newsfirstkannada.com

IND vs PAK: ಮತ್ತೆ ಬದ್ಧವೈರಿಗಳ ಮುಖಾಮುಖಿಗೆ 3 ದಿನ ಬಾಕಿ.. ಅಷ್ಟು ಸುಲಭವಿಲ್ಲ ಪಾಕ್​ ಸಂಹಾರ

Share :

07-09-2023

  ಸೂಪರ್​​​-4 ನಲ್ಲಿ ಭಾರತಕ್ಕೆ ಪಾಕ್​​​​ ಮೊದಲ ಎದುರಾಳಿ

  ಟೀಂ ಇಂಡಿಯಾ ಹಿಂದೆ ಮಾಡಿದ ತಪ್ಪೇನು? ತಿದ್ದಿಕೊಳ್ಳಬೇಕಿರೋದೇನು..?

  ನಾಲ್ಕು ತಪ್ಪುಗಳಿಗೆ ಪರಿಹಾರ​ ಸಿಕ್ರೆ ಮಾತ್ರ ಗೆಲುವು ನಮ್ದು..!

ಏಷ್ಯಾಕಪ್​​ನಲ್ಲಿ ಇಂಡೋ-ಪಾಕ್ ಮೆಗಾ ಬ್ಯಾಟಲ್​​ಗೆ ಕ್ಷಣಗಣನೆ ಶುರುವಾಗಿದೆ. ಸೂಪರ್​​ ಸಂಡೇ ವಾರ್​​ನಲ್ಲಿ ಕ್ರಿಕೆಟ್ ಕಾ ದುಷ್ಮನ್ಸ್​ ಮತ್ತೆ ಅಂಗಳದಲ್ಲಿ ಎದುರಾಗಲಿವೆ. ಮಳೆಯಿಂದ ರದ್ದಾದ ಪಂದ್ಯದಲ್ಲಿ ಭಾರತದ ಟಾಪ್​​​​​​ ಆರ್ಡರ್​​ ಮಾನ ಹರಾಜಾಗಿತ್ತು. ಇಂತಹ ಮಿಸ್ಟೇಕ್ಸ್​ ಮತ್ತೆ ರಿಪೀಟ್ ಆಗ್ಬಾರ್ದು ಅಂದ್ರೆ ಈ ಚೇಂಜಸ್​​ ಮಾಡಿಕೊಳ್ಳಬೇಕಿದೆ.

ಇಂಡೋ ವರ್ಸಸ್​ ಪಾಕ್​​​​..! ಈ ಬದ್ಧವೈರಿಗಳ ಕಾಳಗಕ್ಕೆ ಮತ್ತೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್​​​ 10 ರಂದು ಉಭಯ ತಂಡಗಳು ಏಷ್ಯಾಕಪ್ ಸೂಪರ್​​​​-4 ನಲ್ಲಿ ಸೆಣಸಾಡಲು ಸಜ್ಜಾಗಿವೆ. ಈ ಹೈವೋಲ್ಟೇಜ್​​​​​ ಪಂದ್ಯದ ಮಜಾ ಸವಿಯಲು ಇಡೀ ವಿಶ್ವವೇ ಕಾದು ಕುಳಿತಿದೆ.

4 ತಪ್ಪಿಗೆ ಪರಿಹಾರ​ ಸಿಕ್ರೆ ಮಾತ್ರ ಗೆಲುವು ನಮ್ದು..!

ಮಳೆಯಿಂದಾಗಿ ಏಷ್ಯಾಕಪ್​​ನಲ್ಲಿ ಇಂಡೋ-ಪಾಕ್​​​​​​​​​ ಮೊದಲ ಪಂದ್ಯ ರದ್ದಾಗಿತ್ತು. ಆದರೆ, ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಕೆಲ ವೀಕ್ನೆಸ್​ಗಳು ಬಟಾಬಯಲಾಗಿತ್ತು. ಆ ಮಿಸ್ಟೆಕ್ಸ್​ ಸರಿಪಡಿಸಿಕೊಳ್ಳಲು ಮತ್ತೊಮ್ಮೆ ಬೆಸ್ಟ್ ಚಾನ್ಸ್ ಸಿಕ್ಕಿದೆ. ಸಂಡೇ ವಾರ್​​ನಲ್ಲಿ ಪಾಕ್​​​ ಅಟ್ಟಹಾಸಕ್ಕೆ ಬ್ರೇಕ್​ ಹಾಕಲೇಬೇಕಿದೆ. ಹಾಗಾಗಬೇಕಾದ್ರೆ ರೋಹಿತ್​​​ ಶರ್ಮಾ & ಗ್ಯಾಂಗ್​​ ಈ ಮಿಸ್ಟೆಕ್ಸ್​ಗೆ ಸೆಲ್ಯೂಷನ್​ ಕಂಡುಕೊಳ್ಳಬೇಕು.

