newsfirstkannada.com

ಇಂಡೋ-ಬಾಂಗ್ಲಾ ಪಂದ್ಯದ ಹೈಲೈಟ್ಸ್​ ಇಲ್ಲಿದೆ.. ಶುಭ್​ಮನ್ ಗಿಲ್, ಅಕ್ಷರ್ ಬ್ಯಾಟಿಂಗ್​ ಹೇಗಿತ್ತು..?

Share :

16-09-2023

    ಬಾಂಗ್ಲಾಗೆ ಆರಂಭದಲ್ಲೇ ಆಘಾತ ನೀಡಿದ ಶಮಿ, ಶಾರ್ದುಲ್

    5ನೇ ವಿಕೆಟ್​​ಗೆ ಶಕೀಬ್- ಅಲ್- ಹಸನ್ ಮಸ್ತ್ ಬ್ಯಾಟಿಂಗ್.!

    ಭಾರತಕ್ಕೆ ಕೊನೆ ಓವರ್​ನಲ್ಲಿ ಎಷ್ಟು ರನ್ ಬೇಕಿತ್ತು ಗೊತ್ತಾ..?

ಏಷ್ಯಾಕಪ್ ಟೂರ್ನಿಯ ಕೊನೆ ಸೂಪರ್​​​-4 ಪಂದ್ಯದಲ್ಲಿ ಟೀಮ್ ಇಂಡಿಯಾ ವಿರೋಚಿತ ಸೋಲು ಕಂಡಿದೆ. ಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ರೋಹಿತ್ ಪಡೆ ನಿನ್ನೆ ಬಾಂಗ್ಲಾಗೆ ಶರಣಾಯಿತು. ಇಂಡೋ-ಬಾಂಗ್ಲಾ ಪಂದ್ಯದ ಹೈಲೈಟ್ಸ್​ ಹೇಗಿತ್ತು?

ಕೊಲಂಬೋದಲ್ಲಿ ಟಾಸ್ ಸೋತ ಬಾಂಗ್ಲಾದೇಶ, ಮೊದಲು ಬ್ಯಾಟಿಂಗ್ ನಡೆಸಿತು. ಬೃಹತ್ ಮೊತ್ತ ಕಲೆಹಾಕೋ ಲೆಕ್ಕಾಚಾರದಲ್ಲಿದ್ದ ಬಾಂಗ್ಲಾಗೆ, ಆರಂಭದಲ್ಲೇ ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಶಾರ್ದುಲ್ ಠಾಕೂರ್ ಆಘಾತ ನೀಡಿದರು. 59 ರನ್ ​​ಗಳಿಸುವಷ್ಟರಲ್ಲೇ ಬಾಂಗ್ಲಾ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇಶನ್ ಕಿಶನ್ ಔಟ್​ ಆದ ಕ್ಷಣ

ನಾಯಕನ ಆಟ ಆಡಿದ ಶಕೀಬ್

5ನೇ ವಿಕೆಟ್​​ಗೆ ನಾಯಕ ಶಕೀಬ್-ಅಲ್-ಹಸನ್ ಮತ್ತು ಹೃದಯೋಯ್ ಸೇರಿ ತಂಡಕ್ಕೆ ಆಸರೆಯಾದರು. ಶತಕದ ಜೊತೆಯಾಟವಾಡಿ ಟೀಮ್ ಇಂಡಿಯಾ ಬೌಲರ್​ಗಳನ್ನ ಕಾಡಿದರು. 80 ರನ್​ ಸಿಡಿಸುತ್ತಿದಂತೆ ಶಕೀಬ್ ಔಟಾದ್ರೆ, ಹೃದಯೋಯ್ 54 ರನ್ ​ಗಳಿಸಿ ಹೋರಾಟ ಮುಗಿಸಿದರು. ನಸುಮ್ ಅಹ್ಮದ್ 44 ರನ್ ಮತ್ತು ಮೆಹದಿ ಹಸನ್ ಅಜೇಯ 29 ರನ್ ​ಗಳಿಸಿದರು.

ಅಂತಿಮವಾಗಿ ಬಾಂಗ್ಲಾ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್​ಗಳಿಸಿತು. ಟೀಮ್ ಇಂಡಿಯಾ ಪರ ಶಾರ್ದುಲ್ ಠಾಕೂರ್ 3 ವಿಕೆಟ್ ಪಡೆದ್ರೆ, ಶಮಿ 2 ವಿಕೆಟ್ ಪಡೆದು ಮಿಂಚಿದರು.

