ಸ್ಯಾಂಡಲ್ವುಡ್ ಸ್ಟಾರ್ ಜೋಡಿ ಮದುವೆಗೆ ತಯಾರಿ ಭರ್ಜರಿ
ಕೊಡವ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಅದ್ಧೂರಿ ಕಲ್ಯಾಣ
ನಟಿ ಹರ್ಷಿಕಾ ಮನೆಯಲ್ಲಿ ಮದುವೆ ಸಂಪ್ರದಾಯಗಳು ಆರಂಭ
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಸ್ಟಾರ್ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಈಗ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.
ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ಇವರಿಬ್ಬರ ವಿವಾಹ ಮಹೋತ್ಸವ ನಡೆಯಲಿದೆ. ಸ್ಟಾರ್ ಜೋಡಿಯ ಕಲ್ಯಾಣಕ್ಕೆ ಈಗಾಗಲೇ ಸಾಕಷ್ಟು ಸಿದ್ದತೆಗಳನ್ನು ಮಾಡಲಾಗುತ್ತಿದೆ. ಕೊಡವ ಶೈಲಿಯಲ್ಲಿ ನಟ ಭುವನ್ ಹಾಗೂ ನಟಿ ಹರ್ಷಿಕಾ ಮದುವೆಯಾಗುತ್ತಿದ್ದು, ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ ಅಲಂಕೃತಗೊಳ್ಳಲಿದೆ.
View this post on Instagram
ಇನ್ನು ನಟಿ ಹರ್ಷಿಕಾ ಮದುವೆಗೂ ಮುನ್ನ ಸಾಕಷ್ಟು ಪೂಜೆಗಳು ಮನೆಯಲ್ಲಿ ಜರುಗುತ್ತಿವೆ. ಈ ಸ್ಟಾರ್ ಜೋಡಿಯ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈ ಕುರಿತು ನಟಿ ಹರ್ಷಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