ಟೀಂ ಇಂಡಿಯಾ ಫ್ಯಾನ್ಸ್ಗೆ ಗುಡ್ನ್ಯೂಸ್
2023 ಏಷ್ಯಾಕಪ್ ಟೈಮ್ ಟೇಬಲ್ ಔಟ್!
ಭಾರತ-ಪಾಕ್ ಮಧ್ಯದ ಪಂದ್ಯ ಯಾವಾಗ?
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಂದಿನ ಏಷ್ಯಾಕಪ್ 2023 ಟೂರ್ನಿಯ ವೇಳಾಪಟ್ಟಿಯನ್ನು ಕೊನೆಗೂ ಪ್ರಕಟಿಸಿದೆ. ಮೊದಲು ನಿಗದಿ ಮಾಡಿದಂತೆಯೇ ಬಹುನಿರೀಕ್ಷಿತ ಟೂರ್ನಿ ಆಗಸ್ಟ್ 30ನೇ ತಾರೀಕಿನಿಂದಲೇ ಶುರುವಾಗಲಿದೆ.
ಇನ್ನು, ಇಡೀ ಕ್ರೀಡಾ ಜಗತ್ತೇ ಬಹಳ ಕಾತುರದಿಂದ ಎದುರು ನೋಡುತ್ತಿರೋ ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ, ಪಾಕ್ ನಡುವಿನ ಹೈವೊಲ್ಟೇಜ್ ಪಂದ್ಯವೂ ಸೆಪ್ಟೆಂಬರ್ 2ನೇ ತಾರೀಕು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಕೂಡ ಶ್ರೀಲಂಕಾದಲ್ಲೇ ಆಯೋಜಿಸಲಾಗಿದೆ.
ಈ ಬಾರಿ ಏಷ್ಯಾಕಪ್ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕಿತ್ತು. ಒಂದು ವೇಳೆ ಪಾಕ್ನಲ್ಲಿ ನಡೆದರೆ ಟೀಂ ಇಂಡಿಯಾ ಭಾಗಿಯಾಗಲ್ಲ ಎಂದು ಬಿಸಿಸಿಐ ಹೇಳಿತ್ತು. ಹೀಗಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಟೂರ್ನಿ ಆಯೋಜನೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಟೀಂ ಇಂಡಿಯಾ, ಪಾಕ್, ಶ್ರೀಲಂಕಾ, ಅಫ್ಘಾನ್, ಬಾಂಗ್ಲಾದೇಶದ ಜತೆಗೆ ನೇಪಾಳ ಕೂಡ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು, ಎಲ್ಲವೂ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30 ಗಂಟೆಗೆ ಶುರುವಾಗಲಿವೆ.
ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ‘ಎ’ ಗುಂಪಿನಲ್ಲಿವೆ. ಅಫ್ಘಾನ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ‘ಬಿ’ ಗುಂಪಿನಲ್ಲಿವೆ. ಗ್ರೂಪ್ ಹಂತದಲ್ಲಿ ಟಾಪ್ ನಾಲ್ಕು ಟೀಂಗಳು ಸೂಪರ್ 4 ಹಂತಕ್ಕೆ ತೇರ್ಗಡೆ ಆಗಲಿವೆ. ಬಳಿಕ ಸೂಪರ್ ಫೋರ್ನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳ ಫೈನಲ್ ನಡೆಯಲಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