newsfirstkannada.com

ಪ್ರಚಾರದ ವೇಳೆ BSP ಮುಖಂಡನ ಮೇಲೆ ಕೊಡಲಿಯಿಂದ ಹಲ್ಲೆಗೆ ಯತ್ನ; ಭಾರೀ ಮಾರಾಮಾರಿ -Video

Share :

20-11-2023

  ಬಿಎಸ್‌ಪಿ ಅಭ್ಯರ್ಥಿ ವಟ್ಟೆ ಜಾನಯ್ಯರ ಕೊಲೆಗೆ ಯತ್ನ

  ಹಿಂಬಾಲಕರಿದ್ದ ಹಿನ್ನೆಲೆಯಲ್ಲಿ ಜಾನಯ್ಯ ಬಚಾವ್

  ಓರ್ವ ಆರೋಪಿ ಬಂಧಿಸಿದ ಪೊಲೀಸ್ ಅಧಿಕಾರಿಗಳು

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಆತ್ಮಕೂರು ಮಂಡಲದ ಗಟ್ಟಿಕಲ್ಲು ಗ್ರಾಮದಲ್ಲಿ ಬಿಎಸ್‌ಪಿ ಮತ್ತು ಬಿಆರ್‌ಎಸ್ ಪಕ್ಷಗಳ ನಡುವೆ ಚುನಾವಣ ಪ್ರಚಾರದ ವೇಳೆ ಮಾರಾಮಾರಿ ನಡೆದಿದೆ.

ನಿನ್ನೆ ರಾತ್ರಿ ಬಿಎಸ್‌ಪಿ ಶಾಸಕ ಅಭ್ಯರ್ಥಿ ವಟ್ಟೆ ಜಾನಯ್ಯ ಅವರ ಮೇಲೆ ಕೊಲೆ ಯತ್ನ ನಡೆಸಲಾಗಿದೆ ಎನ್ನಲಾಗ್ತಿದೆ. ಜನಯ್ಯ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಬೇರೆ ಪಕ್ಷದ ಮುಖಂಡರೊಬ್ಬರು ಕೊಡಲಿಯಿಂದ ಹಲ್ಲೆಗೆ ಯತ್ನಿಸಿದ್ದಾರೆ. ಸದ್ಯ ಹಿಂಬಾಲಕರ ನಡುವೆ ಬಂದ ಜನಯ್ಯಗೆ ಯಾವುದೇ ಪ್ರಾಣಾಪಾಯಗಳಾಗಿಲ್ಲ.

ಹಿಂಬಾಲಕರೋರ್ವರಿಗೆ ಗಂಭೀರಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸೂರ್ಯಪೇಟೆಯ ಆಡಳಿತ ಪಕ್ಷದ ಶಾಸಕ ಹಾಗೂ ಸಚಿವ ಜಗದೀಶ್ ರೆಡ್ಡಿ ಅವರ ಅನುಯಾಯಿಗಳು ಈ ಹಲ್ಲೆ ನಡೆಸಿದ್ದಾರೆ ಎಂದು ಬಿಎಸ್​ಪಿ ಮುಖಂಡರು ಆರೋಪಿಸುತ್ತಿದ್ದು ಪೊಲೀಸರು ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಚಾರದ ವೇಳೆ BSP ಮುಖಂಡನ ಮೇಲೆ ಕೊಡಲಿಯಿಂದ ಹಲ್ಲೆಗೆ ಯತ್ನ; ಭಾರೀ ಮಾರಾಮಾರಿ -Video

https://newsfirstlive.com/wp-content/uploads/2023/11/JANAYYA.jpg

Load More