ಟಾಪ್​​​​ ಆಟ ಆಡಬೇಕಿದೆ ಟಾಪ್ ಆರ್ಡರ್​ ಬ್ಯಾಟರ್ಸ್​​..!

ಸಂಡೇ ಮಹಾಸಂಗ್ರಾಮದಲ್ಲಿ ಭಾರತ, ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಬೇಕಾದ್ರೆ ಟಾಪ್​​​ ಆರ್ಡರ್​ ಬ್ಯಾಟ್ಸ್​​​ಮನ್​​​​ ಟಾಪ್ ಆಟವಾಡಬೇಕಿದೆ. ಮೊದಲ ಮುಖಾಮುಖಿಯಲ್ಲಿ ಟಾಪ್​​​ ಆರ್ಡರ್​ ಬ್ಯಾಟರ್ಸ್​​​ ದಯನೀಯ ವೈಫಲ್ಯ ಕಂಡಿದ್ರು. 66 ರನ್ ಅಂತರದಲ್ಲಿ ಅಗ್ರ ನಾಲ್ವರು ಬ್ಯಾಟ್ಸ್​​ಮನ್​ ಪೆವಿಲಿಯನ್ ಸೇರಿ ತಂಡವನ್ನ ನಡುನೀರಲ್ಲಿ ಕೈಬಿಟ್ಟಿದ್ರು.

ಸಂಡೇ ಬ್ಯಾಟಲ್​​ನಲ್ಲಿ ಹಿಂದಾದ ಈ ಫೇಲ್ಯೂರ್​​ ಮರುಕಳಿಸಬಾರದು. ರೋಹಿತ್ ಶರ್ಮಾ, ಶುಭ್​​ಮನ್ ಗಿಲ್​​​​, ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್​​ ಕೆರಳಿ ನಿಲ್ಲಬೇಕಿದೆ. ಆಗಲಷ್ಟೇ ಪಾಕ್​ ಹೆಡೆಮುರಿ ಕಟ್ಟುವ ಭಾರತದ ಕನಸು ನನಸಾಗಲಿದೆ. ಇಲ್ಲವಾದ್ರೆ, ಪಾಕ್​ ತೋಡೋ ಖೆಡ್ಡಾಗೆ ರೋಹಿತ್​ ಪಡೆ ಬೀಳಬೇಕಾಗುತ್ತೆ.

ಮೈಚಳಿ ಬಿಟ್ಟು ಆಡಬೇಕಿದೆ ಓಪನರ್ಸ್​

ಬಿಗ್ ಗೇಮ್​​​ಗಳಲ್ಲಿ ತಂಡಕ್ಕೆ ಓಪನರ್ಸ್​ ಬಿಗ್ ಸ್ಟ್ರೆಂಥ್​​​. ಈ ಮಾತನ್ನ ಇಂಡಿಯನ್ ಓಪನರ್ಸ್​ ಮರೆತಿದ್ದಾರೆ. ಪಾಕ್​ ವಿರುದ್ಧ ರೋಹಿತ್ ಹಾಗೂ ಗಿಲ್​​​ ರನ್ ಗಳಿಸಲು ಇನ್ನಿಲ್ಲದಂತೆ ತಿಣುಕಾಡಿದ್ರು.ಇಬ್ಬರೂ ಭಯದಿಂದಲೇ ಆಡ್ತಿದ್ದಂತೆ ಭಾಸವಾಗ್ತಿತ್ತು. ಅಟ್ಯಾಕ್​ ಮಾಡಲು ಮುಂದಾಗಲಿಲ್ಲ. ಸೂಪರ್​ 4 ಪಂದ್ಯದಲ್ಲಾದ್ರೂ ಮೈ ಚಳಿಬಿಟ್ಟು ಆಡಬೇಕಿದೆ. ಪಾಕ್​​ನಂತ ಡೆಡ್ಲಿ ಪೇಸರ್​ಗಳನ್ನ ಎದುರಿಸಬೇಕಾದ್ರೆ, ಅಗ್ರೆಸ್ಸಿವ್​ ಅಪ್ರೋಚ್​ ಅತ್ಯಗತ್ಯ. ಈ ಸತ್ಯವನ್ನ ರೋಹಿತ್​​​-ಗಿಲ್ ಅರಿತುಕೊಳ್ಳಬೇಕಿದೆ.

