ಏಷ್ಯಾಕಪ್ನಲ್ಲಿ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿದ ಭಾರತ
ಪಾಕ್ ವಿರುದ್ಧ ರಾಹುಲ್ ಆಡಿದ ಅಮೋಘ ಬ್ಯಾಟಿಂಗ್ ಅದ್ಭುತ
ಬಾಂಗ್ಲಾ ವಿರುದ್ಧ ಏಕಾಂಗಿ ಹೋರಾಟದಲ್ಲಿ ಎಡವಿದ ಶುಭ್ಮನ್
ಏಷ್ಯಾಕಪ್ ಮುಗಿಯಿತು. ಟೀಮ್ ಇಂಡಿಯಾ ಚಾಂಪಿಯನ್ ಆಗಿ ಮೆರೆದಾಡಿದ್ದು ಆಯ್ತು. ಆದ್ರೆ, ಈ ಅದ್ಭುತ ಪಯಣದಲ್ಲಿ ಈ ತ್ರಿಮೂರ್ತಿಗಳ ಬ್ಯಾಟಿಂಗ್ನ ಮರೆಯುವಂತೆ ಇಲ್ಲ. ಏಷ್ಯಾಕಪ್ ಟೂರ್ನಿಯಲ್ಲಿ ನಿಜಕ್ಕೂ ಟೀಮ್ ಇಂಡಿಯಾ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದ ಈ ಮಹಾ ಸಮರದಲ್ಲಿ ಅದ್ಭುತ ಆಟವಾಡಿ, ಶತಕ ಸಿಡಿಸಿದ್ದು ತ್ರಿಮೂರ್ತಿಗಳು. ಆದ್ರೆ, ಈ ತ್ರಿಮೂರ್ತಿಗಳಲ್ಲಿ ಯಾರದ್ದು ಟಾಪ್ ಕ್ಲಾಸ್ ಇನ್ನಿಂಗ್ಸ್.
ಪಾಕ್ ಎದುರು ಕೆ.ಎಲ್ ರಾಹುಲ್ರ ಅಮೋಘ ಶತಕ!
ಏಷ್ಯಾಕಪ್ನಲ್ಲಿ ಮೂಡಿ ಬಂದ ಟಾಪ್- ಇನ್ನಿಂಗ್ಸ್ ಅಂದ್ರೆ, ಅದು ಕನ್ನಡಿಗ ಕೆ.ಎಲ್.ರಾಹುಲ್ ಶತಕದಾಟ. ಇಂಜುರಿ ಸಮಸ್ಯೆಯಿಂದ ಲೀಗ್ ಮ್ಯಾಚ್ಗಳಿಗೆ ಅಲಭ್ಯರಾಗಿದ್ದ ರಾಹುಲ್, ಪಾಕ್ ವಿರುದ್ಧದ ಸೂಪರ್-4 ಮ್ಯಾಚ್ ನಿಜಕ್ಕೂ ಬಿಗ್ ಚಾಲೆಂಜ್ ಆಗಿತ್ತು. ಆದ್ರೆ, 3ನೇ ವಿಕೆಟ್ಗೆ ಕೊಹ್ಲಿ ಜೊತೆ ರಾಹುಲ್ ದಾಖಲೆಯ 233 ರನ್ಗಳ ಜೊತೆಯಾಟವಾಡಿದರು. ಈ ಅದ್ಭುತ ಜೊತೆಯಾಟದಲ್ಲಿ 12 ಬೌಂಡರಿ, 2 ಸಿಕ್ಸರ್ ಒಳಗೊಂಡ 111 ರನ್ ಬಾರಿಸಿದ್ದು ನಿಜಕ್ಕೂ ಅಮೋಘ. ಅಷ್ಟೇ ಅಲ್ಲ, ಟೂರ್ನಿ ಉದ್ದಕ್ಕೂ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿ ಸೈ ಎನಿಸಿಕೊಂಡರು.
ಸೂಪರ್-4ನಲ್ಲಿ ವಿರಾಟ್ ಕೊಹ್ಲಿಯ ಸಿಡಿಲಬ್ಬರದಾಟ..!
ಏಷ್ಯಾಕಪ್ನಲ್ಲಿ ಕೊಹ್ಲಿಯಿಂದ ಮೂಡಿ ಬಂದ ಸೂಪರ್ ಆಟವೆಂದ್ರೆ ಪಾಕ್ ವಿರುದ್ಧದ ಸೂಪರ್-4 ಮ್ಯಾಚ್ನ ಶತಕ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ರೋಹಿತ್, ಗಿಲ್ ವಿಕೆಟ್ ಪತನದ ಬಳಿಕ ಇನ್ನಿಂಗ್ಸ್ ಕಟ್ಟುವ ಹೊಣೆ ಹೊತ್ತಿದ್ದ ಕೊಹ್ಲಿ 94 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಒಳಗೊಂಡ ಅಜೇಯ 122 ರನ್ ಸಿಡಿಸಿದರು. ಈ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿತು.
ಬಾಂಗ್ಲಾ ಎದುರು ಶುಭ್ಮನ್ ಏಕಾಂಗಿ ಹೋರಾಟ
ಬಾಂಗ್ಲಾ ವಿರುದ್ಧದ ಅನೌಪಚಾರಿಕ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲೊಪ್ಪಿಕೊಳ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದರು. ಏಕಾಂಗಿಯಾಗಿ ಹೋರಾಟ ನಡೆಸಿದ ಗಮನ ಸೆಳೆದಿದ್ದು ಶುಭ್ಮನ್ ಗಿಲ್..
ಟ್ರಿಕ್ಕಿ ಪಿಚ್ನಲ್ಲಿ ಬಾಂಗ್ಲಾ ನೀಡಿದ್ದ 266 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ಎಡವಿತ್ತು. ಆದ್ರೆ, ಒಂದ್ಕಡೆ ವಿಕೆಟ್ ಬೀಳುತ್ತಿದ್ದರು ಏಕಾಂಗಿ ಹೋರಾಟ ನಡೆಸಿದ ಗಿಲ್ 133 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಒಳಗೊಂಡ 121 ರನ್ ಸಿಡಿಸಿ ಗೆಲುವಿನ ಅಂಚಿನಲ್ಲಿ ಎಡವಿದ್ರು. ಈ ಪಂದ್ಯವನ್ನ ಟೀಮ್ ಇಂಡಿಯಾ ಕೈಚೆಲ್ಲಿತು. ಗಿಲ್ರ ಮನಮೋಹಕ ಆಟ ನಿಜಕ್ಕೂ ನೆಕ್ಸ್ಟ್ ಲೆವೆಲ್.
ಮೆಗಾ ಟೂರ್ನಿಗೂ ಮುನ್ನ ನಡೆದ ಈ ಮಿನಿ ಸಮರ ಟೀಮ್ ಇಂಡಿಯಾ ಪಾಲಿಗೆ ಅಗ್ನಿ ಪರೀಕ್ಷೆಯ ಕಣವಾಗಿತ್ತು. ಈ ಕಣದಲ್ಲಿ ಟೀಮ್ ಇಂಡಿಯಾದ ಟಾಪ್-4 ಬ್ಯಾಟ್ಸ್ಮನ್ಗಳು ನೀಡಿರುವ ಪ್ರದರ್ಶನ ವಿಶ್ವಕಪ್ ಮುನ್ನ ಆತ್ಮವಿಶ್ವಾಸ ಡಬಲ್ ಮಾಡಿರೋದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