newsfirstkannada.com

ಸ್ಪೆಷಲ್​ ಗಿಫ್ಟ್​ ಕಂಡು ಕೊಹ್ಲಿ ಸ್ಪೀಚ್​ಲೆಸ್​.. ಏಷ್ಯಾಕಪ್​​​ನ ಅದ್ಭುತ ಕ್ಷಣಗಳು ಇಲ್ಲಿವೆ..!​​ ವಿಡಿಯೋ

Share :

18-09-2023

  ವಾಟರ್​ ಬಾಯ್​ ಆದ ವಿಶ್ವದ ಶ್ರೀಮಂತ ಕ್ರಿಕೆಟಿಗ..!

  ಇಂಡೋ-ಪಾಕ್​ ಫೈಟ್​ನಲ್ಲಿ ಸಹೋದರತ್ವದ ಸಂದೇಶ

  ಟೀಮ್​ ಇಂಡಿಯನ್ಸ್​ ನಡೆಗೆ ನೇಪಾಳ ಕ್ರಿಕೆಟರ್ಸ್​ ಖುಷ್.​.!

ಚಾಂಪಿಯನ್​ ಯಾರಾದರೂ ಅನ್ನೋದನ್ನು ಹೊರತುಪಡಿಸಿಯೂ ಈ ಬಾರಿ ಏಷ್ಯಾಕಪ್​ ಟೂರ್ನಿ ಕ್ರಿಕೆಟ್​ ಲೋಕದ ಗಮನ ಸೆಳೆಯಿತು. ಕಾಂಟ್ರವರ್ಸಿ, ಆನ್​ಫೀಲ್ಡ್​ ಆಟ, ರೆಕಾರ್ಡ್​​ಗಳು ಇವನ್ನೆಲ್ಲಾ ಸೈಡಿಗಿಡಿ. ಇದ್ರ ಹೊರತಾಗಿ ಈ ಬಾರಿಯ ಏಷ್ಯಾಕಪ್​ನ ಟಾಪ್​​ ಮೂಮೆಂಟ್ಸ್​ ಇಲ್ಲಿದೆ.

ಏಷ್ಯಾಕಪ್​ ಟೂರ್ನಿ ಆರಂಭವಾದಾಗಿನಿಂದ ಈವರೆಗೆ ಇದೊಂದು ಬ್ಯಾಟ್​ ಮತ್ತು ಬಾಲ್​ ವಾರ್​ ಆಗಿ ಮಾತ್ರ ಸೀಮಿತವಾಗಿತ್ತು. ಸಿಕ್ಕಾಪಟ್ಟೆ ಡಿಫರೆಂಟ್​ ಆಗಿ ಟೂರ್ನಿ ಕಾಣಿಸಿಕೊಳ್ತು. ಆನ್​ಫೀಲ್ಡ್​ನ ಹೋರಾಟದ ಹೊರತಾಗಿ ಆಪ್​ ದ ಫೀಲ್ಡ್​ನ ಕೆಲ ವಿಚಾರಗಳು ವಿಶ್ವ ಕ್ರಿಕೆಟ್​ ಲೋಕದ ಗಮನ ಸೆಳೆದ್ವು.

ಈ ಬಾರಿಯ ಏಷ್ಯಾಕಪ್​ ಟೂರ್ನಿಯಲ್ಲಿ ಜಗತ್ತಿನ ಶ್ರೀಮಂತ ವಾಟರ್​ ಬಾಯ್​​ ದರ್ಶನವಾಯ್ತು. ಬಾಂಗ್ಲಾದೇಶ ವಿರುದ್ಧದ ಸೂಪರ್​ 4 ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಕೊಹ್ಲಿ ವಾಟರ್​ ಬಾಯ್​ ಜವಾಬ್ದಾರಿ ನಿರ್ವಹಿಸಿದ್ರು. ಬ್ರೇಕ್​ ವೇಳೆ ಡ್ರಿಂಕ್ಸ್​ ಹಿಡಿದು ಫನ್ನಿಯಾಗಿ ಡ್ಯಾನ್ಸ್​ ಮಾಡಿಕೊಂಡು ಬಂದ ಕೊಹ್ಲಿ ಸರಳತೆಯಿಂದ ಎಲ್ಲರ ಮನ ಗೆದ್ರು.