ಸೆಂಚುರಿ ಸಿಡಿಸಿ ಸಂಭ್ರಮಿಸಿದ ಶುಭ್​ಮನ್ ಗಿಲ್

ರೋಹಿತ್, ತಿಲಕ್ ಬೇಗ ಔಟ್ ಆದರು

266 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ್ದ ಟೀಮ್ ಇಂಡಿಯಾ, ಮೊದಲ 3 ಓವರ್​ಗಳಲ್ಲೇ ನಾಯಕ ರೋಹಿತ್ ಶರ್ಮಾ ಮತ್ತು ತಿಲಕ್ ವರ್ಮಾ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಕೆ.ಎಲ್.ರಾಹುಲ್ ಕೇವಲ 19 ರನ್​ ಗಳಿಸಿ ನಿರ್ಗಮಿಸಿದ್ರೆ, ಇಶಾನ್ ಕಿಶನ್ 5 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಫ್ಲಾಪ್​ ಶೋ ಕಂಟಿನ್ಯೂ ಮಾಡಿದ ಸೂರ್ಯಕುಮಾರ್​ ಯಾದವ್​ 26ಕ್ಕೆ ವಿಕೆಟ್​​ ಒಪ್ಪಿಸಿಸುತ್ತಿದ್ದಂತೆ ಆಲ್​ರೌಂಡರ್ ಜಡೇಜಾ ಒಂದಂಕಿಗೆ ಸುಸ್ತಾಗಿ ಹೋದರು.

ಇದನ್ನು ಓದಿ: SIIMA Awards: ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡ ಕಾಂತಾರ.. ರಕ್ಷಿತ್​ ಶೆಟ್ಟಿಯ 777 ಚಾರ್ಲಿಗೆ ಏನೆಲ್ಲ ಸಿಕ್ಕಿದೆ..?

ಒಂದೆಡೆ ಬ್ಯಾಕ್ ಟು ಬ್ಯಾಕ್ ವಿಕೆಟ್​​​​ ಉರುಳುತ್ತಿದ್ರೂ ಶುಭ್​​​​ಮನ್‌​​​ ಗಿಲ್​​ ಒನ್​​ಮ್ಯಾನ್ ಆರ್ಮಿಯಂತೆ ಹೋರಾಡಿದ್ರು. ಸರಿಯಾಗೇ ಬಾಂಗ್ಲಾ ಬೌಲರ್​​​ಗಳ ಬೆಂಡೆತ್ತಿದ ಪ್ರಿನ್ಸ್​​​​ ಸೆಂಚುರಿ ಸಿಡಿಸಿ ಶೈ ನ್ ಆದ್ರು. ಸೆಂಚುರಿ ಬಳಿಕ ಮತ್ತಷ್ಟು ವೈಲೆಂಟಾದ ಗಿಲ್​ 121 ರನ್​​ಗೆ ಆಟ ನಿಲ್ಲಿಸಿದ್ರು. ಬಳಿಕ ಅಕ್ಷರ್ ಪಟೇಲ್​ ಸ್ಫೋಟಕ 41 ರನ್ ಸಿಡಿಸಿ ತಂಡವನ್ನ ಗೆಲುವಿನ ಸನಿಹದಲ್ಲಿ ಔಟ್​ ಆದರು. ಅಂತಿಮ ಓವರ್​​​ನಲ್ಲಿ ಗೆಲ್ಲಲು 12 ರನ್​ ಗಳಿಸಿಬೇಕಿದ್ದ ಟೀಮ್ ಇಂಡಿಯಾ 259 ರನ್​​​ಗಳಿಗೆ ಆಲೌಟಾಗಿ 6 ರನ್​​ಗಳಿಂದ ಸೋಲೊಪ್ಪಿಕೊಂಡಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂಡೋ-ಬಾಂಗ್ಲಾ ಪಂದ್ಯದ ಹೈಲೈಟ್ಸ್​ ಇಲ್ಲಿದೆ.. ಶುಭ್​ಮನ್ ಗಿಲ್, ಅಕ್ಷರ್ ಬ್ಯಾಟಿಂಗ್​ ಹೇಗಿತ್ತು..?

https://newsfirstlive.com/wp-content/uploads/2023/09/GILL_AKSHARA.jpg

Load More