ಹಸಿರು ಮಾರ್ಗದ ರೈಲು ಸೇವೆ ಎಂದಿನಂತೆ ಇರಲಿದೆ
ಮೆಟ್ರೋ ರೈಲು ಮಾರ್ಗದಲ್ಲಿ ಸುರಕ್ಷತಾ ಆಯುಕ್ತರ ಪರಿಶೀಲನೆ
ಈ ಮಾರ್ಗದ ಪ್ರಯಾಣಿಕರು ಬದಲಿ ವ್ಯವಸ್ಥೆ ನೋಡಿಕೊಳ್ಳಿ
ಬೆಂಗಳೂರು: ನಾಳೆ ಮೆಟ್ರೋ ಎರಡು ಪ್ರಮುಖ ಮಾರ್ಗಗಳಲ್ಲಿ ರೈಲು ಸೇವೆ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಮೆಟ್ರೋ ರೈಲು ಮಾರ್ಗದಲ್ಲಿ ಸುರಕ್ಷತಾ ಆಯುಕ್ತರ ಪರಿಶೀಲನೆ ಹಿನ್ನೆಲೆಯಲ್ಲಿ ಕೃಷ್ಣರಾಜಪುರದಿಂದ ಗರುಡಾಚಾರ್ ಪಾಳ್ಯ ನಡುವಿನ ಮಾರ್ಗಗಳಲ್ಲಿ ಇಡೀ ದಿನ ಮೆಟ್ರೋ ಸೇವೆ ಇರುವುದಿಲ್ಲ. ಬೈಯಪ್ಪನಹಳ್ಳಿ ಮತ್ತು ಇಂದಿರಾನಗರ ನಡುವೆ ಮಧ್ಯಾಹ್ನ 1.30 ರಿಂದ 4.30 ಗಂಟೆಯವರೆಗೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ.
ಆದಾಗ್ಯೂ ವೈಟ್ಫೀಲ್ಡ್ (ಕಾಡುಗೋಡಿ) ಮತ್ತು ಗರುಡಾಚಾರ್ ಪಾಳ್ಯ ಪೂರ್ಣದಿನ ಮೆಟ್ರೋ ಸೇವೆ ಲಭ್ಯ ಇರಲಿದೆ. ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30 ರಿಂದ 4.30 ಗಂಟೆಯವರೆಗೆ ