/newsfirstlive-kannada/media/post_attachments/wp-content/uploads/2023/11/World-cup-Final.jpg)
ಟೀಂ ಇಂಡಿಯಾದ ಕುರಿತಾಗಿ ಭಾರೀ ನಿರೀಕ್ಷೆಗಳಿವೆ. ಅದರಲ್ಲೂ ಎಲ್ಲರ ಬಾಯಲ್ಲಿ ಈ ಬಾರಿ ಟೀಂ ಇಂಡಿಯಾಗೆ ವಿಶ್ವಕಪ್​ ಟ್ರೋಫಿ ಎಂಬ ಮಂತ್ರವನ್ನು ಕೇಳುತ್ತಿದೆ. ಅದರಲ್ಲೂ ಕೆಲವರು ಟೀಂ ಇಂಡಿಯಾ ಗೆಲ್ಲುತ್ತದೆ ಎಂಬ ಭರವಸೆ ನೀಡುವುದರ ಜೊತೆಗೆ ಕೆಲವು ಸವಾಲನ್ನು ಹಾಕುತ್ತಿದ್ದಾರೆ. ಅದರಂತೆಯೇ ಆಸ್ಟ್ರೋಟಾಕ್​ ಸಿಇಒ ಪುನೀತ್​ ಗುಪ್ತಾ ಕೂಡ ಭಾರತ ಗೆದ್ದರೆ 100 ಕೋಟಿಯ ಸವಾಲೆಸೆದಿದ್ದಾರೆ.
ಪುನೀತ್​ ಗುಪ್ತಾ, ಭಾರತ ವಿಶ್ವಕಪ್​ ಟ್ರೋಫಿ ಗೆದ್ದರೆ ಆಸ್ಟ್ರೋಟಾಕ್​ ಬಳಕೆದಾರರಿಗೆ 100 ಕೋಟಿ ರೂಪಾಯಿ ವಿತರಿಸುವುದಾಗಿ ಹೇಳಿದ್ದಾರೆ. ಸದ್ಯ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.
ಲಿಂಕ್ಡ್​ಇನ್​ನಲ್ಲಿ ಪೋಸ್ಟ್​ ಈ ವಿಚಾರವನ್ನು ಹಂಚಿಕೊಂಡ ಪುನೀತ್​ ಗುಪ್ತಾ, ‘‘ಭಾರತ ಕೊನೆಯ ಬಾರಿಗೆ 2011ರಲ್ಲಿ ವಿಶ್ವಕಪ್​ ಗೆದ್ದಾಗ ನಾನು ಕಾಲೇಜಿನಲ್ಲಿದ್ದೆ. ಇದುನನ್ನ ಜೀವನದ ಸಂತಸದ ದಿನವಾಗಿತ್ತು’’ ಎಂದು ಬರೆದುಕೊಂಡಿದ್ದಾರೆ.
ಬಳಿಕ, ‘‘ನಾವು ಇಡೀ ರಾತ್ರಿ ಪಂದ್ಯದ ತಂತ್ರವನ್ನು ಚರ್ಚಿಸುತ್ತಲೇ ಇದ್ದುದ್ದರಿಂದ ಪಂದ್ಯದ ದಿನ ರಾತ್ರಿ ಸರಿಯಾಗಿ ನಿದ್ರೆ ಮಾಡಲಿಲ್ಲ. ಪಂದ್ಯ ಗೆದ್ದಾಗ ಗೆಳೆಯರನ್ನ ಅಪ್ಪಿಕೊಂಡೆ. ಚಂಡೀಗಢದಲ್ಲಿ ಬೈಕ್​ ರೈಡ್​ ಮಾಡಿದೆವು. ಅಪರಿಚಿತರೊಂದಿಗೆ ಸಂತಸ ಹಂಚಿಕೊಂಡೆವು. ಆ ದಿನ ನನ್ನ ಜೀವನದ ಸಂತೋಷದಾಯಕ ದಿನವಾಗಿತ್ತು’’ ಎಂದು ಆಸ್ಟ್ರೋಟಾಕ್ ಸಿಇಓ ಪುನೀತ್​ ಗುಪ್ತಾ ಬರೆದುಕೊಂಡಿದ್ದಾರೆ.
‘‘ಕಳೆದ ವರ್ಷ ನನ್ನ ಸಂತೋಷವನ್ನು ಕೆಲವು ಸ್ನೇಹಿತರೊಂದಿಗೆ ಹಂಚಿಕೊಂಡೆ. ಆದರೆ ಈ ಬಾರಿ ಹೆಚ್ಚು ಆಸ್ಟ್ರೋಟಾಕ್​ ಬಳಕೆದಾರರನ್ನು ಹೊಂದಿದ್ದೇವೆ. ಅವರೊಂದಿಗೆ ನನ್ನ ಸಂತೋಷ ಹಂಚಿಕೊಳ್ಳಲು ನಾನು ಏನು ಮಾಡಬೇಕು ಎಂದು ಯೋಚಿಸಿದೆ. ಹಾಗಾಗಿ ಇಂದು ಬೇಳಿಗ್ಗೆ ನನ್ನ ಹಣಕಾಸು ತಂಡದೊಂದಿಗೆ ಚರ್ಚಿಸಿದೆ. ಭಾರತ ವಿಶ್ವಕಪ್​ ಗೆದ್ದರೆ ನಮ್ಮ ಬಳಕೆದಾರರ ವಾಲೆಟ್​ಗಳಲ್ಲಿ 100 ಕೋಟಿ ರೂಪಾಯಿಗಳನ್ನು ಹಂಚುವುದಾಗಿ ನಿರ್ಣಯ ಮಾಡಿದೆವು’’ ಎಂದು ಹೇಳಿದ್ದಾರೆ.
ಅಂದಹಾಗೆಯೇ ಆಸ್ಟ್ರೋಟಾಕ್ ಎಂಬುದು ಜೋತಿಷ್ಯದ ಬಗ್ಗೆ ತಿಳಿ ಹೇಳುವ ಆ್ಯಪ್​ ಇದಾಗಿದೆ. ಬಹುತೇಕ ಜನರು ಈ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿ ಬಳಸುತ್ತಿದ್ದಾರೆ. ಅದರಂತೆಯೇ ಪುನೀತ್​ ಗುಪ್ತಾ ಈ ಆ್ಯಪ್​ ಬಳಕೆದಾರರಿಗಾಗಿ 100 ಕೋಟಿ ಸವಾಲೆಸೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us