newsfirstkannada.com

ಕೊಹ್ಲಿ ಅಭಿಮಾನಿಗಳಿಗೆ ದೊಡ್ಡ ನಿರಾಸೆ.. ಆಗಿರೋ ಬೇಸರ ಅಷ್ಟಿಷ್ಟಲ್ಲ..!

Share :

29-08-2023

  ಏಷ್ಯಾಕಪ್​​ನಲ್ಲಿ ಆ ಒಂದು ವಾರ್ ನಡೆಯಲ್ಲ

  ಸೇಡಿನ ಸಮರ ನಡೆಯಲ್ಲ.. ನಿರಾಸೆಯಲ್ಲಿ ಫ್ಯಾನ್ಸ್​.!

  ಹುಸಿಯಾಯ್ತು ಕೊಹ್ಲಿ ಅಭಿಮಾನಿಗಳ ನಿರೀಕ್ಷೆ

ಇಂಥದ್ದೊಂದು ಬೇಸರದ ಸುದ್ದಿ ಹೊರ ಬೀಳುತ್ತೆ ಎಂದು ಕೊಹ್ಲಿ ಫ್ಯಾನ್ಸ್​​ ಊಹಿಸಿಯೇ ಇರಲಿಲ್ವೇನೋ. ಏಷ್ಯಾಕಪ್​ ಟೂರ್ನಿಯಲ್ಲಿ ಯಾರ ನಡುವಿನ ಜಿದ್ದಾಜಿದ್ದಿನ ಕದನವನ್ನ ನೋಡಬೇಕು ಎಂದು ಫ್ಯಾನ್ಸ್​​ ಕಾಯ್ತಿದ್ರೂ, ಆ ಫೈಟ್​​ ನಡೆಯೋದೇ ಇಲ್ಲ. ಕೊಹ್ಲಿ ಫ್ಯಾನ್ಸ್​ಗೆ ಇದ್ರಿಂದ ಆಗಿರೋ ನಿರಾಸೆ ಅಷ್ಟಿಷ್ಟಲ್ಲ.

ಏಷ್ಯಾಕಪ್​ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಪ್ರತಿಷ್ಠೆಯ ಕಣದಲ್ಲಿ ಜಿದ್ದಾಜಿದ್ದಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾದು ಕುಳಿತಿದ್ದಾರೆ. ಆದರೆ ಟ್ರೋಫಿ ಗೆಲ್ಲೋ ತಂಡಕ್ಕಿಂತ ಏಷ್ಯನ್​ ಕಿಂಗ್​ ಕೊಹ್ಲಿ ಸದ್ಯ ಸೆಂಟರ್​ ಆಫ್ ಅಟ್ರಾಕ್ಷನ್​ ಆಗಿದ್ದಾರೆ. ರೆಡ್​ ಹಾಟ್​​ ಫಾರ್ಮ್​​ನಲ್ಲಿರೋ ಕೊಹ್ಲಿಯ ಸುತ್ತವೇ ಸದ್ಯ ಏಷ್ಯಾಕಪ್​ ಚರ್ಚೆಗಳು ಗರಿಗೆದರಿವೆ.

ಕಿಂಗ್​ ಕೊಹ್ಲಿ ಮೇಲೆ ಎಲ್ಲರ ಕಣ್ಣು

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಸದ್ಯ ಸಾಲಿಡ್​ ಫಾರ್ಮ್​​ನಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ಮಷೀನ್​ನಂತೆ ರನ್​ಗಳಿಸುತ್ತಿರೋ ಕೊಹ್ಲಿ, ಎದುರಾಳಿಗಳ ಪಾಲಿಗೆ ವಿಲನ್​ ಆಗಿದ್ದಾರೆ. ಕಳಪೆ ಫಾರ್ಮ್​ಗೆ ಸಿಲುಕಿ, ಟೀಕೆಗೆ ಗುರಿಯಾಗಿದ್ದ ಕೊಹ್ಲಿ, ಹಳೆ ಖದರ್​ಗೆ ಮರಳಿ ಎಲ್ಲಕ್ಕೂ ಬ್ಯಾಟ್​ನಿಂದಲೇ ಉತ್ತರಿಸಿದ್ದಾರೆ. ಏಷ್ಯಾಕಪ್​​ ಟೂರ್ನಿಯಲ್ಲೂ ಅಬ್ಬರಿಸಲು ಕೊಹ್ಲಿ ಸಜ್ಜಾಗಿದ್ದು, ಕಿಂಗ್​ ಆಟವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾದು ಕುಳಿತಿದ್ದಾರೆ.

