newsfirstkannada.com

×

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೆ ಅನಾಹುತ.. ದಿಢೀರ್ ಹಳಿಗೆ ಹಾರಿದ ವ್ಯಕ್ತಿ; ಆಮೇಲೇನಾಯ್ತು?

Share :

Published September 17, 2024 at 4:53pm

Update September 17, 2024 at 4:55pm

    ನಮ್ಮ ಮೆಟ್ರೋ ಹಳಿಗೆ ಹಾರಿ ಪ್ರಾಣ ಕಳೆದುಕೊಳ್ಳುವ ಹುಚ್ಚಾಟ

    ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಮಧ್ಯಾಹ್ನವೇ ಅನಾಹುತ

    ಮೆಟ್ರೋ ಹಳಿಯ ಮೇಲೆ ಜಿಗಿದ ಬಿಕಾಂ ಪದವೀಧರ.. ಮುಂದೇನಾಯ್ತು?

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಎಷ್ಟೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡ್ರು ಅನಾಹುತಗಳು ತಪ್ಪಿಲ್ಲ. ಮೆಟ್ರೋ ಹಳಿಗೆ ಹಾರಿ ಪ್ರಾಣ ಕಳೆದುಕೊಳ್ಳುವ ಪ್ರಯತ್ನಗಳು ಮರುಕಳಿಸುತ್ತಲೇ ಇವೆ.

ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಇಂದು ಮತ್ತೊಂದು ಅನಾಹುತ ಸಂಭವಿಸಿದೆ. ಮಧ್ಯಾಹ್ನ 2.13ಕ್ಕೆ ಸರಿಯಾಗಿ ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಹಾರಿದ್ದಾನೆ.

ಇದನ್ನೂ ಓದಿ: ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ! ಅಷ್ಟಕ್ಕೂ ಸಾಯೋ ನಿರ್ಧಾರ ಮಾಡಿದ್ಯಾಕೆ? 

30 ವರ್ಷ ವಯಸ್ಸಿನ ಬಿಹಾರ ಮೂಲದ ಶ್ರೀ ಸಿದ್ದಾರ್ಥ್ ಹಳಿಗೆ ಹಾರಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಮೆಟ್ರೋ ಸಿಬ್ಬಂದಿ ಹಳಿಗೆ ಹಾರಿದ ವ್ಯಕ್ತಿಯನ್ನು ರಕ್ಷಣೆ‌‌ ಮಾಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಮೆಟ್ರೋ ಹಳಿಗೆ ಹಾರಿದ ವ್ಯಕ್ತಿಗೆ ಯಾವುದೇ ಗಾಯಗಳು ಆಗಿಲ್ಲ. ಜ್ಞಾನಭಾರತಿ ನಿಲ್ದಾಣದಲ್ಲಿ ಯುವಕನನ್ನು ವಶಕ್ಕೆ ಪಡೆದ ಜ್ಞಾನಭಾರತಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಆತ್ಮ*ಹತ್ಯೆ ಯತ್ನಕ್ಕೆ ಕಾರಣವೇನು?
ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಆತ್ಮ*ಹತ್ಯೆಗೆ ಯತ್ನಿಸಿದ ಸಿದ್ಧಾರ್ಥ್‌ ಬಿಕಾಂ ಪದವೀಧರ. SP ರಸ್ತೆಯ ಎಲೆಕ್ಟ್ರಾನಿಕ್ ಸರ್ವೀಸ್‌ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಬ್ಯಾಂಕ್‌ನಿಂದ ಮೂರು‌ ಲಕ್ಷ ರೂಪಾಯಿ ಸಾಲ‌ ಮಾಡಿದ್ದ. ಈ ಬ್ಯಾಂಕ್ ಸಾಲದಿಂದ ಬೇಸತ್ತು ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೆ ಅನಾಹುತ.. ದಿಢೀರ್ ಹಳಿಗೆ ಹಾರಿದ ವ್ಯಕ್ತಿ; ಆಮೇಲೇನಾಯ್ತು?

https://newsfirstlive.com/wp-content/uploads/2024/09/namma-metro.jpg

Load More