ಸರ್ಜರಿಗೆ ಎಂದು ಲಂಡನ್ಗೆ ಹೋಗಿ ಹೊಸ ವಿವಾದ
ಇನ್ನೂ ಬುದ್ಧಿ ಕಲಿಯದ K.L ರಾಹುಲ್
ಹಳೇ ಕಾಫಿ ವಿವಾದದಿಂದ ಬುದ್ಧಿ ಕಲಿಯದ ಕನ್ನಡಿಗ
ಕಲಿಯದಿದ್ರೆ ಇನ್ನೇನು ಹೇಳೋದು ಹೇಳಿ. ಚಿಕಿತ್ಸೆ ಪಡೆಯಲು ಲಂಡನ್ಗೆ ತೆರಳಿದ್ದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಮೋಜು-ಮಸ್ತಿಯಲ್ಲಿ ಮುಳುಗಿ ವಿವಾದಕ್ಕೀಡಾಗಿದ್ದಾರೆ.
ಮೇ 1, 2023. ಕನ್ನಡಿಗರಿಗೆ ಒಂದು ಬ್ಯಾಡ್ನ್ಯೂಸ್ ಕಿವಿಗಪ್ಪಳಿಸಿತ್ತು. ಕೆ.ಎಲ್.ರಾಹುಲ್ ಆರ್ಸಿಬಿ ಎದುರಿನ ಪಂದ್ಯದಲ್ಲಿ ಥೈ ಇಂಜುರಿಗೆ ತುತ್ತಾಗಿ, ಐಪಿಎಲ್ ಟೂರ್ನಿಯಿಂದ ಹೊರಬಿದ್ದು ನಿರಾಸೆ ಮೂಡಿಸಿದ್ರು. ಗಾಯ ಗಂಭೀರ ಆಗಿದ್ದರಿಂದ ಸರ್ಜರಿಗೆ ಒಳಗಾದ್ರು. ಬಳಿಕ ಅವರಿಗೆ ಉತ್ತಮ ಚಿಕಿತ್ಸೆ ಅಗತ್ಯವಿತ್ತು.
ಕೂಡಲೇ ಬಿಸಿಸಿಐ ರಾಹುಲ್ರನ್ನ ಯುಕೆಗೆ ಕಳಿಸಿತು. ಸೋ ಸರ್ಜರಿ ಆಗಿರೋ ಕನ್ನಡಿಗ ಎಚ್ಚರಿಕೆಯಿಂದ ಇರಬೇಕು. ಆದಷ್ಟು ಬೇಗ ಕಮ್ಬ್ಯಾಕ್ ಮಾಡುವ ಮನಸ್ಥಿತಿ ಅಗತ್ಯ. ಬಟ್ ರಾಹುಲ್ ಮಾಡ್ತಿರೋದೇನು ? ಬಿಸಿಸಿಐ ಲಕ್ಷಾಂತರ ರೂಪಾಯಿ ಕೊಟ್ಟು ಯುಕೆಗೆ ಕಳಿಸಿ, ಸರ್ಜರಿನೂ ಮಾಡಿಸಿ, ಬೇಗ ರಿಕವರಿ ಆಗಲಿ ಅಂತ ಇಷ್ಟೆಲ್ಲಾ ಕಾಳಜಿ ವಹಿಸ್ತಿದೆ.
ಯುಕೆಯಲ್ಲಿ ಕೆಎಲ್ ರಾಹುಲ್ ಸ್ಟ್ರಿಪ್ ಕ್ಲಬ್
ಲಂಡನ್ನಲ್ಲಿ ಬೀಡು ಬಿಟ್ಟಿರುವ ಕೆಎಲ್ ರಾಹುಲ್ ಸ್ಟ್ರಿಪ್ ಕ್ಲಬ್ವೊಂದಕ್ಕೆ ಭೇಟಿ ನೀಡಿ ಎಂಜಾಯ್ ಮಾಡ್ತಿದ್ದಾರೆ. ಅಷ್ಟಕ್ಕೂ ಸ್ಟ್ರಿಪ್ ಕ್ಲಬ್ ಅಂದ್ರೆ ಏನು ಗೊತ್ತಾ? ಅರೆಬೆತ್ತಲೆ ಡ್ಯಾನ್ಸ್. ಟ್ರೀಟ್ಮೆಂಟ್ ಪಡೆಯಲು ಯುಕೆಗೆ ಹಾರಿರೋ ರಾಹುಲ್ ಏನ್ ಮಾಡ್ತಿದ್ದಾರೆ ಅನ್ನೋದನ್ನು. ಲಂಡನ್ ಸ್ಟ್ರಿಪ್ ಕ್ಲಬ್ನಲ್ಲಿ ಹೆಂಡ್ತಿ ಮತ್ತು ಫ್ರೆಂಡ್ಸ್ ಜೊತೆ ಮೋಜು-ಮಸ್ತಿಯಲ್ಲಿ ಮುಳುಗಿದ್ದಾರೆ.
