newsfirstkannada.com

ಹೆಂಡತಿ ಮೃತಪಟ್ಟ 10 ನಿಮಿಷದಲ್ಲಿ ICUನಲ್ಲಿ ಶೂಟ್​ ಮಾಡಿಕೊಂಡ IPS ಅಧಿಕಾರಿ.. ಇದು ಮನಕಲಕುವ ಸ್ಟೋರಿ

Share :

Published June 19, 2024 at 6:47pm

    ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ವಾಸವಿದ್ದ ಅಧಿಕಾರಿ

    ಪ್ರಾರ್ಥಿಸಬೇಕೆಂದು ಡಾಕ್ಟರ್ಸ್​, ನರ್ಸ್​ರನ್ನ ಹೊರಗೆ ಕಳುಹಿಸಿದ್ರು

    ಪತ್ನಿಯಿದ್ದ ಐಸಿಯುನಲ್ಲೇ ಶೂಟ್ ಮಾಡಿಕೊಂಡ IPS ಅಧಿಕಾರಿ

ದಿಸ್ಪುರ್: ಆಸ್ಪತ್ರೆಯಲ್ಲಿ ಕ್ಯಾನ್ಸರ್​ನಿಂದ ತನ್ನ ಹೆಂಡತಿ ಸಾವನ್ನಪ್ಪಿದ ಕೆಲವೇ ಕ್ಷಣದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಶೂಟ್ ಮಾಡಿಕೊಂಡು ಅದೆ ರೂಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸಾಂನ ಗುವಾಹಟಿ ನಗರದಲ್ಲಿರುವ ನೆಮ್‌ಕೇರ್ ಎನ್ನುವ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಮುಲಾಜಿಲ್ಲದೇ ನಟ ದರ್ಶನ್ ಧರಿಸಿದ್ದ ವಿಗ್ ಬಿಚ್ಚಿಸಿದ ಪೊಲೀಸರು; ಕಾರಣವೇನು?

ಪ್ರಸ್ತುತ ಅಸ್ಸಾಂ ಸರ್ಕಾರದ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಹಾಗೂ 2009ರ ಬ್ಯಾಚ್‌ನ ಡಿಐಜಿ ಶ್ರೇಣಿಯ ಐಪಿಎಸ್ ಅಧಿಕಾರಿ ಶಿಲಾದಿತ್ಯ ಚೇಟಿಯಾ (44) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತ್ನಿ ಆಗಮೊನೀ ಬಾರ್ಬರುವಾ ಕಳೆದ 2 ವರ್ಷಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ನೆಮ್‌ಕೇರ್ ಖಾಸಗಿ ಆಸ್ಪತ್ರೆಗೆ ಎರಡು ತಿಂಗಳು ಹಿಂದೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಪತ್ನಿ ಅನಾರೋಗ್ಯ ಹಿನ್ನೆಲೆಯಲ್ಲಿ ಸರ್ಕಾರದ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ 4 ತಿಂಗಳಿನಿಂದ ರಜೆಯಲ್ಲಿದ್ದರು.

ಇದನ್ನೂ ಓದಿ: ವಿರಾಟ್​ ಉಗ್ರರೂಪ, ಎದುರಾಳಿಗಳಿಗೆ ಖಡಕ್​ ವಾರ್ನ್​.. ಕೊಹ್ಲಿಗೆ ಕಂಟಕ ಆಗ್ತಾರಾ ಯಶಸ್ವಿ ಜೈಸ್ವಾಲ್?

ಪತ್ನಿಯನ್ನು ಆಸ್ಪತ್ರೆಯ ಐಸಿಯುನಲ್ಲಿ ದಾಖಲು ಮಾಡಿದ ಮೇಲೆ 2 ತಿಂಗಳುಗಳಿಂದ ಆಸ್ಪತ್ರೆಯಲ್ಲಿ ತಂಗಿದ್ದರು. ಇದಕ್ಕಾಗಿ ಅನುಮತಿ ಪಡೆದುಕೊಂಡು ಪ್ರತ್ಯೇಕ ರೂಮ್​ ತೆಗೆದುಕೊಂಡಿದ್ದರು. ಕಳೆದ 3 ದಿನಗಳಿಂದ ಅವರ ಪತ್ನಿಯ ಸ್ಥಿತಿ ಚಿಂತಾಜನಕವಾಗಿತ್ತು. ಅದರಂತೆ ಅವರು ಆಸ್ಪತ್ರೆಯ ಐಸಿಯುನಲ್ಲಿ ಇಂದು ಸಂಜೆ ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ಅಲ್ಲೇ ಇದ್ದ ಗಂಡನಿಗೆ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:  ಸ್ಮೃತಿ ಮಂದನಾ, ಕೌರ್​ ಭರ್ಜರಿ ಸೆಂಚುರಿ.. ಟೀಮ್ ಇಂಡಿಯಾ ನೀಡಿದ ಬೃಹತ್​ ಟಾರ್ಗೆಟ್​ಗೆ ಬೆಚ್ಚಿಬಿದ್ದ ಆಫ್ರಿಕಾ

ಐಸಿಯುನಲ್ಲಿದ್ದ ಮೃತ ಪತ್ನಿ ಬಳಿಗೆ ತಕ್ಷಣ ಗಾಬರಿಯಿಂದ ಓಡೋಡಿ ಬಂದು ದುಃಖಿತರಾಗಿದ್ದಾರೆ. ಬಳಿಕ ನಾನು ಪ್ರಾರ್ಥನೆ ಮಾಡಬೇಕೆಂದು ಹೇಳಿ ಐಸಿಯುನಲ್ಲಿದ್ದ ಡಾಕ್ಟರ್ಸ್, ನರ್ಸ್​ಗಳನ್ನ ಹೊರಗೆ ಕಳುಹಿಸಿದ್ದಾರೆ. ಇದಾದ 10 ನಿಮಿಷದ ಬಳಿಕ ತಮ್ಮಲ್ಲಿದ್ದ ಸರ್ಕಾರದ ಗನ್​​ನಿಂದ ತಲೆಗೆ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸೌಂಡ್ ಕೇಳುತ್ತಿದ್ದಂತೆ ಅಸ್ಪತ್ರೆಯ ಸಿಬ್ಬಂದಿ, ಡಾಕ್ಟರ್ಸ್​ ಎಲ್ಲ ಓಡೋಡಿ ಬಂದು ಏನಾಯಿತು ಎಂದು ನೋಡಿದ್ದಾರೆ. ಆದ್ರೆ ಪತ್ನಿ ಪಕ್ಕದಲ್ಲೇ ಗಂಡ ಶವವಾಗಿ ಬಿದ್ದಿದ್ದರು. ಸದ್ಯ ಇವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅಸ್ಸಾಂನ ಇಡೀ ಪೊಲೀಸ್ ಕುಟುಂಬಗಳು ಸಂತಾಪ ವ್ಯಕ್ತಪಡಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ಮೃತಪಟ್ಟ 10 ನಿಮಿಷದಲ್ಲಿ ICUನಲ್ಲಿ ಶೂಟ್​ ಮಾಡಿಕೊಂಡ IPS ಅಧಿಕಾರಿ.. ಇದು ಮನಕಲಕುವ ಸ್ಟೋರಿ

https://newsfirstlive.com/wp-content/uploads/2024/06/ASSAM_IPS_WIFE.jpg

Load More