newsfirstkannada.com

ಪಾಕ್​ಗೆ ಗೆಲುವು ಅನಿವಾರ್ಯ.. ಮಳೆ ಬಂದರೆ ಸಿಂಹಳೀಯರಿಗೆ ಲಾಟರಿ.. ಫೈನಲ್​ನಲ್ಲಿ ಭಾರತದ ಎದುರಾಳಿ ಯಾರು..?

Share :

14-09-2023

  ಮತ್ತೊಂದು ಹೈ-ವೋಲ್ಟೆಜ್​ ಕದನಕ್ಕೆ ವೇದಿಕೆ ಸಿದ್ಧ..!

  ಪಾಕ್​ ಫೈನಲ್​ಗೆ ಬರಲಿ ಅನ್ನೋದೆ ಫ್ಯಾನ್ಸ್​ ಪ್ರಾರ್ಥನೆ

  ಭಾರತೀಯ ಕ್ರಿಕೆಟ್ ಪ್ರೇಮಿಗಳ ಈ ಆಸೆ ಈಡೇರುತ್ತಾ..?

ಏಷ್ಯಾಕಪ್​ ಟೂರ್ನಿಯ ಮತ್ತೊಂದು ಹೈ-ವೋಲ್ಟೆಜ್​ ಕದನಕ್ಕೆ ವೇದಿಕೆ ಸಜ್ಜಾಗಿದೆ. ಇಂಡೋ-ಪಾಕ್​ ಪಂದ್ಯಕ್ಕಿಂತ ಈ ಫೈಟ್​​ನ ಕ್ರೇಜ್​​ ಅಭಿಮಾನಿಗಳ ವಲಯದಲ್ಲಿ ಹೆಚ್ಚಾಗಿದೆ. ಪಾಕಿಸ್ತಾನ​ vs ಶ್ರೀಲಂಕಾ ನಡುವಿನ ಡು ಆರ್ ಡೈ ಫೈಟ್​​, ಫೈನಲ್​ ಟಿಕೆಟ್​ ನಿರ್ಧರಿಸಲಿದ್ದು, ಯಾರು ಫೈನಲ್​ಗೆ ಎಂಟ್ರಿ ಕೊಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ಏಷ್ಯಾಕಪ್​ ಟೂರ್ನಿಯಲ್ಲಿ ಇಂಡೋ-ಪಾಕ್​ ಪಂದ್ಯಕ್ಕಾಗಿ ಇಡೀ ವಿಶ್ವ ಕಾದು ಕುಳಿತಿತ್ತು. ಟೂರ್ನಿಯಲ್ಲಿ ಈ ಹೈವೋಲ್ಟೆಜ್​ ಕದನ 2 ಬಾರಿ ನಡೆದಿದ್ದೂ ಆಯ್ತು. ಅಭಿಮಾನಿಗಳಿಗೆ ಎಂಟರ್​ಟೈನ್​ಮೆಂಟ್​ ಸಿಕ್ಕಿದ್ದೂ ಆಯ್ತು. ಇದೀಗ ಮತ್ತೊಂದು ಕಾವೇರಿದ ಕದನಕ್ಕೆ ವೇದಿಕೆ ಸಜ್ಜಾಗಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಇಂದು ಮುಖಾಮುಖಿಯಾಗಲಿವೆ.

ಮತ್ತೊಂದು ಹೈವೋಲ್ಟೆಜ್​ ಕದನಕ್ಕೆ ವೇದಿಕೆ ಸಿದ್ಧ..!

ಇಂದಿನ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಕದನ ಯಾವ ಹೈ-ವೋಲ್ಟೆಜ್​ ಕದನಕ್ಕೂ ಕಡಿಮೆಯಿಲ್ಲ. ಇಂದಿನ ಪಂದ್ಯಕ್ಕೆ ಸೆಮಿಫೈನಲ್​ ಟಚ್​ ಸಿಕ್ಕಿದ್ದು, ಯಾರು ಗೆಲ್ತಾರೆ ಅವರಿಗೆ ಫೈನಲ್​ ಟಿಕೆಟ್​ ಸಿಗಲಿದೆ. ಈಗಾಗಲೇ ಟೀಮ್​ ಇಂಡಿಯಾ ಫೈನಲ್​ಗೆ ಎಂಟ್ರಿ ಕೊಟ್ಟಿದ್ದು, ಸೂಪರ್​​ ಸಂಡೆ ಭಾರತಕ್ಕೆ ಸವಾಲ್​ ಹಾಕುವ ಎದುರಾಳಿ ಯಾರು ಅನ್ನೋದು ಇಂದು ನಿರ್ಧಾರವಾಗಲಿದೆ.

ಬ್ಯಾಟಿಂಗ್​ ಪಾಕ್​ ಅಸ್ತ್ರ, ಬೌಲಿಂಗ್​ನಲ್ಲಿ ಲಂಕಾ ಬಲಿಷ್ಟ..!