ರಾಹುಲ್ರ ಸ್ಟ್ರಿಪ್ ಕ್ಲಬ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ರಾಹುಲ್ ವಿರುದ್ಧ ಟೀಕಾಪ್ರಹಾರ ನಡೆಯುತ್ತಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಮಾಡಿದ್ದು ಎಷ್ಟು ಸರಿಯಲ್ಲ ಅಂತ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.
ಕಳಚಿತು ರಾಹುಲ್ ಮುಖವಾಡ
ರಾಹುಲ್ರ ಮುಖವಾಡ ಕಳಚಿ ಬಿದ್ದಿದೆ. ರಾಹುಲ್ ಅಂದ್ರೆ ಅಂದ್ರೆ ಸೌಮ್ಯ, ರಾಹುಲ್ ಅಂದ್ರೆ ಡಿಸಿಪ್ಲಿನ್ ಕ್ರಿಕೆಟರ್ ಅನ್ನೋ ಟಾಕ್ಸ್ ಕ್ರಿಕೆಟ್ ಪಡಸಾಲೆಯಲ್ಲಿತ್ತು. ಆದ್ರೀಗ ಸ್ಟ್ರಿಪ್ ಕ್ಲಬ್ ವಿಡಿಯೋದಿಂದ ಆ ಅಭಿಪ್ರಾಯ ಬದಲಾಗಿದೆ.
ಹಳೇ ಕಾಫಿ ವಿವಾದದಿಂದ ಬುದ್ಧಿ ಕಲಿಯದ ಕನ್ನಡಿಗ
2019 ರಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ರಾಹುಲ್ ಭಾರಿ ಬೆಲೆ ತೆತ್ತಿದ್ರು. ಬಿಸಿಸಿಐ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯರನ್ನ ಕೆಲಕಾಲ ಕ್ರಿಕೆಟ್ನಿಂದ ಬ್ಯಾನ್ ಮಾಡಿತ್ತು. ಇಷ್ಟಾದ್ರು ಕನ್ನಡಿಗ ಬುದ್ಧಿ ಕಲಿತಂತೆ ಕಾಣಿಸ್ತಿಲ್ಲ. ಮತ್ತೆ ಸ್ಟ್ರಿಪ್ ಕ್ಲಬ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಬ್ಯಾಕ್ ಟು ಬ್ಯಾಕ್ ಇಂಜುರಿ ಆಗಿ ತಂಡದಿಂದ ಕಿಕೌಟ್
ಸದ್ಯಕ್ಕೆ ರಾಹುಲ್ಗೆ ಅದೃಷ್ಟನೇ ಚೆನ್ನಾಗಿಲ್ಲ. ಬಿಡುವಿಲ್ಲದೆ ಕ್ರಿಕೆಟ್ ಆಡಬೇಕಿದ್ದ ರಾಹುಲ್ ಪದೇ ಪದೇ ಇಂಜುರಿಗೆ ಒಳಗಾಗ್ತಿದ್ದಾರೆ. ಕಳೆದೆರಷ್ಟು ವರ್ಷಗಳಲ್ಲಿ ಅವರು ಟೀಮ್ ಇಂಡಿಯಾ ಪರ ಆಡಿದ್ದಕ್ಕಿಂತ ಹೊರಗುಳಿದಿದ್ದೇ ಹೆಚ್ಚು. ಬಿಕಾಜ್ ಇಂಜುರಿ ಅನ್ನೋ ಪೆಡಂಭೂತ ಬೆನ್ನೇರಿದೆ. ಥೈ ಇಂಜುರಿ ಕಾರಣಕ್ಕಾಗಿನೇ ಪ್ರಸಕ್ತ ಐಪಿಎಲ್ ತೊರೆದಿದ್ದರು.
ಫಾರ್ಮ್ ಪ್ರಾಬ್ಲಂ.. ತಂಡದಲ್ಲಿ ಸ್ಥಾನಕ್ಕಾಗಿ ಫೈಟ್
ಕಾಂಟ್ರವರ್ಸಿ ಮ್ಯಾನ್ಗೆ ಫಾರ್ಮ್ ಕೂಡ ಕೈಕೊಟ್ಟಿದೆ. ಕಳೆದೆರಡು ವರ್ಷಗಳಿಂದ ರಾಹುಲ್ ಬ್ಯಾಟೇ ಸೌಂಡ್ ಮಾಡ್ತಿಲ್ಲ. ವೈಟ್ & ರೆಡ್ಬಾಲ್ನಲ್ಲಿ ಶತಕ ಬಾರಿಸದೇ ಎರಡು ವರ್ಷ ಕಳೆದಿದೆ. ಇನ್ನು ಪ್ರಸಕ್ತ ಐಪಿಎಲ್ನಲ್ಲಿ ಆಡಿದ 9 ಪಂದ್ಯಗಳಿಂದ 274 ರನ್ ಗಳಿಸಿ ಡೀಸೆಂಟ್ ಆಟವಾಡಿದ್ರು. ಅಸಲಿ ಖದರ್ ಮಾಯವಾಗಿತ್ತು.
#KLRahul Spotted In Strip Club In UK During His Recovery pic.twitter.com/jMPzhraJqV
— Stroke0Genius🇮🇳 (@Stroke0Genius18) May 26, 2023
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್