newsfirstkannada.com

4ನೇ ಓವರ್​​ನಲ್ಲೇ ಖೇಲ್ ಖತಂ.. ಸಿರಾಜ್​​​-ಹಾರ್ದಿಕ್ ‘ಲಂಕಾ ದಹನ’ ರೋಚಕ..!

Share :

18-09-2023

    8ನೇ ಬಾರಿ ಟ್ರೋಫಿ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತ

    ಏಕದಿನದಲ್ಲಿ ಸಿರಾಜ್​​ ಜೀವಮಾನದ ಶ್ರೇಷ್ಠ ಸಾಧನೆ

    ಲಂಕಾ ನೆರವಿಗೆ ಬಾರದ ಯಾವೊಬ್ಬ ಬ್ಯಾಟ್ಸ್​​ಮನ್

ಅಬ್ಬಬ್ಬಾ..! ಏನ್​ ಬೆಂಕಿ ಬೌಲಿಂಗ್ ಅಂತೀರಾ..ಶ್ರೀಲಂಕಾ ತಂಡಕ್ಕೆ ಉಸಿರಾಡಲು ಚಾನ್ಸೇ ಕೊಡ್ಲಿಲ್ಲ. ಭಾರತದ ಡೆಡ್ಲಿ ದಾಳಿಗೆ ಆತಿಥೇಯ ಲಂಕಾ ಪತರುಗುಟ್ಟಿತು. ಫೈನಲ್​ ಕಾಳಗದಲ್ಲಿ ಅಲ್ಪ ಗುರಿ ಬೆನ್ನಟ್ಟಿದ ಭಾರತ 10 ವಿಕೆಟ್​ಗಳ ಪ್ರಚಂಡ ಗೆಲುವು ದಾಖಲಿಸ್ತು. ಆ ಮೂಲಕ ಏಷ್ಯನ್ ಚಾಂಪಿಯನ್ ಆಗಿ ಮೆರೆದಾಡಿತು.

ಟಾಸ್​ ಗೆದ್ದ ಲಂಕಾ ಲೆಕ್ಕಚಾರ ಉಲ್ಟಾ

ಕೊಲಂಬೋದಲ್ಲಿ ಟಾಸ್ ಗೆದ್ದು ಬ್ಯಾಟಿಂಗಿಳಿದ ಶ್ರೀಲಂಕಾ ಬಿಗ್ ಟಾರ್ಗೆಟ್​ ಸೆಟ್​​​​ ಮಾಡುವ ಯೋಚನೆಯಲ್ಲಿತ್ತು. ಆದ್ರೆ ಇಂಡಿಯನ್ ಬೌಲರ್ಸ್​ ಸಿಂಹಳೀಯರ ಲೆಕ್ಕಚಾರವನ್ನ ಉಲ್ಟಾ ಮಾಡಿದ್ರು. ಮೊದಲ ಓವರ್​​ನಲ್ಲೇ ಬೂಮ್ರಾ ಲಂಕಾಗೆ ಶಾಕ್​ ನೀಡಿದ್ರು.

4ನೇ ಓವರ್​​ನಲ್ಲೇ ಸಿಂಹಳೀಯರ ಖೇಲ್ ಖತಂ..!

4ನೇ ಓವರ್​​​​ನಲ್ಲಿ ದಾಳಿಗಿಳಿದ ಮೊಹಮ್ಮದ್ ಸಿರಾಜ್​ ದೊಡ್ಡ ಆಘಾತವನ್ನೇ ನೀಡಿದ್ರು. ಎದುರಾಳಿ ಕನಸಲ್ಲೂ ಯೋಚಿಸದ ರೀತಿಯಲ್ಲಿ ಬೆಂಕಿ ಉಗುಳಿದ ಈ ಯಂಗ್​ಬೌಲರ್​ ಒಂದೇ ಓವರ್​​ನಲ್ಲಿ 4 ವಿಕೆಟ್​​​​​​ ಬೇಟೆಯಾಡಿದ್ರು. ಪಾಥುಮ್ ನಿಸ್ಸಂಕ, ಸಮರ ವಿಕ್ರಮ, ಚಾರಿತ್​​​ ಅಸಲಂಕ ಹಾಗೂ ಡಿಸಿಲ್ವಾ ಸಿಂಗಲ್ ಡಿಜಿಟ್​​ಗೆ ಪೆವಿಲಿಯನ್ ಸೇರಿದ್ರು.

