರಿಯನ್ನ ಗಮನಿಸಿದ್ರೆ, ನಿಮಗೂ ಈ ಡೌಟ್ ಬರುತ್ತೆ. ಆತಂಕ ಕೂಡ ಹುಟ್ಟದೇ ಇರಲ್ಲ. ಅಷ್ಟಕ್ಕೂ ಎಡವಟ್ಟಾಗಿದ್ದು ಎಲ್ಲಿ?
ಏಷ್ಯಾಕಪ್ ಮಹಾಸಮರಕ್ಕೆ ಟೀಮ್ ಇಂಡಿಯಾ ಅನೌನ್ಸ್ ಮಾಡಿದ್ದಾಗಿದೆ. ಕಳೆದ 2 ವಾರದಿಂದ ಟೀಮ್ ಇಂಡಿಯಾ ಸುತ್ತವೇ ಚರ್ಚೆ ನಡೆದಿತ್ತು. ಆದ್ರೆ, ಅವಸರಕ್ಕೆ ಬೀಳದ ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಕಾದು ನೋಡೋ ತಂತ್ರ ಅನುಸರಿಸಿತ್ತು. ಇಷ್ಟೆಲ್ಲ ತಾಳ್ಮೆಯಿಂದ ಕಾದು ನೋಡಿ, ಅಳೆದೂ ತೂಗಿ ಲೆಕ್ಕಾಚಾರ ಹಾಕಿದ್ರೂ ಆಯ್ಕೆ ವಿಚಾರದಲ್ಲಿ ಮತ್ತದೇ ಯಡವಟ್ಟಾಗಿದೆ.
ತಂಡದ ಆಯ್ಕೆಯಲ್ಲಿ ಮತ್ತೆ ಎಡವಿತಾ ಸೆಲೆಕ್ಷನ್ ಕಮಿಟಿ.?
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಅನೌನ್ಸ್ ಆದಾಗಿನಿಂದ ಚರ್ಚೆಯಲ್ಲಿರೋ ವಿಚಾರವಿದು. ಟೀಮ್ ಅನೌನ್ಸ್ ಇಷ್ಟು ದಿನ ಕಾದಿದ್ದೇ, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಫಿಟ್ನೆಸ್ ಕಾರಣಕ್ಕಾಗಿ. ಆದ್ರೆ, ಸೆಲೆಕ್ಷನ್ ವಿಚಾರದಲ್ಲಿ ಮಾಡಿರೋದು ಮಾತ್ರ ಯಡವಟ್ಟು. ಮುಂದೆ ಮಹತ್ವದ ವಿಶ್ವಕಪ್ ಟೂರ್ನಿ ಇರುವ ಈ ಸಂದರ್ಭದಲ್ಲಿ ಸೆಲೆಕ್ಷನ್ ಕಮಿಟಿ, ಟೀಮ್ ಮ್ಯಾನೇಜ್ಮೆಂಟ್ ತೆಗೆದುಕೊಂಡಿರೋ ಈ ರಿಸ್ಕೀ ನಿರ್ಧಾರ ಸದ್ಯ ಆತಂಕವನ್ನ ಹುಟ್ಟಿಸಿದೆ.
ಕೆ.ಎಲ್ ರಾಹುಲ್ ಫುಲ್ ಫಿಟ್ ಆಗಿಲ್ಲ..!
