newsfirstkannada.com

ಏಷ್ಯನ್​ ಮೆಡಲಿಸ್ಟ್ ಬಿಂದುರಾಣಿ ಮೇಲೆ ಹಲ್ಲೆ ಆರೋಪ; ಚಪ್ಪಲಿ ತೋರಿಸಿ ಧಮ್ಕಿ ಹಾಕಿದ್ರಾ ಸೀನಿಯರ್​ ಕೋಚ್​ ಪತ್ನಿ?

Share :

03-07-2023

    ಸುಳ್ಳು ಹೇಳಿ ಅಮೀರ್ ಖಾನ್, ಕೊಹ್ಲಿ ಸೇರಿದ್ದ ವೇದಿಕೆ ಹಂಚಿಕೊಂಡ ಆರೋಪ

    ಬಿಂದುರಾಣಿ ಮತ್ತು ಸೀನಿಯರ್ ಕೋಚ್ ಯತೀಶ್ ಪತ್ನಿ ಜೊತೆ ಮಾತಿನ ಚಕಮಕಿ

    ಟೆಡ್ ಎಕ್ಸ್ ಇನ್ಸ್ ಫಿರೇಷನಲ್ ಕಾರ್ಯಕ್ರಮದಲ್ಲಿ ಬಿಂದುರಾಣಿ ಮೇಲೆ ಹಲ್ಲೆ ಆರೋಪ

ಬೆಂಗಳೂರು: ಏಷ್ಯನ್ ಮೆಡಲಿಸ್ಟ್ ಬಿಂದುರಾಣಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಇಂದು ಕಂಠೀರವ ಸ್ಟೇಡಿಯಂ ನಲ್ಲಿ ಸೀನಿಯರ್ ಕೋಚ್ ಯತೀಶ್ ಎಂಬುವವರ ಪತ್ನಿ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಬಿಂದುರಾಣಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕಂಠೀರವ ಸ್ಟೇಡಿಯಂ ನಲ್ಲಿಂದು ಟೆಡ್ ಎಕ್ಸ್ ಇನ್ಸ್ ಫಿರೇಷನಲ್ ಶೋ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ವಿರಾಟ್ ಕೊಹ್ಲಿ ಸೇರಿದಂತೆ ದೊಡ್ಡ ದೊಡ್ಡ ಸೆಲಬ್ರೆಟಿಗಳು ಭಾಗಿಯಾಗಿದ್ರು. ಜೊತೆಗೆ ಬಿಂದು ರಾಣಿಗೂ ಸಹ ಭಾಗಿಯಾಗುವ ಅವಕಾಶ ಸಿಕ್ಕಿತ್ತು.

ಆದರೆ ಟೆಡ್ ಎಕ್ಸ್ ಇನ್ಸ್ ಫಿರೇಷನಲ್ ಕಾರ್ಯಕ್ರಮಕ್ಕೆ ಭಾಗಿಯಾಗಿರುವ ಹಿನ್ನಲೆ ಬಿಂದುರಾಣಿ ಮೇಲೆ ನಿಂದನೆ ಜೊತೆಗೆ ಹಲ್ಲೆ ನಡೆದಿದೆ. ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿ ಕೊಟ್ಟು ಅವಕಾಶ ಗಿಟ್ಟಿಸಿರೋದಾಗಿ ನಿಂದಿಸಿ ಸೀನಿಯರ್ ಕೋಚ್ ಯತೀಶ್ ಪತ್ನಿ ಹಲ್ಲೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಯತೀಶ್​​ ಪತ್ನಿ ಬಿಂದುರಾಣಿಗೆ ಚಪ್ಪಳಿ ತೋರಿಸಿರುವ ಚಿತ್ರಣ ವೈರಲ್​ ಆಗುತ್ತಿದೆ. ಅನೇಕರು ಈ ಚಿತ್ರಣವನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಸಂಪಗಿರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಕುರಿತು ಬಿಂದುರಾಣಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಷ್ಯನ್​ ಮೆಡಲಿಸ್ಟ್ ಬಿಂದುರಾಣಿ ಮೇಲೆ ಹಲ್ಲೆ ಆರೋಪ; ಚಪ್ಪಲಿ ತೋರಿಸಿ ಧಮ್ಕಿ ಹಾಕಿದ್ರಾ ಸೀನಿಯರ್​ ಕೋಚ್​ ಪತ್ನಿ?

https://newsfirstlive.com/wp-content/uploads/2023/07/Bindurani.jpg

Load More