KLR ಕಂಬ್ಯಾಕ್, ಪಾಕ್ ವಿರುದ್ಧ ಸ್ಫೋಟಕ ಶತಕ
106 ಬಾಲ್ ಎದುರಿಸಿ 111 ರನ್ ಗಳಿಸಿದ ರಾಹುಲ್
ಶತಕ ಬಾರಿಸ್ತಿದ್ದಂತೆ ಇನ್ಸ್ಟಾದಲ್ಲಿ ಎಮೋಷನಲ್ ಪೋಸ್ಟ್
ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅಮೋಘ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಅವರ ವಿರುದ್ಧ ಟೀಕಿಸುತ್ತಿದ್ದ ಟೀಕಾಕಾರರಿಗೆ ಬ್ಯಾಟಿಂಗ್ ಮೂಲಕವೇ ಉತ್ತರ ನೀಡಿದ್ದಾರೆ.
ಒಟ್ಟು 106 ಬಾಲ್ಗಳನ್ನು ಎದುರಿಸಿರುವ ರಾಹುಲ್, 12 ಬೌಂಡರಿ, 2 ಸಿಕ್ಸರ್ ಬಾರಿಸಿದರು. 104.72 ಸ್ಟ್ರೈಕ್ ರೇಟ್ನೊಂದಿಗೆ ಆಡಿರುವ ರಾಹುಲ್, 111 ರನ್ಗಳಿಸಿ ಐತಿಹಾಸಿಕ ಸಾಧನೆ ಮಾಡಿದರು. ಈ ಬೆನ್ನಲ್ಲೇ, ಅವರ ಪತ್ನಿ ಅಥಿಯಾ ಶೆಟ್ಟಿ, ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರಾಹುಲ್, ಶತಕ ಬಾರಿಸಿದ ಕ್ಷಣಗಳ ಫೋಟೋ ಹಾಗೂ ವಿಡಿಯೋವನ್ನು ಶೆಟ್ಟಿ ಶೇರ್ ಮಾಡಿದ್ದಾರೆ. ರಾತ್ರಿ ಕೊನೆಗೊಳ್ಳಲೇಬೇಕು, ಸೂರ್ಯ ಹುಟ್ಟಲೇಬೇಕು. ನನಗೆ ನೀವೇ ಎಲ್ಲ.. ಐ ಲವ್ ಯೂ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
View this post on Instagram
ಕಳಪೆ ಫಾರ್ಮ್ನಿಂದ ಭಾರೀ ಟೀಕೆಗೆ ಗುರಿಯಾಗಿದ್ದ ರಾಹುಲ್, ಐಪಿಎಲ್ ಆಡುವ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಪರಿಣಾಮ ಹಲವು ತಿಂಗಳುಗಳಿಂದ ರಾಹುಲ್ ಕ್ರಿಕೆಟ್ ಬದುಕಿನಿಂದ ದೂರ ಇರಬೇಕಾಗಿ ಬಂತು. ಏಷ್ಯಾಕಪ್ನ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ರಾಹುಲ್ಗೆ, ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಸಕರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ರಾಹುಲ್ ಟೀಕೆ ಮಾಡ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್