ಸೆಲೆಕ್ಷನ್ ಕಮಿಟಿಯ ಚೇರ್ಮನ್ ಅಜಿತ್ ಅಗರ್ಕರ್ ಹೇಳಿರೊ ಮಾತಿದು. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗರ್ಕರ್, ರಾಹುಲ್ ಇಂಜುರಿ ಬಗ್ಗೆ ತುಟಿ ಬಿಚ್ಚಿದ್ರು. ರಾಹುಲ್ ಫಿಟ್ನೆಸ್ ಬಗ್ಗೆ ಮಾತನಾಡಿದ ಚೀಫ್ ಸೆಲೆಕ್ಟರ್, ಇನ್ನೂ ಕಂಪ್ಲೀಟ್ ಫಿಟ್ ಆಗಿಲ್ಲ ಅನ್ನೋ ಮಾಹಿತಿ ಬಿಚ್ಚಿಟ್ರು. ಐಪಿಎಲ್ ವೇಳೆಯಾದ ಗಾಯದಿಂದ ರಾಹುಲ್ ಚೇತರಿಸಿಕೊಂಡಿದ್ದಾರೆ. ಹೊಸದಾಗಿ ಚಿಕ್ಕ ಇಂಜುರಿಯಾಗಿದೆ. ಹೀಗಾಗಿ ಬ್ಯಾಕ್ ಅಪ್ ವಿಕೆಟ್ ಕೀಪರ್ ಅಗಿ ಸಂಜು ಮಣೆ ಹಾಕಿರೋದಾಗಿ ತಿಳಿಸಿದ್ರು.
ತುರಾತುರಿಯಲ್ಲಿ ರಾಹುಲ್ ಆಯ್ಕೆ ಬೇಕಿತ್ತಾ.?
ಅಜಿತ್ ಅಗರ್ಕರ್ ನೀಡಿದ ಉತ್ತರದ ಬಳಿಕ ಚರ್ಚೆಯಲ್ಲಿರೋ ವಿಚಾರವಿದು. ರಾಹುಲ್ ಟೀಮ್ ಇಂಡಿಯಾದ ಮೋಸ್ಟ್ ಇಂಪಾರ್ಟೆಂಟ್ ಪ್ಲೇಯರ್. ಇಷ್ಟು ದಿನ ರಾಹುಲ್ ಫಿಟ್ನೆಸ್ ರಿಪೋರ್ಟ್ಗಾಗಿ ಮ್ಯಾನೇಜ್ಮೆಂಟ್ ಕಾದಿದ್ದು. ಈಗ ಕಂಪ್ಲೀಟ್ ಫಿಟ್ ಆಗಿಲ್ಲ ಅನ್ನೋ ರಿಪೋರ್ಟ್ ಬಂದಿದೆ. ಹಾಗಿದ್ದ ಮೇಲೆ ಸೆಲೆಕ್ಟ್ ಮಾಡೋ ಅಗತ್ಯವಿತ್ತಾ ಅನ್ನೋದು ಪ್ರಶ್ನೆ.
ಮತ್ತೆ ಇಂಜುರಿಗೆ ತುತ್ತಾದ್ರೆ ಕಥೆ ಏನು.?
ಸೆಲೆಕ್ಷನ್ ಕಮಿಟಿ, ಮ್ಯಾನೇಜ್ಮೆಂಟ್ಗೆ ಸದ್ಯಕ್ಕಿರೋ ಉತ್ಸಾಹವನ್ನ ನೋಡಿದ್ರೆ, ಏಷ್ಯಾಕಪ್ ಟೂರ್ನಿಯಲ್ಲಿ ರಾಹುಲ್ನ ಕಣಕ್ಕಿಳಿಸೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಏನ್ಸಿಎ ರಿಪೋರ್ಟ್ ನೋಡಿದ್ರೆ, ರಾಹುಲ್ ಫಿಟ್ ಆಗಿಲ್ಲ ಅಂತಿದೆ. ಮ್ಯಾಚ್ ಫಿಟ್ನೆಸ್ ಬಗ್ಗೆ ಅನುಮಾನವಿದೆ. ಇಂಜುರಿಯಿಂದ ಚೇತರಿಕೆ ಕಾಣ್ತಿದ್ದ ವೇಳೆ ಮತ್ತೊಂದು ಇಂಜುರಿಗೆ ತುತ್ತಾಗಿದ್ದಾರೆ. ರಾಹುಲ್ ಪರಿಸ್ಥಿತಿ ಹೀಗಿರೋವಾಗ ಏಷ್ಯಾಕಪ್ ಟೂರ್ನಿಗೆ ಸೆಲೆಕ್ಟ್ ಮಾಡೋ ಅಗತ್ಯವಿತ್ತಾ.?
