ನಿರಂತರ ಮಳೆಗೆ ದೇಶದ ಹಲವು ಪ್ರದೇಶಗಳು ಜಲಾವೃತ
ಅಸ್ಸಾಂ, ಉತ್ತಾರಾಖಂಡ್ನಲ್ಲೂ ಮುಂದುವರೆದ ಮಳೆ
ಅಸ್ಸಾಂ ರಾಜ್ಯದ 37 ಗ್ರಾಮಗಳಲ್ಲಿ ಭಾರೀ ಪ್ರವಾಹ
ವರುಣಾರ್ಭಟಕ್ಕೆ ದೇಶದ ಹಲವು ರಾಜ್ಯಗಳು ಕಂಗಾಲಾಗಿ ಹೋಗಿವೆ. ಮಳೆರಾಯನ ಅಬ್ಬರಕ್ಕೆ ಉತ್ತರದ ರಾಜ್ಯಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕರುನಾಡಿನ ಮೇಲೆ ಮುನಿದಿರೋ ಮಳೆರಾಯ ಉತ್ತರ ಭಾರತದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ವರುಣಾರ್ಭಟಕ್ಕೆ ಉತ್ತರ ತತ್ತರವಾಗ್ತಿದೆ. ಪವಾಹ ಪರಿಸ್ಥಿತಿಗೆ ಜನ-ಜಾನವಾರುಗಳು ಕಂಗಾಲಾಗಿ ಹೋಗಿದ್ದಾರೆ. ಎಡೆ ಬಿಡದೇ ಸುರಿಯುತ್ತಿರೋ ವರ್ಷಧಾರೆ ಹಲವರ ಬದುಕನ್ನ ಬೀದಿಗೆ ತಂದು ನಿಲ್ಲಿಸಿದೆ.
ಮಾನ್ಸೂನ್ ಅಬ್ಬರಕ್ಕೆ ಗುಜರಾತ್ನಲ್ಲಿ ಧಾರಾಕಾರ ಮಳೆಯಾಗ್ತಿದೆ. ನವಸಾರಿ ಜಿಲ್ಲೆಯ ಮಂದಿರ್ಗಾಮ್ ನಗರದಲ್ಲಿ ಸುರಿದ ಭಾರೀ ಮಳೆಗೆ ಅಂಡರ್ ಪಾಸ್ಗಳು ಕೆರೆಗಳಾಗಿ ಬದಲಾಗಿವೆ. ಏಕಾಏಕಿ ಸುರಿದ ರಣಮಳೆಗೆ ಅಂಡರ್ ಪಾಸ್ ಒಂದರಲ್ಲಿ ಕಾರೊಂದು ಸಿಲುಕಿತ್ತು. ಆಳೆತ್ತರದ ನೀರಿನಲ್ಲಿ ಕಾರು ಮುಳುಗಿದ ಪರಿಣಾಮ ಪ್ರಯಾಣಿಕರು ಕಂಗಾಲಾಗಿ ಕಾರಿನ ಬಾನೆಟ್ ಮೇಲೇರಿ ಕುಳಿತ್ತಿದ್ದಳು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರನ್ನ ಹೊರತೆಗೆದು ನಾಲ್ವರನ್ನು ರಕ್ಷಿಸಿದ್ದಾರೆ. ಗುಜರಾತ್ ಜುನಾಗಢ್, ರಾಜ್‌ಕೋಟ್‌ನಲ್ಲೂ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಹಲವೆಡೆ ಮನೆಗಳು ಸಹ ಕುಸಿತವಾಗಿವೆ. ವಿದ್ಯುತ್ ಕಂಬ, ಮರಗಳು ಧರಶಾಹಿಯಾಗಿವೆ.
ನೆರೆಯ ಮಹಾರಾಷ್ಟ್ರದಲ್ಲೂ ಮಳೆಯ ರೌದ್ರನರ್ತನ
ನೆರೆಯ ರಾಜ್ಯ ಮಹಾರಾಷ್ಟ್ರದಲ್ಲೂ ವರುಣಾರ್ಭಟ ಜೋರಾಗಿದೆ. ಮುಂಬೈನಲ್ಲಿ ನಿರಂತರ ಮಳೆಯಿಂದಾಗಿ ಅಂಧೇರಿಯ ಸುರಂಗಮಾರ್ಗಗಳು ಜಲಾವೃತವಾಗಿವೆ. ಮುಂಜಾಗ್ರತ ಕ್ರಮವಾಗಿ ಅಂಡರ್ಪಾಸ್ ಬಳಿ ಬ್ಯಾರಿಕೇಡ್ ಹಾಕಿ ವಾಹನ ಸವಾರರು ತೆರಳದಂತೆ ಕಟ್ಟೆಚರ ವಹಿಸಲಾಗಿದೆ. ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾದ ಪರಿಣಾಮ ದೋಣಿ ನದಿ ಸೇರಿ ಹಲವು ನದಿಗಳಿಗೆ ನೀರನ್ನ ಬಿಡಲಾಗ್ತಿದೆ. ಇದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.
ಅಸ್ಸಾಂ ಮತ್ತು ಉತ್ತಾರಾಖಂಡ್ನಲ್ಲೂ ಮುಂದುವರೆದ ಮಳೆ!
ಕಳೆದ 8 ದಿನಗಳಿಂದ ಅಸ್ಸಾಂ ಮತ್ತು ಉತ್ತರಾಖಂಡ್ನಲ್ಲಿ ಸುರಿಯುತ್ತಿರುವ ಮಳೆ ತನ್ನ ಅಬ್ಬರವನ್ನ ಮತ್ತೆ ಮುಂದುವರೆಸಿದೆ. ವರುಣಾರ್ಭಟಕ್ಕೆ ಉತ್ತರಾಖಂಡ್ನ ಹಲವೆಡೆ ಭೂಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನೂ ಅಸ್ಸಾಂನ 37 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಮನೆಗಳೂ ಜಲಾವೃತವಾಗಿದ ಕಾರಣ ಸ್ಥಳಿಯಾಡಳಿತ ಜನರನ್ನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದೆ. ದಕ್ಷಿಣದಲ್ಲಿ ಮಳೆಗಾಗಿ ಭೂರಮೆ ಬಾಯ್ತೆರೆದು ನಿಂತಿದ್ರೆ ಉತ್ತರದಲ್ಲಿ ಜಡಿ ಮಳೆಗೆ ಭೂಕುಸಿತವೇ ಉಂಟಾಗ್ತಿದೆ. ಮೂರ್ನಾಲ್ಕು ದಿನಗಳಲ್ಲಿ ರಾಜ್ಯದತ್ತ ವರುಣಾ ಕೃಪೆ ತೋರದೆ ಇದ್ದರೆ ಕರುನಾಡ ಜನರು ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಬಂದೊಗುವ ಸಾಧ್ಯತೆಯೂ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