newsfirstkannada.com

VIDEO: ಸಿನಿಮಾ ಶೈಲಿಯಲ್ಲಿ ಯುವತಿ ಕಿಡ್ನಾಪ್‌ಗೆ ಯತ್ನ; ಹಾಡಹಗಲೇ ಎತ್ತಾಕೊಂಡು ಹೋಗುತ್ತಿರುವಾಗ ಏನಾಯ್ತು?

Share :

08-09-2023

    ನಾಲ್ಕೈದು ಜನ ಯುವತಿಯನ್ನ ಎಳೆದು ಪರಾರಿಯಾಗಲು ಯತ್ನ

    ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಿನಿಮೀಯ ಘಟನೆ

    ಯುವತಿಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗುತ್ತಿದ್ದ ವಿಡಿಯೋ

ಸಿನಿಮಾ ಸ್ಟೈಲ್‌ನಲ್ಲಿ ಯುವತಿಯ ಕಿಡ್ನಾಪ್‌ಗೆ ಯತ್ನಿಸಿ ವಿಫಲವಾಗಿರೋ ಘಟನೆ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ. ಯುವತಿಯನ್ನ ಇಬ್ಬರು ಯುವಕರು ಸೇರಿದಂತೆ ನಾಲ್ಕೈದು ಜನ ಕಾರಿಗೆ ಎಳೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ದಾವಣಗೆರೆ ತಾಲೂಕಿನ ತೋಳ ಹುಣಸೆ ಗ್ರಾಮದ ಬಳಿ ಇರುವ ದಾವಣಗೆರೆ ವಿಶ್ವವಿದ್ಯಾಲಯದ ಮುಂದೆ ಈ ಘಟನೆ ನಡೆದಿದೆ.

ಇದನ್ನೂ ಓದಿ: ಮದುವೆಯಾಗಿ 2 ಮಕ್ಕಳಾದ ಮೇಲೆ ಎರಡನೇ ಹೆಂಡತಿ ಬೇಡವಂತೆ; ಪತ್ನಿಗೆ ಕಿರುಕುಳ, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಲವಂತವಾಗಿ ಎಳೆದುಕೊಂಡು ಹೋಗುವಾಗ ಯುವತಿ ರಕ್ಷಣೆಗಾಗಿ ಚೀರಾಟ ನಡೆಸಿದ್ದಾಳೆ. ತಕ್ಷಣವೇ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗ ಕಾರನ್ನು ಅಡ್ಡಗಟ್ಟಿ ರಕ್ಷಿಸಲು ಮುಂದಾಗಿದ್ದಾರೆ. ಕೊನೆಗೆ ದಾವಣಗೆರೆ ಗ್ರಾಮಾಂತರ ಠಾಣಾ ಪೊಲೀಸರು ಯುವತಿಯ ಹೇಳಿಕೆ ಪಡೆದು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ. ಬಳ್ಳಾರಿ ಮೂಲದ ಈ ಯುವತಿ ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಓದುತ್ತಿದ್ದಾಳೆ.

ಕಿಡ್ನಾಪ್‌ ಯತ್ನದ ಹಿಂದೆ ಪೋಷಕರು!

ದಾವಣಗೆರೆಯಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಗ್ಯಾಂಗ್‌ನಲ್ಲಿ ಅವಳ ತಂದೆ-ತಾಯಿ ಕೂಡ ಶ್ಯಾಮೀಲಾಗಿರುವ ಅನುಮಾನವಿದೆ. ಕೌಟುಂಬಿಕ ಸಮಸ್ಯೆ ಮತ್ತು ಸಂಘರ್ಷವೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಯುವತಿ ಚೀರಾಡಿದ ವಿಡಿಯೋದಲ್ಲಿ ಬಾಲ್ಯ ವಿವಾಹ ಮಾಡಿರುವ ಕುರಿತು ಹೇಳಿಕೆ ನೀಡಿದ್ದಾರೆ. ನನ್ನನು ಕರೆದುಕೊಂಡು ಹೋಗಿ ಆತನ ಬಳಿ ಬಿಡುತ್ತಾರೆ. ಅವನ ಜೊತೆ ನನಗೆ ಬದುಕಲು ಇಷ್ಟವಿಲ್ಲ. ಅವನ ಜೊತೆ ಕಳಿಸೋ ವಿಚಾರಕ್ಕೆ ನಾನು ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದೆ. ಆತನಿಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ಯುವತಿ ತನ್ನ ಅಳಲು ತೋಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಾಯಿ-ಮಗಳು ಪರಸ್ಪರ ಆಪಾದನೆ ಮಾಡಿಕೊಂಡಿದ್ದಾರೆ. ಕಿಡ್ನಾಪ್ ವೇಳೆ ಸ್ಥಳೀಯರು ಎಂಟ್ರಿ ಕೊಟ್ಟಿದ್ದರಿಂದ ಸದ್ಯ ಯುವತಿ ಬಚಾವ್ ಆಗಿದ್ದಾಳೆ. ಯುವತಿಯ ತಂದೆ- ತಾಯಿಗೂ ಸ್ಥಳೀಯರು ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಸಿನಿಮಾ ಶೈಲಿಯಲ್ಲಿ ಯುವತಿ ಕಿಡ್ನಾಪ್‌ಗೆ ಯತ್ನ; ಹಾಡಹಗಲೇ ಎತ್ತಾಕೊಂಡು ಹೋಗುತ್ತಿರುವಾಗ ಏನಾಯ್ತು?

https://newsfirstlive.com/wp-content/uploads/2023/09/Davangere-Kidnap.jpg

Load More