ಈ ಬಾರಿ ಯಾರಾಗ್ತಾರೆ ಏಷ್ಯಾದ ಕಿಂಗ್..?
ಟೀಮ್ ಇಂಡಿಯಾಗೆ ಶ್ರೀಲಂಕಾ ಸವಾಲು
ಸಿಂಹಳೀಯರನ್ನ ಮಣಿಸೋದು ಕಷ್ಟದ ವಿಚಾರ
ಏಷ್ಯಾದ ಕಿಂಗ್ ಯಾರು? ಈ ಪ್ರಶ್ನೆ ಇಂದೇ ಉತ್ತರ ಸಿಗಲಿದೆ. ಫೈನಲ್ ಫೈಟ್ಗೆ ವೇದಿಕೆ ಸಿದ್ಧವಾಗಿದ್ದು, ಚಾಂಪಿಯನ್ ಪಟ್ಟಕ್ಕೇರಲು ಟೀಮ್ ಇಂಡಿಯಾ ಸಜ್ಜಾಗಿದೆ. ಅಂದು ಕೊಂಡಷ್ಟು ಸುಲಭಕ್ಕೆ ರೋಹಿತ್ ಪಡೆ ಕಪ್ ಗೆಲ್ಲಲ್ಲ ಬಿಡಿ. ಸ್ಟಾರ್ಗಳೇ ದಂಡೇ ಇದ್ರೂ, ಎಲ್ರೂ ಸಾಲಿಡ್ ಫಾರ್ಮ್ನಲ್ಲಿದ್ರೂ, ಸಿಂಹಳೀಯರನ್ನ ಮಣಿಸೋದು ಕಷ್ಟದ ವಿಚಾರವೇ!
ಪ್ರತಿಷ್ಟಿತ ಏಷ್ಯಾಕಪ್ ಟೂರ್ನಿಯ ಫೈನಲ್ ಫೈಟ್ಗೆ ವೇದಿಕೆ ಸಜ್ಜಾಗಿದೆ. ಇಂದು ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಮಹತ್ವದ ಕಾಳಗ ನಡೆಯಲಿದ್ದು, ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು ಟ್ರೋಫಿಗಾಗಿ ಫೈಟ್ ನಡೆಸಲಿವೆ. ಆನ್ಪೇಪರ್ ಬಲಿಷ್ಟವಾಗಿ ಕಾಣಿಸ್ತಿರೋ ಟೀಮ್ ಇಂಡಿಯಾನೇ ಸದ್ಯಕ್ಕೆ ಚಾಂಪಿಯನ್ ಪಟ್ಟಕ್ಕೇರೋ ಫೇವರಿಟ್ ಆಗಿ ಕಾಣಿಸಿಕೊಳ್ತಿದೆ. ಕಪ್ ಗೆಲುವಿನ ಹಾದಿ ಸುಲಭದಲ್ಲಿಲ್ಲ.
ಚಾಂಪಿಯನ್ ಪಟ್ಟದ ಮೇಲೆ ಟೀಮ್ ಇಂಡಿಯಾದ ಕಣ್ಣು
ಮೊನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯ ಹೊರತುಪಡಿಸಿದ್ರೆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸಾಲಿಡ್ ಪ್ರದರ್ಶನವನ್ನೇ ನೀಡಿದೆ. ಮೊನ್ನೆ ವಿಶ್ರಾಂತಿ ಪಡೆದಿದ್ದ ಆಟಗಾರರು ಕಮ್ಬ್ಯಾಕ್ ಮಾಡ್ತಿರೋದು ಟೀಮ್ ಇಂಡಿಯಾದ ಬಲವನ್ನ ಮತ್ತಷ್ಟು ಹೆಚ್ಚಲಿದೆ. ಸ್ಟಾರ್ ಆಟಗಾರರೆಲ್ಲಾ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಹಾಗಿದ್ರೂ ಶ್ರೀಲಂಕಾ ಎದುರು ಟೀಮ್ ಇಂಡಿಯಾ ಈಸೀಯಾಗಿ ಗೆಲ್ಲುತ್ತೆ
ಅಂದುಕೊಳ್ಳುವಂತೆ ಇಲ್ಲ. ಕಳೆದ ಸೂಪರ್-4 ಪಂದ್ಯದಲ್ಲಿ ಶ್ರೀಲಂಕಾ ಕೊಟ್ಟ ಫೈಟ್ ಬ್ಯಾಕ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್.!
ಬಲಿಷ್ಟ ಪಾಕ್ ಪಾಡೆಯನ್ನ ಮಣಿಸಿದ್ದ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಸುಲಭದ ಜಯದ ನಿರೀಕ್ಷೆಯಲ್ಲಿತ್ತು. ಶ್ರೀಲಂಕಾ ಪಡೆ ಮಾಡಿದ ಹೋರಾಟ ಒಂದು ಟೈಮ್ನಲ್ಲಿ ಟೀಮ್ ಇಂಡಿಯಾ ಪಡೆಯಲ್ಲೇ ಸೋಲಿನ ಭೀತಿಯನ್ನ ಹುಟ್ಟಿಸಿದ್ದು ಸುಳ್ಳಲ್ಲ. ಇದೀಗ ಫೈನಲ್ ಫೈಟ್ನಲ್ಲೂ ಸಿಂಹಳೀಯ ಪಡೆ ಅಂತದ್ದೇ ಹೋರಾಟ ಸಂಘಟಿಸೋದು ಕನ್ಫರ್ಮ್.
