newsfirstkannada.com

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಭ್ರಷ್ಟಾಚಾರದ ತಿಮಿಂಗಿಲ; ಪತ್ತೆಯಾದ ಕೋಟಿ, ಕೋಟಿ ಹಣಕ್ಕೆ ಬೆಚ್ಚಿ ಬಿದ್ದ ಅಧಿಕಾರಿಗಳು

Share :

22-07-2023

    ಭ್ರಷ್ಟಾಚಾರ ನಿಗ್ರಹ ದಳದಿಂದ ಜಿಲ್ಲಾ ಸಿಇಒ ಮನೆ ಮೇಲೆ ರೇಡ್​

    ಖಚಿತ ಮಾಹಿತಿ, ಲಂಚ ಪಡೆಯುವಾಗ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

    ಅಪಾರ್ಟ್‌ಮೆಂಟ್‌ ಶೋಧನೆ ಮಾಡುತ್ತಿರೋ ಭ್ರಷ್ಟಾಚಾರ ನಿಗ್ರಹ ಪಡೆ

ಅಸ್ಸಾಂನಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ತಿಮಿಂಗಿಲವೊಂದು ಬಲೆಗೆ ಬಿದ್ದಿದೆ. ಭ್ರಷ್ಟಾಚಾರ ನಿಗ್ರಹ ಪಡೆ ಮತ್ತು ಕಣ್ಗಾವಲು ದಳದ ಅಧಿಕಾರಿಗಳು ಅಸ್ಸಾಂನ ಧುಬ್ರಿ ಜಿಲ್ಲಾ ಪರಿಷತ್ ಸಿಇಒ ಬಿಸ್ವಜಿತ್ ಗೋಸ್ವಾಮಿ ಅವರ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ 2 ಕೋಟಿಗೂ ಅಧಿಕ ನಗದು ಮತ್ತು ಮೌಲ್ಯಯುತ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಇಒ ಬಿಸ್ವಜಿತ್ ಗೋಸ್ವಾಮಿ ಅವರ ಅಪಾರ್ಟ್‌ಮೆಂಟ್‌ನ ಧುಬ್ರಿ ಜಿಲ್ಲೆಯ ಬೊಂಗೈಗಾಂವ್‌ನಲ್ಲಿದೆ. ಇದು ಅವರ ಪತ್ನಿ ಹೆಸರಿನಲ್ಲಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಸರ್ಕಾರದ ಯೋಜನೆಗಳಿಗೆ ಅನುಮೋದನೆ ನೀಡುವ ಸಲುವಾಗಿ ಜಿಲ್ಲಾ ಸದಸ್ಯರಿಂದ 30,000 ರೂಪಾಯಿ ಲಂಚ ಪಡೆಯುತ್ತಿದ್ದರು. ಈ ವೇಳೆ ದಾಳಿ ಮಾಡಿದ ಅಧಿಕಾರಿಗಳು ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ. ಇನ್ನು ಸಿಇಒ ಅವರ ಅಸಿಸ್ಟೆಂಟ್​ ಜಿಲ್ಲಾ ಪ್ರೊಗ್ರಾಮರ್ ಮೆನೇಜರ್​ ಮೃಣಾಲ್ ಕಾಂತಿ ಸರ್ಕಾರ್ ಕೂಡ ನಿನ್ನೆ ವಶಕ್ಕೆ ಪಡೆದಿದ್ದರು.

ದಾಳಿ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು 11 ಕಡೆಗಳಲ್ಲಿ ಸೈಟುಗಳನ್ನು ಹೊಂದಿದ್ದು ಹಲವು ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರಾಗಿದ್ದಾರೆ. 6 ಬ್ಯಾಂಕ್ ಪಾಸ್ ಬುಕ್​ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇನ್ನು ದಾಳಿ ಮಾಡಿ ಭ್ರಷ್ಟಾಧಿಕಾರಿಯನ್ನು ಬಲೆಗೆ ಬಿಳಿಸಿದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ವಿರೋಧಿ ದಳದ ಸಿಬ್ಬಂದಿ ಕಾರ್ಯಾಚರಣೆಗೆ ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಭ್ರಷ್ಟಾಚಾರದ ತಿಮಿಂಗಿಲ; ಪತ್ತೆಯಾದ ಕೋಟಿ, ಕೋಟಿ ಹಣಕ್ಕೆ ಬೆಚ್ಚಿ ಬಿದ್ದ ಅಧಿಕಾರಿಗಳು

https://newsfirstlive.com/wp-content/uploads/2023/07/ASSAM_JILLA_CEO_1.jpg

Load More