ಲಂಕಾ ನೆರವಿಗೆ ಬಾರದ ಯಾವೊಬ್ಬ ಬ್ಯಾಟ್ಸ್​​ಮನ್

ಫ್ರಮ್​ ಟಾಪ್ ಟು ಬಾಟಮ್​​​..ಶ್ರೀಲಂಕಾದ ಯಾವೊಬ್ಬ ಬ್ಯಾಟ್ಸ್​​ಮನ್ ಕೂಡ ತಂಡದ ನೆರವಿಗೆ ಬರ್ಲಿಲ್ಲ. ಬಂದ ಪುಟ್ಟ ಹೋದ ಪುಟ್ಟ ರೀತಿಯಲ್ಲಿ ಗೂಡು ಸೇರಿದ್ರು. ಟೆರರ್​ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ ಹಾಗೂ ಹಾರ್ದಿಕ್​ ಪಾಂಡ್ಯ ಲಂಕಾ ದಹನ ಮಾಡಿದ್ರು. ಸ್ವಿಂಗ್ ಮೂಲಕ ಲಂಕಾ ಕಂಗೆಡಿಸಿದ ಸಿರಾಜ್ 6 ವಿಕೆಟ್​ ಕಬಳಿಸಿದ್ರೆ ಹಾರ್ದಿಕ್​ ಪಾಂಡ್ಯ 3 ವಿಕೆಟ್​​ ಕಬಳಿಸಿದ್ರು. ಪರಿಣಾಮ ಲಂಕಾ ತಂಡ ಕೇವಲ 50 ರನ್​ಗೆ ಆಲೌಟಾಯ್ತು. ಶನಕ ಪಡೆ ಏಕದಿನ ಕ್ರಿಕೆಟ್​ನಲ್ಲಿ 2ನೇ ಬಾರಿ ಅತಿ ಕಮ್ಮಿ ಮೊತ್ತ ಗಳಿಸಿತು. 2012 ರಲ್ಲಿ ಆಫ್ರಿಕಾ ವಿರುದ್ಧ 43 ರನ್​ಗೆ ಆಲೌಟಾಗಿತ್ತು.

ಟೀಮ್ ಇಂಡಿಯಾಗೆ 51 ರನ್ ಟಾರ್ಗೆಟ್

ಈಸಿ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾಗೆ ಓಪನರ್ಸ್​ ಅಬ್ಬರಿಸಿದ್ರು. ಬಿರುಸಿನ ಆಟವಾಡಿದ ಶುಭ್​​ಮನ್​​​ ಗಿಲ್ ಹಾಗೂ ಇಶಾನ್ ಕಿಶನ್ ಜೋಡಿ ವಿಕೆಟ್​ ನೀಡ್ಲಿಲ್ಲ. ಪರಿಣಾಮ ಭಾರತ ತಂಡ ​ 6.1 ಓವರ್​​ಗಳಲ್ಲೆ ಗುರಿ ಮುಟ್ಟಿತು. ಗಿಲ್​​ ಅಜೇಯ 27 ಹಾಗೂ ಕಿಶನ್​ 23 ರನ್​ ಗಳಿಸಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟರು.

8ನೇ ಬಾರಿ ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ

ಫೈನಲ್​​ ವಾರ್​​ನಲ್ಲಿ ಲಂಕಾ ಸದೆಬಡಿದ ಟೀಮ್ ಇಂಡಿಯಾ ಏಷ್ಯಾಕಪ್ ಹಿಸ್ಟರಿಯಲ್ಲಿ 8ನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು. 7 ಬಾರಿ ಏಕದಿನ ಮಾದರಿಯಲ್ಲಿ ಕಪ್​ ಗೆದ್ರೆ 1 ಬಾರಿ ಟಿ20 ಯಲ್ಲಿ ಟ್ರೋಫಿ ಜಯಿಸಿ ಚರಿತ್ರೆ ಸೃಷ್ಟಿಸಿದೆ. ಟೂರ್ನಿಯಲ್ಲಿ ಅತಿಹೆಚ್ಚು ಬಾರಿ ಕಪ್​ ಗೆದ್ದ ಹಿರಿಮೆ ಕೂಡ ಭಾರತದ್ದಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

4ನೇ ಓವರ್​​ನಲ್ಲೇ ಖೇಲ್ ಖತಂ.. ಸಿರಾಜ್​​​-ಹಾರ್ದಿಕ್ ‘ಲಂಕಾ ದಹನ’ ರೋಚಕ..!

https://newsfirstlive.com/wp-content/uploads/2023/09/TEAM_INDIA-6.jpg

Load More