newsfirstkannada.com

ಅಲ್ಪ ಮೊತ್ತದ ಗುರಿ ಬೆನ್ನಟ್ಟಿಯೂ ಲಂಕಾ ಫೇಲ್; ಸಿಂಹಳಿಯರ ಪ್ಲಾನ್ ಉಲ್ಟಾ-ಪಲ್ಟಾ ಮಾಡಿದ್ದು ಇವರೇ..!

Share :

13-09-2023

  ಭಾರತ-ಲಂಕಾ ಮಧ್ಯೆ ಏಷ್ಯಾಕಪ್​​ ಸೂಪರ್​​​-4 ಪಂದ್ಯ

  ವೆಲ್ಲಲಗೆ ಸ್ಪಿನ್​​ ಮೋಡಿಗೆ ಇಂಡಿಯನ್ ಬ್ಯಾಟರ್ಸ್​ ತಬ್ಬಿಬ್ಬು..!

  ಸಾಲಿಡ್​​​​ ಆರಂಭದ ಹೊರತಾಗಿಯೂ ಕುಸಿದ ಭಾರತ

ಇಂಡೋ-ಪಾಕ್​​ ಸಪ್ಪೆ ಸಪ್ಪೆ ಆಗಿತ್ತು. ಆದರೆ ಭಾರತ-ಶ್ರೀಲಂಕಾ ಪಂದ್ಯ ಹಾಗೆ ಆಗಲಿಲ್ಲ. ಲೋ ಸ್ಕೋರ್​ ಗೇಮ್​​ ನೋಡುಗರಿಗೆ ಕಂಪ್ಲೀಟ್​​​ ಮನರಂಜನೆ ನೀಡ್ತು. ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಯಾಡಿತು.

ಸಾಲಿಡ್​​​​ ಆರಂಭದ ಹೊರತಾಗಿಯೂ ಕುಸಿದ ಭಾರತ

ಕೊಲಂಬೋದಲ್ಲಿ ಟಾಸ್ ಗೆದ್ದು ಬ್ಯಾಟಿಂಗಿಳಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್​​​​​ ಸಾಲಿಡ್ ಓಪನಿಂಗ್ ಒದಗಿಸಿದ್ರು. ಸಿಂಹಳೀಯರ ಮೈಚಳಿ ಬಿಡಿಸಿದ ಜೋಡಿ ಮೊದಲ ವಿಕೆಟ್​ಗೆ ಬಿರುಸಿನ 80 ರನ್​ಗಳ ಜೊತೆಯಾಟವಾಡ್ತು. ಕ್ಯಾಪ್ಟನ್ ರೋಹಿತ್​ ಶರ್ಮಾ ಸ್ಫೋಟಕ ಹಾಫ್​ಸೆಂಚುರಿ ಬಾರಿಸಿ ಪೆವಿಲಿಯನ್ ಸೇರಿಕೊಂಡ್ರೆ ಶುಭ್​​ಮನ್​​ ಗಿಲ್​ ಆಟ 19 ರನ್​ಗೆ ಸ್ಟಾಪ್​ ಆಯ್ತು. ಕೊಲಂಬೋ ಕಿಂಗ್ ವಿರಾಟ್ ಕೊಹ್ಲಿ ಜಸ್ಟ್​ 3 ರನ್​ ಔಟಾಗಿ ನಿರಾಸೆ ಮೂಡಿಸಿದರು.

4ನೇ ವಿಕೆಟ್​ಗೆ ರಾಹುಲ್​​​​​​-ಇಶಾನ್ ಕಿಶನ್ ಆಸರೆ

11 ರನ್ ಅಂತರದಲ್ಲಿ ಭಾರತದ ಟಾಪ್​​​-ತ್ರಿ ಬ್ಯಾಟ್ಸ್​​ಮನ್​ಗಳು ಔಟಾದ್ರು. 4ನೇ ವಿಕೆಟ್​ಗೆ ಕೆ.ಎಲ್ ರಾಹುಲ್​ ಹಾಗೂ ಇಶಾನ್ ಜೋಡಿ ಅರ್ಧಶತದ ಜೊತೆಯಾಡಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಲಂಕಾಗೆ ಕಂಟವಾಗಿದ್ದ ಈ ಜೋಡಿಯನ್ನ ಸ್ಪಿನ್ನರ್​​​ ವೆಲ್ಲಲಗೆ ಬೇರ್ಪಡಿಸಿದರು. ರಾಹುಲ್​​ ಆಟ 39ಕ್ಕೆ ಅಂತ್ಯವಾದ್ರೆ ವೆಲ್​ ಸೆಟಲ್ಡ್​ ಕಿಶನ್​ ಅಸಲಂಕ ಸ್ಪಿನ್​ ಬಲೆಗೆ ಬಿದ್ದರು.

