newsfirstkannada.com

BREAKING: ಮಣಿಪುರದಲ್ಲಿ ಮತ್ತೆ ಹಿಂಸಾಚಾರ.. ಉಗ್ರರ ದಾಳಿಗೆ 9 ನಾಗರಿಕರು ಸಾವು, ಮತ್ತಷ್ಟು ಸಾವು ನೋವಿನ ಆತಂಕ

Share :

14-06-2023

    ಇಂಫಾಲ್ ಮತ್ತು ಕಾಂಗ್ಪೋಕಿ ಜಿಲ್ಲೆಯ ಗಡಿ ಭಾಗದಲ್ಲಿ ಅಟ್ಟಹಾಸ

    ಕಳೆದ ತಿಂಗಳು ನಡೆದ ಹಿಂಸಾಚಾರದಲ್ಲಿ 100 ಮಂದಿ ಸಾವನ್ನಪ್ಪಿದ್ರು

    ಮತ್ತೆ ಈ ಘಟನೆಯಿಂದ ಮಣಿಪುರದಲ್ಲಿ ಆತಂಕದ ವಾತಾವರಣ

ಇಂಫಾಲ್​: ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದು 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಮಣಿಪುರದ ಇಂಫಾಲ್ ಮತ್ತು ಕಾಂಗ್ಪೋಕಿ ಜಿಲ್ಲೆಯ ಗಡಿ ಭಾಗದ ಪ್ರದೇಶವಾದ ಖಮೆನ್‌ಲೋಕ್‌ನ ಹಳ್ಳಿಯಲ್ಲಿ ನಡೆದಿದೆ.

ಖಮೆನ್‌ಲೋಕ್‌ನ ಹಳ್ಳಿಗೆ ಇಂದು ರಾತ್ರಿ 1 ಗಂಟೆ ಸುಮಾರಿಗೆ ಶಸ್ತ್ರ ಸಜ್ಜಿತವಾಗಿ ಬಂದ ಉಗ್ರಗಾಮಿಗಳು ಇಡೀ ಹಳ್ಳಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದರು. ಬಳಿಕ ಗ್ರಾಮಸ್ಥರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 9 ಮಂದಿ ಸಾವನ್ನಪ್ಪಿದ್ದು 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರವಷ್ಟೇ ಇದೇ ಗ್ರಾಮದಲ್ಲಿ ಸ್ವಯಂ ಸೇವಕರು ಮತ್ತು ಉಗ್ರಗಾಮಿಗಳ ನಡುವೆ ಪರಸ್ಪರ ಗುಂಡಿನ ದಾಳಿ ನಡೆದಿತ್ತು. ಆಗ 9 ಮಂದಿ ಗ್ರಾಮಸ್ಥರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ನಿನ್ನೆ ಕೂಡ ಭದ್ರತಾ ಪಡೆ ಹಾಗೂ ಕುಕಿ ಭಯೋತ್ಪಾದಕರ ನಡುವೆ ಫೈರಿಂಗ್​ ನಡೆದಿತ್ತು.

ಮಣಿಪುರದಲ್ಲಿ 1 ತಿಂಗಳ ಹಿಂದೆ ನಡೆದಿದ್ದ ಹಿಂಸಾಚಾರದಲ್ಲಿ ಮೈತೆಯಿ ಮತ್ತು ಕುಕಿ ಸಮುದಾಯದ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿ, 310 ಜನರು ಗಾಯಗೊಂಡಿದ್ದರು. ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸೇನೆ ಮತ್ತು ಅರೆ ಮಿಲಿಟರಿ ಸಿಬ್ಬಂದಿ ಹರಸಾಹಸ ಪಟ್ಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಮಣಿಪುರದಲ್ಲಿ ಮತ್ತೆ ಹಿಂಸಾಚಾರ.. ಉಗ್ರರ ದಾಳಿಗೆ 9 ನಾಗರಿಕರು ಸಾವು, ಮತ್ತಷ್ಟು ಸಾವು ನೋವಿನ ಆತಂಕ

https://newsfirstlive.com/wp-content/uploads/2023/06/MANIPUR_ATTACK.jpg

Load More