ವಿಶ್ವಕಪ್ಗೂ ಮುನ್ನ ರಿಸ್ಕ್ ತೆಗೆದುಕೊಂಡಿದ್ದು ಸರೀನಾ.?
ಏಷ್ಯಾಕಪ್ ಬಳಿಕ ಅಕ್ಟೋಬರ್ 5ರಿಂದ ಆರಂಭವಾಗೋ ವಿಶ್ವಕಪ್ ಟೂರ್ನಿ ಟೀಮ್ ಇಂಡಿಯಾ ಪಾಲಿನ ಪ್ರತಿಷ್ಟೆಯ ಕದನ. ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ರಿಷಭ್ ಪಂತ್ ಅಲಭ್ಯತೆಯಲ್ಲಿ, ರಾಹುಲ್ ಅಗತ್ಯತೆ ಟೀಮ್ ಇಂಡಿಯಾಗೆ ಅತಿಯಾಗಿದೆ. ಆದ್ರೆ, ಇನ್ನೂ ಫಿಟ್ ಆಗದ ರಾಹುಲ್ನ ಏಷ್ಯಾಕಪ್ನಲ್ಲಿ ಆಡಿಸಿ, ದುರಾದೃಷ್ಟವಶಾತ್ ಇಂಜುರಿ ಉಲ್ಬಣಗೊಂಡ್ರೆ, ವಿಶ್ವಕಪ್ನಲ್ಲಿ ಬೆಲೆ ತೆರಬೇಕಾಗುತ್ತದೆ.
ಹಿಂದೆ ಮಾಡಿದ ತಪ್ಪಿನಿಂದ ಕಲಿತಿಲ್ವಾ ಪಾಠ.?
ಈ ಹಿಂದಿನ ಟಿ20 ವಿಶ್ವಕಪ್ ಮುನ್ನ ಕೂಡ ಟೀಮ್ ಮ್ಯಾನೇಜ್ಮೆಂಟ್ ಇಂಥದ್ದೇ ತಪ್ಪನ್ನ ಮಾಡಿತ್ತು. 100% ಫಿಟ್ ಆಗದ ಜಸ್ಪ್ರಿತ್ ಬೂಮ್ರಾರನ್ನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿಸಿತ್ತು. ಇಂಜುರಿ ಹೆಚ್ಚಾದ ಪರಿಣಾಮ ಅಂದು ತಂಡದಿಂದ ಹೊರಬಿದ್ದ ಬೂಮ್ರಾ ಕಮ್ಬ್ಯಾಕ್ ಮಾಡಿರೋದು ಈಗ ಐರ್ಲೆಂಡ್ ವಿರುದ್ಧ ಈ 11 ತಿಂಗಳ ಅಂತರದಲ್ಲಿ ಬೂಮ್ರಾ ಅಲಭ್ಯತೆ ಟೀಮ್ ಇಂಡಿಯಾವನ್ನ ಬಿಡದೇ ಕಾಡಿದೆ. ಹಾಗಿದ್ರೂ, ಟೀಮ್ ಮ್ಯಾನೇಜ್ಮೆಂಟ್ ಪಾಠ ಕಲಿತಂತಿಲ್ಲ.
ಕಂಪ್ಲೀಟ್ ಫಿಟ್ ಆಗದಿದ್ರೂ, 17 ಮಂದಿ ಆಟಗಾರರ ತಂಡದಲ್ಲಿ ರಾಹುಲ್ಗೆ ಸೆಲೆಕ್ಷನ್ ಕಮಿಟಿ ಮಣೆ ಹಾಕಿದೆ. ಆದ್ರೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡೋಕು ಮುನ್ನ ಕ್ಯಾಪ್ಟನ್ -ಕೋಚ್ ಯೋಚಿಸಬೇಕಿದೆ. ಸ್ವಲ್ಪ ಯಾಮಾರಿದ್ರೂ, ವಿಶ್ವಕಪ್ನಲ್ಲಿ ತಂಡಕ್ಕೆ ಹಿನ್ನಡೆಯಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