ನೇಪಾಳ ವಿರುದ್ಧ 10 ವಿಕೆಟ್ ಜಯ ಸಾಧಿಸಿದ ಟೀಮ್ ಇಂಡಿಯಾ
ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ಗೆ ತಲಾ ತಲಾ 3 ವಿಕೆಟ್
ತಂಡಕ್ಕೆ ಹೊರೆಯಾದ ಕಳಪೆ ಫೀಲ್ಡಿಂಗ್, ಬ್ಯಾಟಿಂಗ್ಗೆ ಮಳೆ ಕಾಟ
ಏಷ್ಯಾಕಪ್ ಟೂರ್ನಿಯಲ್ಲಿ ಕೊನೆಗೂ ಟೀಮ್ ಇಂಡಿಯಾದ ಅಕೌಂಟ್ ಓಪನ್ ಆಗಿದೆ. ಅಧಿಕೃತವಾಗಿ ಸೂಪರ್- 4 ಹಂತಕ್ಕೂ ಎಂಟ್ರಿ ಕೊಟ್ಟಿದೆ. ಆದ್ರೂ ಟೆನ್ಶನ್ ತಪ್ಪಿಲ್ಲ. ನೇಪಾಳ ಎದುರು ಟೀಮ್ ಇಂಡಿಯಾ ಆಡಿದ ರೀತಿ ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದ್ದಂತೂ ಸುಳ್ಳಲ್ಲ. ಇಂಡೋ -ನೇಪಾಳ ಫೈಟ್ ಹೇಗಿತ್ತು.?
ಏಷ್ಯಾಕಪ್ ಟೂರ್ನಿಗೆ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿದೆ. ಆದ್ರೂ ಸಮಾಧಾನ ಇಲ್ಲ. ಕ್ರಿಕೆಟ್ ಶಿಶು ನೇಪಾಳದ ಎದುರು ಬಲಿಷ್ಠ ಟೀಮ್ ಇಂಡಿಯಾದ ಆಟ ಅಷ್ಟು ಕಳಪೆಯಾಗಿತ್ತು. ಬ್ಯಾಟಿಂಗ್ನಲ್ಲಿ ಅಬ್ಬರವಿದ್ರೂ ಬೌಲಿಂಗ್ ಹಾಗೂ ಫೀಲ್ಡಿಂಗ್ ತೀರಾ ಹೀನಾಯವಾಗಿತ್ತು.
ಟಾಸ್ ಸೋತು ಬ್ಯಾಟಿಂಗ್ಗಿಳಿದ ನೇಪಾಳ ತಂಡ ಡಿಸೆಂಟ್ ಆರಂಭ ಪಡೆದುಕೊಳ್ತು. ಆರಂಭದಲ್ಲೇ ಸಿಕ್ಕ ಜೀವದಾನಗಳನ್ನ ಬಳಸಿಕೊಂಡ ಭುರ್ಟೆಲ್ ಹಾಗೂ ಆಶಿಸ್ ಶೇಕ್ ಜೋಡಿ ಉತ್ತಮ ಆಟವಾಡಿತು. ಮೊದಲ ವಿಕೆಟ್ಗೆ 65 ರನ್ಗಳು ಹರಿದು ಬಂದ್ವು.
ಬ್ರೇಕ್ ಥ್ರೂ ನೀಡುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿ
10ನೇ ಓವರ್ನಲ್ಲಿ ಬ್ರೇಕ್ ಥ್ರೂ ನೀಡುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದ್ರು. 38 ರನ್ಗಳಿಗೆ ಕುಶಾಲ್ ಭುರ್ಟೆಲ್ ಪೆವಿಲಿಯನ್ ಸೇರಿದ್ರು. ಆ ಬಳಿಕ ದಾಳಿಗಿಳಿದ ರವೀಂದ್ರ ಜಡೇಜಾ ನೇಪಾಳಕ್ಕೆ ಶಾಕ್ ನೀಡಿದ್ರು. 3 ವಿಕೆಟ್ ಕಬಳಿಸಿ ಜಡೇಜಾ ಮಿಂಚಿದ್ರು.
