ಪವರ್‌ಲಿಫ್ಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದಿಶಾ ಮೋಹನ್
ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಯುವ ಪ್ರತಿಭಾವಂತೆ
ದಿಶಾ ಮೋಹನ್ ಅವರ ಸಾಧನೆಗೆ ಶುಭಾಶಯಗಳ ಮಹಾಪೂರ
2024ರ ಏಷ್ಯನ್ ಪವರ್‌ಲಿಫ್ಟಿಂಗ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಪವರ್‌ಲಿಫ್ಟಿಂಗ್‌ನಲ್ಲಿ ದಿಶಾ ಮೋಹನ್ ಅವರು ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಕಿರ್ಗಿಸ್ತಾನ್‌ನಲ್ಲಿ ಈ ಬಾರಿಯ ಏಷ್ಯನ್ ಪವರ್‌ಲಿಫ್ಟಿಂಗ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ ನಡೆಯಿತು. 57 ಕೆಜಿ ವಿಭಾಗದಲ್ಲಿ ದಿಶಾ ಮೋಹನ್ ಅಮೋಘ ಸಾಧನೆ ಮಾಡಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.
ದಿಶಾ ಮೋಹನ್ ಅವರು ಚಿನ್ನದ ಪದಕಕ್ಕೆ ಭಾಜನರಾದರೆ ಮಂಗೋಲಿಯಾದ ಸ್ಪರ್ಧಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಅಪ್ಪನ ಮುಂದೆ R ಅಶ್ವಿನ್ ಭಾವುಕ.. ತಂದೆ ಎದುರಿಗೆ ಸ್ಟಾರ್ ಆಲ್ರೌಂಡರ್ ಸಾಧನೆಗಳು ಏನೇನು?
18 ವರ್ಷದ ದಿಶಾ ಮೋಹನ್ ಅವರು ವಿದ್ಯಾರ್ಥಿಯಾಗಿದ್ದು, 2 ವರ್ಷದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯ ಫಲವಾಗಿ ದಿಶಾ ಮೋಹನ್ ಅವರ ಸಾಧನೆಗೆ ಜಾಗತಿಕ ಮನ್ನಣೆ ಸಿಕ್ಕಿದೆ.
ದಿಶಾ ಮೋಹನ್ ಅವರು ಬೆಂಗಳೂರಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಜೆಪಿ ನಗರದ ಬಾಲರ್ಕ ಫಿಟ್ನೆಸ್ ಸೆಂಟರ್‌ನಲ್ಲಿ ಕೋಚ್ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರು ತರಬೇತಿ ನೀಡುತ್ತಾ ಬಂದಿದ್ದಾರೆ. ದಿಶಾ ಮೋಹನ್ ಅವರು ಗೆದ್ದ ಚಿನ್ನದ ಪದಕ ಇಡೀ ದೇಶಕ್ಕೆ ಹೆಮ್ಮೆಯಾಗಿದ್ದು, ದಿಶಾ ಸಾಧನೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