ಎಡಗೈ ವೇಗಿಗಳನ್ನ ದಿಟ್ಟವಾಗಿ ಎದುರಿಸಬೇಕು

ಲೆಫ್ಟ್ ಆರ್ಮ್​ ಬೌಲರ್ಸ್​ ಭಾರತಕ್ಕೆ ಬಿಗ್​ ಥ್ರೆಟ್​​. ಪಾಕ್​ ಎದುರಿನ ಪಂದ್ಯದಲ್ಲಿ ಅದು ಮತ್ತೊಮ್ಮೆ ಪ್ರೂವ್ ಆಗಿತ್ತು. ಶಾಹೀನ್ ಶಾ ಅಫ್ರಿದಿ ಘಾತಕ ದಾಳಿ ನಡೆಸಿ 4 ವಿಕೆಟ್ ಕಬಳಿಸಿದ್ರು. ರೋಹಿತ್​​​​ ಶರ್ಮಾ, ಕಿಂಗ್ ಕೊಹ್ಲಿ, ಹಾರ್ದಿಕ್​ ಹಾಗೂ ಜಡೇಜಾರಂತ ಸ್ಟಾರ್​ ಪ್ಲೇಯರ್ಸ್​ ಶಾಹೀನ್ ಅಫ್ರಿದಿಯ ಬಲೆಗೆ ಬಿದ್ದಿದ್ರು. ಭಾರತ ಸೂಪರ್​​​-4 ನಲ್ಲಿ ಶುಭಾರಂಭ ಮಾಡಬೇಕಾದ್ರೆ, ಮೊದಲು ಲೆಫ್ಟ್​ ಆರ್ಮ್​ ಬೌಲರ್​ಗಳನ್ನ ದಿಟ್ಟವಾಗಿ ಎದುರಿಸಬೇಕು.

ಲೋವರ್​​​ ಆರ್ಡರ್​​​​​ ಬ್ಯಾಟ್ಸ್​​ಮನ್​​ಗಳಿಂದ ಬೇಕಿದೆ ಸಾಥ್​​​

ಲೋವರ್ ಆರ್ಡರ್​​​​ ಬ್ಯಾಟಿಂಗ್ ಕೂಡ ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಇಶಾನ್ ಕಿಶನ್​​​-ಹಾರ್ದಿಕ್​ ಪಾಂಡ್ಯ ಬೊಂಬಾಟ್​ ಪ್ರದರ್ಶನದ ಹೊರತಾಗಿಯೂ ಕೆಳಕ್ರಮಾಂಕ ಫೇಲ್ಯೂರ್ ಕಂಡಿತ್ತು. ಕೊನೆ 3 ವಿಕೆಟ್​ಗಳನ್ನ 24 ರನ್​ ಅಂತರದಲ್ಲಿ ಕಳೆದುಕೊಂಡಿತ್ತು. ಈ ಮಿಸ್ಟೇಕ್ಸ್​ಗೆ ನೆಕ್ಸ್ಟ್​ ಮ್ಯಾಚ್​​ನಲ್ಲಿ ಫುಲ್​ ಸ್ಟಾಪ್​ ಬೀಳಬೇಕಿದೆ.

ಒಟ್ಟಿನಲ್ಲಿ, ಬ್ಯಾಟ್ಸ್​ಮನ್​ಗಳು ತಪ್ಪು ಸರಿಪಡಿಸಿಕೊಂಡರಷ್ಟೇ ಸಂಡೇ ಸಂಗ್ರಾಮದಲ್ಲಿ ಟೀಮ್​ ಇಂಡಿಯಾ ಗೆಲ್ಲಲಿದೆ. ಇಲ್ಲದಿದ್ರೆ, ಅದೇ ರಾಗ ಅದೇ ಹಾಡು ಎನ್ನುವಂತೆ ಹಳೇ ಕಥೆ ರಿಪೀಟ್ ಆಗಲಿದೆ. ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs PAK: ಮತ್ತೆ ಬದ್ಧವೈರಿಗಳ ಮುಖಾಮುಖಿಗೆ 3 ದಿನ ಬಾಕಿ.. ಅಷ್ಟು ಸುಲಭವಿಲ್ಲ ಪಾಕ್​ ಸಂಹಾರ

https://newsfirstlive.com/wp-content/uploads/2023/09/Rohit-Sharma.jpg

Load More