ಟೂರ್ನಿ ಆರಂಭಕ್ಕೂ ಮುನ್ನವೇ ಕೊಹ್ಲಿ ಫ್ಯಾನ್ಸ್​ಗೆ ನಿರಾಸೆ

ರೆಡ್​ ಹಾಟ್​ ಫಾರ್ಮ್​ನಲ್ಲಿರೋ ವಿರಾಟ್​ ಮೇಲೆ ನಿರೀಕ್ಷೆಯ ಭಾರವೇ ಇದೆ. ತನ್ನ ಜಬರ್ದಸ್ತ್​​​ ಬ್ಯಾಟಿಂಗ್​​ನಿಂದ ಸಖತ್​ ಟ್ರೀಟ್​ ಕೊಡ್ತಿರುವ ವಿರಾಟ್​ ಕೊಹ್ಲಿ, ಏಷ್ಯಾಕಪ್​ ಸಂಗ್ರಾಮದಲ್ಲೂ ಅಬ್ಬರಿಸಲಿ ಅನ್ನೋದು ಫ್ಯಾನ್ಸ್​​ ಆಸೆಯಾಗಿದೆ. ಟೂರ್ನಿಗೆ ಕೊಹ್ಲಿ ನಡೆಸ್ತಿರೋ ಸಮರಾಭ್ಯಾಸವನ್ನು ಗಮನಿಸಿದರೆ ಅಭಿಮಾನಿಗಳ ಆಸೆ ಈಡೇರೋದು ಪಕ್ಕಾ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಕೊಹ್ಲಿ ಫ್ಯಾನ್ಸ್​ಗೆ ನಿರಾಸೆಯುಂಟಾಗಿದೆ.

ಆ ಒಂದು ವಾರ್ ನಡಿಯಲ್ಲ.. ಫ್ಯಾನ್ಸ್​​ಗೆ ಬೇಸರ..!

2023ರ ಐಪಿಎಲ್​​ ಟೂರ್ನಿಯಲ್ಲಿ ಚೆನ್ನೈ ಚಾಂಪಿಯನ್​ ಪಟ್ಟಕ್ಕೇರಿದ್ದು ನೆನಪಿದ್ಯೋ ಇಲ್ವೋ, ಆದ್ರೆ ಕೊಹ್ಲಿ ಫ್ಯಾನ್ಸ್​ಗೆ ಲಕ್ನೋ ಹಾಗೂ ಆರ್​ಸಿಬಿ ವಿರುದ್ಧದ 2 ಪಂದ್ಯಗಳು ಮಾತ್ರ ನೆನಪಿವೆ. ಅದಕ್ಕೆ ಕಾರಣ ಕೊಹ್ಲಿ VS ನವೀನ್​ ಉಲ್​ ಹಕ್​ ಫೈಟ್​​​. ಸೀಸನ್​ 16ರಲ್ಲಿ ಲಕ್ನೋ ಹಾಗೂ ಆರ್​ಸಿಬಿ ತಂಡಗಳು ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದಾಗ, ಲಕ್ನೋ ಆಟಗಾರರು ಅತಿರೇಕದ ವರ್ತನೆ ಮಾಡಿದರು. ಇದಕ್ಕೆ ಅವರದೇ ಲಕ್ನೋ ಅಂಗಳದಲ್ಲಿ 2ನೇ ಪಂದ್ಯದಲ್ಲಿ ಕೊಹ್ಲಿ ಸರಿಯಾಗಿ ಕೌಂಟರ್​ ಕೊಟ್ಟಿದ್ರು. ಇದ್ರಿಂದ ದಿಕ್ಕೆಟ್ಟ ಲಕ್ನೋ ಆಟಗಾರರು ಮಾಡಿದ್ದು, ಮತ್ತದೇ ಅತಿರೇಕದ ಕೆಲಸ. ನವೀನ್​ ಉಲ್​ ಹಕ್​ ಕಾಲು ಕೆರೆದುಕೊಂಡು ಬಂದ್ರೆ ಕೋಚ್​ ಗಂಭೀರ್​ ಬಂಬಲಕ್ಕೆ ನಿಂತಿದ್ರು.