ಸಹೋದರತ್ವದ ಸಂದೇಶ ಸಾರಿದ ಇಂಡೋ-ಪಾಕ್​ ಫೈಟ್​

ಇಂಡಿಯಾ-ಪಾಕಿಸ್ತಾನ ನಡುವಿನ ಕ್ರಿಕೆಟ್​ ಪಂದ್ಯದ ಕಾವು ವಿಶ್ವದೆಲ್ಲೆಡೆ ಹಬ್ಬಿದ್ದಾಗ ತಮ್ಮ ನಡೆಯಿಂದ ಪಾಕ್​ ವೇಗಿ ಶಾಹಿನ್​ ಶಾ ಅಫ್ರಿದಿ ಎಲ್ಲರ ಮನ ಗೆದ್ರು. ಇಂಡೋ-ಪಾಕ್​ ಸೂಪರ್​-4 ಫೈಟ್​ಗೂ ಮುನ್ನ ತಂದೆಯಾದ ಬೂಮ್ರಾಗೆ, ಸ್ಪೆಷಲ್​ ಗಿಫ್ಟ್​ ನೀಡಿ ವಿಷ್​ ಮಾಡಿ ಸಹೋದರತ್ವದ ಸಂದೇಶ ಸಾರಿದ್ರು. ಇಷ್ಟೇ ಅಲ್ಲ.. ಪಂದ್ಯದ ವೇಳೆ ಪಾಕ್​ ಬ್ಯಾಟರ್​ ಸಲ್ಮಾನ್​ ಆಘಾರ ಕಣ್ಣಿನ ಬಳಿ ಚೆಂಡು ಬಡಿದು ರಕ್ತಸ್ರಾವ ಆದಾಗ ಕೆ.ಎಲ್​ ರಾಹುಲ್​ ಸ್ಪಂದಿಸಿದ ರೀತಿಯೂ ಎಲ್ಲರ ಗಮನ ಸೆಳೆಯಿತು.

ಟೀಮ್​ ಇಂಡಿಯಾ​ ನಡೆಗೆ ನೇಪಾಳ ಕ್ರಿಕೆಟರ್ಸ್​ ಖುಷ್.​.!

ಏಷ್ಯಾಕಪ್​ ಟೂರ್ನಿಗೆ ಮೊದಲ ಬಾರಿ ಎಂಟ್ರಿ ಕೊಟ್ಟ ನೇಪಾಳ ಟೀಮ್​ ಇಂಡಿಯಾ ಎದುರು ಫೈನೆಸ್ಟ್​ ಪರ್ಫಾಮೆನ್ಸ್​ ನೀಡ್ತು. ಆ ಬಳಿಕ ನೇಪಾಳ ಡ್ರೆಸ್ಸಿಂಗ್​ ರೂಮ್​ ತೆರಳಿ ಟೀಮ್​ ಇಂಡಿಯಾ ಕ್ರಿಕೆಟಿಗರು ಅಭಿನಂದಿಸಿ ಕ್ರೀಡಾಸ್ಪೂರ್ತಿ ಮೆರೆದ್ರು. ದ್ರಾವಿಡ್​, ಕೊಹ್ಲಿ, ರೋಹಿತ್ ತಮ್ಮ ನಡೆಯಿಂದಲೇ ಎಲ್ಲರ ಮನ ಗೆದ್ದರು.

ಜೂನಿಯರ್​ ಆಟಗಾರರಿಗೆ ಕೊಹ್ಲಿ ಕ್ಲಾಸ್​..!
ಟೀಮ್​ ಇಂಡಿಯಾದ ಅಭ್ಯಾಸಕ್ಕೆ ನೆರವಾಗಲು ಶ್ರೀಲಂಕಾದ ಜೂನಿಯರ್​ ಲೆವೆಲ್ ಕ್ರಿಕೆಟರ್​​ಗಳು ನೆಟ್ಸ್​ನಲ್ಲಿ ಆಟಗಾರರಿಗೆ​​ ಬೌಲಿಂಗ್​ ಮಾಡಿದ್ರು. ಈ ಆಟಗಾರರೊಂದಿಗೆ ಕೆಲ ಕಾಲ ಕಳೆದ ಕೊಹ್ಲಿ, ಅನುಭವದ ಪಾಠ ಮಾಡಿದರು.