ಸಾಲಿಡ್ ಆಟವಾಡಿದ ಆಸಿಫ್ ಶೇಕ್ 58 ರನ್ಗಳಿಸಿ ನಿರ್ಗಮಿಸಿದ್ರೆ, ಗುಲ್ಸಾನ್ ಝಾ, ದೀಪೆಂದ್ರ ಸಿಂಗ್ ಅಲ್ಪ ಮೊತ್ತಕ್ಕೆ ಆಟ ಮುಗಿಸಿದ್ರು. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೊಮ್ಪಾಲ್ ಕಲ್ಮಿ 48 ರನ್ಗಳಿಸಿ ನಿರ್ಗಮಿಸಿದ್ರು. ಅಂತಿಮವಾಗಿ ನೇಪಾಳ 230 ರನ್ಗಳಿಗೆ ಆಲೌಟ್ ಆಯ್ತು. ಜಡೇಜಾ, ಸಿರಾಜ್ ತಲಾ 3 ವಿಕೆಟ್ ಕಬಳಿಸಿದ್ರೆ, ಠಾಕೂರ್, ಹಾರ್ದಿಕ್, ಶಮಿ 1 ವಿಕೆಟ್ ಕಬಳಿಸಿ ಮಿಂಚಿದ್ರು.
231 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭದಲ್ಲೇ ವರುಣ ಅಡ್ಡಿ ಪಡಿಸಿದ. 2.1 ಓವರ್ ಆಗ್ತಿದ್ದಂತೆ ಮಳೆ ಸುರಿಯಿತು. ಬಿಡದೇ ಮಳೆ ಸುರಿದ ಕಾರಣದಿಂದ ಪಂದ್ಯದ ಓವರ್ಗಳನ್ನ ಕಡಿತ ಗೊಳಿಸಲಾಯ್ತು. ಡಕ್ವರ್ತ್ ಲೂಯಿಸ್ ನಿಯಮದಡಿ 23 ಓವರ್ಗೆ 145 ರನ್ಗಳ ಟಾರ್ಗೆಟ್ ನೀಡಲಾಯ್ತು.
ಫುಲ್ ಶಾಟ್ಗಳನ್ನ ಬಾರಿಸಿದ ರೋಹಿತ್
ಮಳೆಯ ಬಳಿಕ ಪಲ್ಲೆಕೆಲೆ ಮೈದಾನದಲ್ಲಿ ರನ್ ಮಳೆ ಸುರಿಯಿತು. ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ನೇಪಾಳ ಬೌಲರ್ಗಳ ಮೇಲೆ ಸವಾರಿ ಮಾಡಿದ್ರು. ಮೈದಾನದ ಉದ್ದಗಲಕ್ಕೂ ಬೌಲ್ ದರ್ಶನ ಮಾಡಿಸಿದ ರೋಹಿತ್ ಹಾಫ್ ಸೆಂಚುರಿ ಸಿಡಿಸಿದ್ರು. ಫುಲ್ ಶಾಟ್ಗಳನ್ನ ಬಾರಿಸಿದ ರೋಹಿತ್, ಸಿಕ್ಸರ್ ಸಿಡಿಸಿ ಘರ್ಜಿಸಿದ್ರೆ, ಶುಭ್ಮನ್ ಗಿಲ್ ತಾಳ್ಮೆಯ ಆಟವಾಡಿದ್ರು. 52 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ್ರು.
ಅಂತಿಮವಾಗಿ ರೋಹಿತ್, ಶುಭ್ಮನ್ರ ಮುರಿಯದ 147 ರನ್ಗಳ ಜೊತೆಯಾಟದ ನೆರವಿನಿಂದ ಟೀಮ್ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ರೋಹಿತ್ 74 ರನ್ ಸಿಡಿಸಿದ್ರೆ, ಗಿಲ್ 67 ರನ್ಗಳಿಸಿ ಅಜೇಯರಾಗುಳಿದ್ರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೂಪರ್- 4 ಹಂತಕ್ಕೆ ಎಂಟ್ರಿ ಕೊಟ್ಟಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