ಟೀಮ್ ಇಂಡಿಯಾ ಬೌಲರ್ಗಳಿಗೆ ದೊಡ್ಡ ಸವಾಲು
ಶ್ರೀಲಂಕಾ ತಂಡದ ಬ್ಯಾಟಿಂಗ್ ಲೈನ್ ಅಪ್ ಆನ್ಪೇಪರ್ ಅಷ್ಟೇನೂ ಬಲಿಷ್ಟವಾಗಿಲ್ಲ. ವಿಶ್ವದ ಬಲಿಷ್ಟ ಬೌಲಿಂಗ್ ಪಡೆ ಅನ್ನೋ ಖ್ಯಾತಿ ಪಾಕಿಸ್ತಾನ ತಂಡಕ್ಕಿದೆ. ಅಂತಹ ಬೌಲಿಂಗ್ ಅಟ್ಯಾಕ್ ಅನ್ನೇ ಧೂಳೀಪಟ ಮಾಡಿ ಶ್ರೀಲಂಕಾ ಫೈನಲ್ಗೆ ಪ್ರವೇಶಿಸಿದೆ. ಹೀಗಾಗಿ, ಟೀಮ್ ಇಂಡಿಯಾ ಬೌಲರ್ಗಳಿಗೆ ಇಂದು ಬಿಗ್ ಟಾಸ್ಕ್ ಎದುರಾಗಲಿದೆ.
ಯುವ ಆಟಗಾರರ ದಂಡು, ಛಲದ ಹೋರಾಟ
ಸಿಂಹಳೀಯ ಪಡೆ ಆನ್ಫೀಲ್ಡ್ನಲ್ಲಿ ಭರ್ಜರಿ ಹೋರಾಟವನ್ನ ನಡೆಸ್ತಿದೆ. ಯುವ ಆಟಗಾರರ ದಂಡೇ ತಂಡದಲ್ಲಿದ್ದು ಕೆಚ್ಚೆದೆಯ ಹೋರಾಟವನ್ನ ಪ್ರತಿ ಪಂದ್ಯದಲ್ಲೂ ತಂಡ ನಡೆಸ್ತಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿರುದ್ಧದ ಒಂದು ಪಂದ್ಯ ಬಿಟ್ರೆ, ಉಳಿದೆಲ್ಲಾ ಪಂದ್ಯದಲ್ಲೂ ಗೆದ್ದು ಬೀಗಿದೆ. ಟೀಮ್ ಇಂಡಿಯಾ ವಿರುದ್ಧ ಸೋತರೂ ಸುಲಭಕ್ಕೆ ಸೋಲನ್ನ ಒಪ್ಪಿಕೊಂಡಿಲ್ಲ.
ಸ್ಪಿನ್ ಲಂಕಾ ಸ್ಟ್ರೆಂಥ್, ಟೀಮ್ ಇಂಡಿಯಾಗೆ ವೀಕ್ನೆಸ್..!
ಭಾರತ-ಶ್ರೀಲಂಕಾ ನಡುವಿನ ಕಳೆದ ಮುಖಾಮುಖಿಯಲ್ಲಿ ಏನಾಯ್ತು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಜಸ್ಟ್ 20 ವರ್ಷ ಹುಡುಗನ ಆಟಕ್ಕೆ ವಿಶ್ವದ ಟಾಪ್ ಕ್ಲಾಸ್ ಬ್ಯಾಟರ್ಗಳು ಕಕ್ಕಾಬಿಕ್ಕಿಯಾಗಿದ್ರು. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್. ಇಷ್ಟೇ ಏಕೆ ಆಲ್ರೌಂಡರ್ ಹಾರ್ದಿಕ್ ಕೂಡ ಧುನಿತ್ ವೆಲ್ಲಲಗೆ ಮೋಡಿಗೆ ಬಲಿಯಾಗಿದ್ರು. ಧುನಿತ್ ವೆಲ್ಲಲಗೆ ಮಾತ್ರವಲ್ಲ.. ಚರಿತ ಅಸಲಂಕ ಕೂಡ ಲಂಕಾದ ಮೋಸ್ಟ್ ಡೇಂಜರಸ್ ಸ್ಪಿನ್ನರ್. ಜೊತೆಗೆ ಪೇಸ್ ಅಟ್ಯಾಕ್ ಕೂಡ ಡಿಸೆಂಟ್ ಆಗಿದ್ದು, ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ತಾಳ್ಮೆಯ ಪರೀಕ್ಷೆ ನಡೆಯೋದು ಕನ್ಫರ್ಮ್.
ಒಟ್ಟಿನಲ್ಲಿ ಇವತ್ತಿನ ಫೈನಲ್ ಫೈಟ್ಗೂ ಮುನ್ನ ಟೀಮ್ ಇಂಡಿಯಾ ನೋಡೋಕೆ ಬಲಿಷ್ಟವಾಗಿ ಕಾಣ್ತಿದ್ರೂ, ಗೆಲುವಂತೂ ಸುಲಭದಲ್ಲಿಲ್ಲ. ಸಿಂಹಳೀಯ ಪಡೆ ತವರಿನಲ್ಲಿ ಸಿಡಿದು ನಿಲ್ಲೋ ಉತ್ಸಾಹದಲ್ಲಿದೆ. ಹೀಗಾಗಿ ರೋಚಕ ಹಣಾಹಣಿಯ ನಿರೀಕ್ಷೆ ಕ್ರಿಕೆಟ್ ವಲಯದಲ್ಲಿದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸದೇ ಇರಲಿ ಅನ್ನೋದಷ್ಟೇ ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