ಸ್ಪೆಷಲ್​ ಗಿಫ್ಟ್​ ನೋಡಿ ಸ್ಪೀಚ್​ಲೆಸ್​ ಆದ ಕೊಹ್ಲಿ.!

ಕೊಹ್ಲಿ ಅನುಭವದ ಪಾಠ ಒಂದೆಡೆಯಾದ್ರೆ, ಲೆಜೆಂಡ್​ ಕೊಹ್ಲಿಯನ್ನ ಭೇಟಿಯಾದ ಖುಷಿ ಜೂನಿಯರ್​ ಕ್ರಿಕೆಟರ್​ಗಳದ್ದಾಗಿತ್ತು. ಅದ್ರಲ್ಲಿದ್ದ ಒಬ್ಬ ಕ್ರಿಕೆಟರ್​​ ಕೊಹ್ಲಿಗೆ ಸ್ಪೆಷಲ್​ ಗಿಫ್ಟ್​ ನೀಡಿ ಕೊಹ್ಲಿಯನ್ನು ಸ್ಪೀಚ್​ಲೆಸ್​ ಮಾಡಿಬಿಟ್ಟ.

ಮಳೆಯಾಟದ ನಡುವೆ ಮನ ಗೆದ್ದ ಟ್ರೂ ಫೈಟರ್ಸ್​..!

ಈ ಬಾರಿಯ ಏಷ್ಯಾಕಪ್​ ಟೂರ್ನಿ ಬ್ಯಾಟ್​-ಬಾಲ್​ ವಾರ್​ಗಿಂತ ಮಳೆಯಿಂದಲೇ ಹೆಚ್ಚು ಸುದ್ದಿಯಾಯ್ತು. ಆದ್ರೆ, ವರುಣನ ಅವಕೃಪೆಯ ನಡುವೆಯೂ ಪಂದ್ಯವನ್ನ ನಡೆಸಲು ಹೋರಾಡಿದ ಗ್ರೌಂಡ್​ ಸ್ಟಾಫ್​ ಶ್ರಮವನ್ನ ಮೆರಯೋಕೆ ಸಾಧ್ಯಾನೆ ಇಲ್ಲ. ಸುರಿವ ಮಳೆ.. ಕೊರೆವ ಚಳಿಯನ್ನ ಲೆಕ್ಕಿಸದೆ ಪಂದ್ಯ ನಡೀಬೇಕು ಅನ್ನೋ ಏಕೈಕ ಉದ್ದೇಶಕ್ಕೆ ಇವರ ಪಟ್ಟ ಶ್ರಮ ಇದ್ಯಲ್ಲ.. ಅದು ಬೆಲೆ ಕಟ್ಟಲಾಗದ್ದು!

ಒಟ್ಟಿನಲ್ಲಿ, ಈ ಬಾರಿಯ ಏಷ್ಯಾಕಪ್​ ಟೂರ್ನಿ ಕೇವಲ ಬ್ಯಾಟ್​ ಮತ್ತು ಬಾಲ್​ನ ವಾರ್​ಗೆ ಮಾತ್ರ ಸೀಮಿತವಾಗಿರಲಿಲ್ಲ. ಕ್ರಿಕೆಟ್​ನ ಜೊತೆಗೆ ಸಹೋದರತ್ವ, ಮಾನವೀಯತೆ, ತ್ಯಾಗ, ಪರಿಶ್ರಮ ಎಲ್ಲದಕ್ಕೂ ಸಾಕ್ಷಿಯಾಯ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸ್ಪೆಷಲ್​ ಗಿಫ್ಟ್​ ಕಂಡು ಕೊಹ್ಲಿ ಸ್ಪೀಚ್​ಲೆಸ್​.. ಏಷ್ಯಾಕಪ್​​​ನ ಅದ್ಭುತ ಕ್ಷಣಗಳು ಇಲ್ಲಿವೆ..!​​ ವಿಡಿಯೋ

https://newsfirstlive.com/wp-content/uploads/2023/09/VIRAT_KOHLI-3-1.jpg

Load More