ಈ ಆನ್​ಫೀಲ್ಡ್​ ಗಲಾಟೆ ಮುಗಿದು ತಿಂಗಳುಗಳೇ ಕಳೆದಿವೆ. ಆದ್ರೆ ಆಫ್​ ಫೀಲ್ಡ್​ನಲ್ಲಿ ಮಾತ್ರ ವಾರ್​ ನಡೆಯುತ್ತಲೇ ಇದೆ. ಆ ಘಟನೆ ನಡೆದ ದಿನದಿಂದ ಸೋಷಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್​ ಹಾಕಿ ನವೀನ್​, ಕೊಹ್ಲಿಯನ್ನ ಕೆಣಕ್ತಿದ್ರು. ಆದ್ರೆ, ಕೊಹ್ಲಿ ಮಾತ್ರ ಇದನ್ನ ನಗ್ಲೆಟ್​ ಮಾಡ್ತಲೆ ಬಂದಿದ್ದಾರೆ. ಏಷ್ಯಾಕಪ್​ ಅಖಾಡದಲ್ಲಿ ಕೊಹ್ಲಿ, ನವೀನ್​ಗೆ ಆಟದಿಂದಲೇ ತಿರುಗೇಟು ನೀಡ್ತಾರೆ ಅನ್ನೋದು ಫ್ಯಾನ್ಸ್​ ಆಸೆಯಾಗಿತ್ತು. ಆದ್ರೆ ಆಸೆ ಈಡೇರಲ್ಲ.

ಏಷ್ಯಾಕಪ್​​ನಲ್ಲಿ ನಡೆಯಲ್ಲ ಕೊಹ್ಲಿ VS ನವೀನ್​ ಕದನ.!

ಸೋಷಿಯಲ್​ ಮೀಡಿಯಾದಲ್ಲಿ ಕ್ರಿಪಿಕ್ಟ್​ ಪೋಸ್ಟ್​ ಹಾಕಿ ಕೆಣಕುತ್ತಿದ್ದ ನವೀನ್​ ಉಲ್​ ಹಕ್​ಗೆ ಕದನದಲ್ಲೇ ಕೊಹ್ಲಿ ತಿರುಗೇಟು ನೀಡ್ತಾರೆ ಅನ್ನೋದು ಫ್ಯಾನ್ಸ್​ ನಿರೀಕ್ಷೆಯಾಗಿತ್ತು. ನವೀನ್​ ಬೌಲಿಂಗ್​ ಅನ್ನ ಕೊಹ್ಲಿ ಧೂಳಿಪಟ ಮಾಡೋದನ್ನು ನೋಡೋದಕ್ಕಾಗಿಯೇ ಅದೆಷ್ಟೋ ಫ್ಯಾನ್ಸ್​ ಕಾದು ಕುಳಿತಿದ್ದರು. ಏಷ್ಯಾಕಪ್​ನಲ್ಲಿ ಭಾರತ vs ಆಫ್ಘನ್ ಎದುರುಬದುರಾದ್ರೂ ನವೀನ್​ ವರ್ಸಸ್ ಕೊಹ್ಲಿ ಫೈಟ್​ ನಡೆಯಲ್ಲ.

ನವೀನ್​ ಉಲ್​​ ಹಕ್​ಗೆ ಏಷ್ಯಾಕಪ್​ ತಂಡದಲ್ಲೇ ಸ್ಥಾನ ಸಿಕ್ಕಿಲ್ಲ

ಏಷ್ಯಾಕಪ್​ಗೆ ತಂಡವನ್ನು ಪ್ರಕಟಿಸಿರುವ ಆಫ್ಘನ್ ಬೋರ್ಡ್​​ ನವೀನ್​ ಉಲ್​ ಹಕ್​ಗೆ ಕೊಕ್​ ಕೊಟ್ಟಿದೆ. ನವೀನ್​ ತಂಡದಿಂದ ಕೈ ಬಿಟ್ಟಿರೋದಕ್ಕೆ ಕಾರಣ ಬಹಿರಂಗವಾಗಿಲ್ಲ. ಏಷ್ಯಾಕಪ್​ನಿಂದ ಔಟ್​ ಆಗಿರೋದನ್ನು ನೋಡಿದ್ರೆ ಮುಂಬರೋ ವಿಶ್ವಕಪ್​ನಲ್ಲೂ ನವೀನ್​ಗೆ ಸ್ಥಾನ ಸಿಗೋದು ಅನುಮಾನ ಎನ್ನಲಾಗ್ತಿದೆ. ಹೀಗಾಗಿ ಹೈ-ವೋಲ್ಟೆಜ್​ ಹಣಾಹಣಿ ನೋಡಲು ಮುಂದಿನ ಐಪಿಎಲ್​ವರೆಗೂ ಫ್ಯಾನ್ಸ್​​ ಕಾಯಬೇಕಾಗಬಹುದು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ಅಭಿಮಾನಿಗಳಿಗೆ ದೊಡ್ಡ ನಿರಾಸೆ.. ಆಗಿರೋ ಬೇಸರ ಅಷ್ಟಿಷ್ಟಲ್ಲ..!

https://newsfirstlive.com/wp-content/uploads/2023/07/VIRAT_KOHLI-5.jpg

Load More