59 ರನ್ ಅಂತರದಲ್ಲಿ 6 ವಿಕೆಟ್​​ ಪತನ

ರಾಹುಲ್​​​​ ಹಾಗೂ ಕಿಶನ್​ ಜೋಡಿ ನಿರ್ಗಮನದ ಬಳಿಕ ಭಾರತ ತಂಡ ಹಠಾತ್ ಕುಸಿತ ಕಂಡಿತು. 59 ರನ್ ಅಂತರದಲ್ಲಿ ಕೊನೆ 6 ವಿಕೆಟ್​​ಗಳನ್ನು ಕಳೆದುಕೊಳ್ತು. ಫೈನಲಿ ಅಸಲಂಕಾ ಹಾಗೂ ವೆಲ್ಲಲಗೆ ಸ್ಪಿನ್ ದಾಳಿಗೆ ಬೆದರಿದ ಭಾರತ 213 ರನ್​ಗೆ ಆಲೌಟಾಯ್ತು. ಅಲ್ಪಗುರಿಯನ್ನ ಸುಲಭವಾಗಿ ಚೇಸ್ ಮಾಡುವ ಲಂಕಾ ಪ್ಲಾನ್​​ಅನ್ನ ಇಂಡಿಯನ್ ಸ್ಪಿನ್ನರ್ಸ್​ ತಲೆಕೆಳಗಾಗಿಸಿದ್ರು. ಆರಂಭಿಕರನ್ನ ಬೂಮ್ರಾ-ಸಿರಾಜ್​​​ ಖೆಡ್ಡಾಗೆ ಕೆಡವಿದ್ರೆ , ಕುಲ್​ದೀಪ್​ ಯಾದವ್​ ಮಿಡಲ್ ಆರ್ಡರ್​ ಗೆ ಪೆಟ್ಟು ನೀಡಿದರು.

ಭಾರತಕ್ಕೆ ದುಸ್ವಪ್ನರಾದ ದುನಿತ್ ವೆಲ್ಲಲಗೆ

99 ರನ್​ಗೆ 6 ವಿಕೆಟ್ ಕಳೆದುಕೊಂಡಾಗ ಲಂಕಾ ಕಥೆ ಮುಗೀತು ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ 20 ವರ್ಷ ವೆಲ್ಲಲಗೆ 7ನೇ ವಿಕೆಟ್​​ಗೆ ಡಿಸಿಲ್ವಾ ಜೊತೆಗೂಡಿ 63 ರನ್ ಕಲೆಹಾಕಿ ಪಂದ್ಯಕ್ಕೆ ಟ್ವಿಸ್ಟ್​ ನೀಡಿದರು. ಬೌಲಿಂಗ್​​​​​ನಲ್ಲಿ 5 ವಿಕೆಟ್ ಕಬಳಿಸಿದ್ದ ವೆಲ್ಲಲಗೆ ಬ್ಯಾಟಿಂಗ್​​ನಲ್ಲಿ ಅಜೇಯ 42 ರನ್​ ಗಳಿಸಿ ಭಾರತಕ್ಕೆ ದುಸ್ವಪ್ನರಾಗಿ ಕಾಡಿದರು. ವೆಲ್ಲಲಗೆ ದಿಟ್ಟ ಹೋರಾಟದ ಹೊರತಾಗಿಯೂ 172 ರನ್​​​ಗೆ ಆಲೌಟಾಯ್ತು. 41 ರನ್​​ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ಬಹುತೇಕ ಫೈನಲ್​ ಟಿಕೆಟ್​ ಖಾತ್ರಿಪಡಿಸಿಕೊಳ್ತು. 4 ವಿಕೆಟ್ ಕಬಳಿಸಿದ ಕುಲ್ದೀಪ್​​​ ಯಾದವ್​​ ವಿಕ್ಟರಿ ಹೀರೋ ಆಗಿ ಮೆರೆದಾಡಿದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಲ್ಪ ಮೊತ್ತದ ಗುರಿ ಬೆನ್ನಟ್ಟಿಯೂ ಲಂಕಾ ಫೇಲ್; ಸಿಂಹಳಿಯರ ಪ್ಲಾನ್ ಉಲ್ಟಾ-ಪಲ್ಟಾ ಮಾಡಿದ್ದು ಇವರೇ..!

https://newsfirstlive.com/wp-content/uploads/2023/09/Kuldeep.jpg

Load More