newsfirstkannada.com

ತೆಲುಗು ಸ್ಟಾರ್ಸ್ ಸಾಯ್ತಾರೆ ಎಂದ ವೇಣುಸ್ವಾಮಿ ಭವಿಷ್ಯದಿಂದ ನಡುಕ; ಹೆದರಿದ ಫೇಮಸ್ ನಟಿಯರು ಏನ್ ಮಾಡ್ತಿದ್ದಾರೆ ಗೊತ್ತಾ?

Share :

26-06-2023

    ಪ್ರಭಾಸ್ ಆದಿಪುರುಷ ಸಿನಿಮಾ ಫ್ಲಾಪ್ ಆಗುತ್ತೆ ಎಂದಿದ್ದ ಭವಿಷ್ಯ

    ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಆಗಲ್ಲ

    ಡಿ.ಕೆ ಶಿವಕುಮಾರ್ ಮುಂದಿನ ಕಿಂಗ್ ಮೇಕರ್ ಎಂದಿದ್ದ ಜ್ಯೋತಿಷಿ

ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಫ್ಲಾಪ್ ಆಗುತ್ತೆ. ರಾಮ್‌ಚರಣ್, ಉಪಾಸನಾ ದಂಪತಿಗೆ ಹೆಣ್ಣು ಮಗುವೇ ಆಗುತ್ತೆ. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಆಗಲ್ಲ. ಅಷ್ಟೇ ಯಾಕೆ ಡಿ.ಕೆ ಶಿವಕುಮಾರ್ ಮುಂದಿನ ಕಿಂಗ್ ಮೇಕರ್ ಹೀಗೆಲ್ಲಾ ಭವಿಷ್ಯ ನುಡಿದಿದ್ದ ಸೆಲೆಬ್ರಿಟಿ ಜ್ಯೋತಿಷಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ. ಜ್ಯೋತಿಷಿ ವೇಣುಸ್ವಾಮಿ ಹೇಳಿರೋ ಭಯಾನಕ ಭವಿಷ್ಯ ತೆಲುಗು ಸೆಲಬ್ರಿಟಿಸ್‌ಗೆ ನಡುಕವನ್ನೇ ಹುಟ್ಟಿಸಿದೆ.

ಸೆಲೆಬ್ರಿಟಿ ಜ್ಯೋತಿಷಿ ಅಂತಾನೇ ಫೇಮಸ್ ಆಗಿರುವ ವೇಣುಸ್ವಾಮಿ ಆಗಾಗ ಭವಿಷ್ಯವಾಣಿ ಹೇಳುತ್ತಲೇ ಇರುತ್ತಾರೆ. ವೇಣುಸ್ವಾಮಿ ನುಡಿದ ಕಾಲಜ್ಞಾನ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದೆ. ಇದೀಗ ಮತ್ತೊಮ್ಮೆ ಸ್ಟಾರ್ ನಟರ ಸಾವಿನ ಬಗ್ಗೆ ವೇಣುಸ್ವಾಮಿ ಜ್ಯೋತಿಷ್ಯ ನುಡಿದಿದ್ದಾರೆ. 2026ರಲ್ಲಿ ಇಬ್ಬರು ಟಾಲಿವುಡ್‌ ಹೀರೋಗಳು ಸಾಯುತ್ತಾರೆ. ಅದರಲ್ಲಿ ಒಬ್ಬರು ಅನಾರೋಗ್ಯದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಮತ್ತೊಬ್ಬರು ಸಾಲಬಾಧೆ ತಾಳಲಾರದೇ ಪ್ರಾಣ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ. ವೇಣುಸ್ವಾಮಿಯವರ ಈ ಭವಿಷ್ಯ ತೆಲುಗು ಹೀರೋಗಳಿಗೆ ನಡುಕ ಹುಟ್ಟಿಸಿದೆ ಎನ್ನಲಾಗಿದೆ.

ಸೆಲೆಬ್ರಿಟಿ ಜ್ಯೋತಿಷಿ ಸಾವಿನ ಭವಿಷ್ಯ ನುಡಿದ ಮೇಲೆ ಕೆಲವು ನಟ, ನಟಿಯರು ಯಾಗದ ಮೊರೆ ಹೋಗಿದ್ದಾರೆ. ನಟಿ ಡಿಂಪಲ್ ಹಯಾತಿ ಖುದ್ದು ವೇಣುಸ್ವಾಮಿ ಅವರ ಕೈಯಿಂದ ಯಾಗ ಮಾಡಿಸಿದ್ದು ಆರೋಗ್ಯ, ಐಶ್ವರ್ಯ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಡಿಂಪಲ್ ಹಯಾತಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮಾಡಿರೋ ಯಾಗದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತೆಲುಗು ಚಿತ್ರರಂಗದ ಖ್ಯಾತ ನಟ, ನಟಿಯರು ವೇಣುಸ್ವಾಮಿ ಪೂಜಾಫಲವನ್ನ ಹೆಚ್ಚಾಗಿ ನಂಬುತ್ತಾರೆ. ಸೆಲಬ್ರಿಟಿಗಳಿಗೆ ಸಂಕಷ್ಟ ಎದುರಾದಾಗ ಅದರಿಂದ ಪಾರಾಗಲು ವೇಣುಸ್ವಾಮಿಯ ಮೊರೆ ಹೋಗುತ್ತಾರೆ. ಇತ್ತೀಚಿಗೆ ನಟಿ ಡಿಂಪಲ್ ಹಯಾತಿ ಅವರು ಟ್ರಾಫಿಕ್ ಪೊಲೀಸ್ ಜೊತೆ ಗಲಾಟೆಯಲ್ಲಿ ಸುದ್ದಿಯಾಗಿದ್ದರು. ಇವರ ಇತ್ತೀಚಿನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಈ ಎಲ್ಲಾ ಹಿನ್ನೆಡೆಯಿಂದ ಯಶಸ್ಸು ಸಾಧಿಸಲು ಡಿಂಪಲ್ ಹಯಾತಿ ಅವರು ವೇಣುಸ್ವಾಮಿ ಅವರ ಬಳಿ ಹೋಗಿದ್ದು ವಿಶೇಷ ಯಾಗ ಮಾಡಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ತೆಲುಗು ಸ್ಟಾರ್ಸ್ ಸಾಯ್ತಾರೆ ಎಂದ ವೇಣುಸ್ವಾಮಿ ಭವಿಷ್ಯದಿಂದ ನಡುಕ; ಹೆದರಿದ ಫೇಮಸ್ ನಟಿಯರು ಏನ್ ಮಾಡ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2023/06/Dimple-Hayanth.jpg

Load More