ಪಾಕಿಸ್ತಾನ-ಶ್ರೀಲಂಕಾ ಎರಡೂ ತಂಡಗಳಿಗೂ ಟೂರ್ನಿಯಲ್ಲಿ ಇಂಜುರಿ ಕಾಡಿದೆ. ಪಾಕಿಸ್ತಾನ ಪಡೆಯ ಬಲಿಷ್ಟ ಬೌಲಿಂಗ್​ ಯುನಿಟ್​ಗೆ ಇಂಜುರಿಯ ಭೀತಿ ಎದುರಾಗಿದೆ. ಹಾಗಿದ್ರೂ, ಬ್ಯಾಟಿಂಗ್​ನಲ್ಲಿ ಪಾಕ್​ ಪಡೆ ಬಲಿಷ್ಠವಾಗಿಯೇ ಇದೆ. ಎದುರಾಳಿ ಶ್ರೀಲಂಕಾ ಬ್ಯಾಟಿಂಗ್​ನಲ್ಲಿ ಆನ್​ಪೇಪರ್​​ ಅಷ್ಟು ಬಲಿಷ್ಟವಾಗಿಲ್ಲದಿದ್ರೂ, ಬೌಲಿಂಗ್​ನಲ್ಲಿ ಪಾಕ್​ಗಿಂತ ಸಿಕ್ಕಾಪಟ್ಟೆ ಸ್ಟ್ರಾಂಗ್​ ಆಗಿದೆ.

ಲಂಕಾ VS ಪಾಕ್​, ಯಾರಿಗಿದೆ ಅಡ್ವಾಂಟೇಜ್​?

ಉಭಯ ತಂಡಗಳ ಬಲಾಬಲದ ಲೆಕ್ಕಾಚಾರದಲ್ಲಿ ಮಾತ್ರವಲ್ಲ. ರನ್​ ರೇಟ್​​ ಲೆಕ್ಕಾಚಾರದಲ್ಲೂ ಸಿಂಹಳೀಯ ಪಡೆ ಪಾಕಿಸ್ತಾನಕ್ಕಿಂತ ಮೇಲುಗೈ ಸಾಧಿಸಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದ್ರೆ ಶ್ರೀಲಂಕಾ ಪಡೆ ಸುಲಭವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಪಾಕ್​ ಎಂಟ್ರಿಗೆ ಗೆಲುವು ಅನಿವಾರ್ಯವಾಗಿದೆ.

ಸೂಪರ್​-4​ ಪಾಯಿಂಟ್​​ ಟೇಬಲ್​

ಸೂಪರ್​​ 4 ಹಂತದಲ್ಲಿ ಆಡಿದ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಟೀಮ್​ ಇಂಡಿಯಾ +2.690 ರನ್​ರೇಟ್​ನೊಂದಿಗೆ ಫೈನಲ್​ಗೆ ಕ್ವಾಲಿಫೈ ಆಗಿದೆ. ಶ್ರೀಲಂಕಾ, ಪಾಕಿಸ್ತಾನ ತಂಡಗಳು ಆಡಿದ 2 ಪಂದ್ಯಗಳಲ್ಲಿ ತಲಾ 1ರಲ್ಲಿ ಜಯ ಸಾಧಿಸಿವೆ. ಲಂಕಾ -0.200 ನೆಟ್​ ರನ್​ರೇಟ್​ ಹೊಂದಿದ್ರೆ ಪಾಕ್​ -1.892 ರನ್​ರೇಟ್​ ಹೊಂದಿದೆ.

ಕೊಲಂಬೋದಲ್ಲಿ ಮತ್ತೆ ಸ್ಪಿನ್​ ಮ್ಯಾಜಿಕ್​..?

ಕೊಲಂಬೋ ಮೈದಾನದಲ್ಲಿ ಮೊನ್ನೆ ನಡೆದ ಭಾರತ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಸ್ಪಿನ್​ ಮ್ಯಾಜಿಕ್​ ನಡೆಯಿತು. ಸ್ಪಿನ್​ ಬೌಲಿಂಗ್​ ಎದುರು ರನ್​ಗಳಿಕೆಗೆ ಬ್ಯಾಟ್ಸ್​ಮನ್​​​ಗಳು ಪರದಾಡಿದ್ದಾರೆ. ಹೀಗಾಗಿ ಇಂದೂ ಸ್ಪಿನ್​ ಫ್ರೆಂಡ್ಲಿ ಕೊಲಂಬೋದ ಪ್ರೇಮದಾಸ ಪಿಚ್​ನಲ್ಲಿ ಶ್ರೀಲಂಕಾ ಮೇಲುಗೈ ಸಾಧಿಸಲಿದೆ ಅನ್ನೋದು ಎಕ್ಸ್​​ಪರ್ಟ್​ಗಳ ಅಭಿಪ್ರಾಯವಾಗಿದೆ.

ಪಾಕ್​ ಫೈನಲ್​ಗೆ ಬರಲಿ ಅನ್ನೋದೇ ಫ್ಯಾನ್ಸ್​ ಪ್ರಾರ್ಥನೆ..!

ಇಂದಿನ ಪಂದ್ಯದಲ್ಲಿ ಏನಾಗುತ್ತೆ ಅನ್ನೋದು ಗೊತ್ತಿಲ್ಲ. ಮತ್ತೊಂದು ಇಂಡೋ-ಪಾಕ್​ ಹೈವೋಲ್ಟೆಜ್​​ ಕದನವನ್ನ ನೋಡೋ ಆಸೆ ಅಭಿಮಾನಿಗಳದ್ದಾಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಪಾಕ್​ ಗೆಲ್ಲಲಿ ಅನ್ನೋ ಪ್ರಾರ್ಥನೆ ಹಲವರದ್ದಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕ್​ಗೆ ಗೆಲುವು ಅನಿವಾರ್ಯ.. ಮಳೆ ಬಂದರೆ ಸಿಂಹಳೀಯರಿಗೆ ಲಾಟರಿ.. ಫೈನಲ್​ನಲ್ಲಿ ಭಾರತದ ಎದುರಾಳಿ ಯಾರು..?

https://newsfirstlive.com/wp-content/uploads/2023/09/PAK_SL.jpg

Load More