newsfirstkannada.com

ಭೀಕರ ಪ್ರವಾಹ, ಕೊಚ್ಚಿಕೊಂಡು ಹೋಗ್ತಿದ್ದ ಪುಟ್ಟ ಆನೆಯ ಮರಿ.. ಇದರ ರಕ್ಷಣೆಯೇ ರೋಚಕ!

Share :

Published July 2, 2024 at 2:43pm

Update July 2, 2024 at 2:44pm

    ಭೀಕರ ಪ್ರವಾಹದಲ್ಲಿ ಪುಟ್ಟ ಆನೆ ಮರಿಯ ಸರ್ಕಸ್ ಹೇಗಿತ್ತು..?

    ನೀರಿನಲ್ಲಿ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ಆನೆಯ ಮರಿ ಓಡಾಟ

    19 ಜಿಲ್ಲೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ಸಂತ್ರಸ್ತರಾಗಿದ್ದಾರೆ

ಕಳೆದ ಕೆಲವು ದಿನಗಳಿಂದ ಅಸ್ಸಾಂನಲ್ಲಿ ಭೀಕರ ಮಳೆಯಾಗುತ್ತಿದ್ದು ಜನರು ಪ್ರವಾಹದಿಂದ ಬೇಸತ್ತು ಹೋಗಿದ್ದಾರೆ. ಇದರಿಂದ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 19 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಸದ್ಯ ಇದರ ನಡುವೆ ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಪುಟ್ಟ ಆನೆಯ ಮರಿಯನ್ನು ರಕ್ಷಣಾ ಪಡೆ ಕಾಪಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: T20 ವಿಶ್ವಕಪ್​ ಗೆಲುವಿನ ಮಾಸ್ಟರ್ ಮೈಂಡ್​ಗಳು.. ಕೊಹ್ಲಿರನ್ನ ಓಪನಿಂಗ್ ಆಡಿಸಿ ಟ್ರೋಫಿ ಗೆದ್ದೇ ಬಿಟ್ರು!

ಅಸ್ಸಾಂನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ಕೇವಲ ಮನುಷ್ಯರಷ್ಟೇ ಅಲ್ಲ, ಕಾಡು ಪ್ರಾಣಿಗಳ ಮೇಲೂ ಪರಿಣಾಮ ಬೀರಿದೆ. ಅಸ್ಸಾಂನ ಚಿರಾಂಗ್ ಪ್ರದೇಶದ ಬಳಿಯ ಐಯೆ ನದಿ ನೀರಿನಲ್ಲಿ ಪುಟ್ಟ ಆನೆ ಮರಿಯೊಂದು ಕೊಚ್ಚಿಕೊಂಡು ಹೋಗುತ್ತಿತ್ತು. ತನ್ನ ತಾಯಿಯಿಂದ ತಪ್ಪಿಸಿಕೊಂಡಿದ್ದ ಮರಿ ಆನೆ ನೀರಿನಲ್ಲಿ ಇನ್ನಿಲ್ಲದ ಕಷ್ಟ ಅನುಭವಿಸುತ್ತಿತ್ತು. ಇದನ್ನು ನೋಡಿದ ಅರಣ್ಯಾಧಿಕಾರಿಗಳು ಸೇತುವೆ ಮೇಲಿಂದ ಹಗ್ಗ ಬಿಟ್ಟು ಅದನ್ನು ಆನೆ ಮರಿಗೆ ಕಟ್ಟಿ ಮೇಲೆತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಐಕಾನಿಕ್ ವಾಕಿಂಗ್​ನಲ್ಲಿ ಟ್ರೋಫಿ ಸ್ವೀಕರಿಸಿದ್ದ ರೋಹಿತ್.. ಹಿಟ್​​ಮ್ಯಾನ್​ಗೆ ಈ ಸ್ಟೈಲ್ ಹೇಳಿದ್ಯಾರು?

ಸದ್ಯ ಈ ಬಗ್ಗೆ ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ ಶರ್ಮಾ ಎಕ್ಸ್​​ನಲ್ಲಿ ಆನೆ ಮರಿಯ ವಿಡಿಯೋ ಶೇರ್ ಮಾಡಿದ್ದಾರೆ. ಮರಿಯನ್ನು ಮಾನಸ ನ್ಯಾಷನಲ್ ಪಾರ್ಕ್​ ಅರಣ್ಯಾಧಿಕಾರಿಗಳ ತಂಡಕ್ಕೆ ಒಪ್ಪಿಸಲಾಗಿದೆ. ಅದರ ತಾಯಿಯನ್ನು ಹುಡಕಲು ನಮ್ಮ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಸದ್ಯ ಈ ವಿಡಿಯೋಗೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಪ್ರವಾಹ, ಕೊಚ್ಚಿಕೊಂಡು ಹೋಗ್ತಿದ್ದ ಪುಟ್ಟ ಆನೆಯ ಮರಿ.. ಇದರ ರಕ್ಷಣೆಯೇ ರೋಚಕ!

https://newsfirstlive.com/wp-content/uploads/2024/07/ASSAM_FLOOD_1.jpg

Load More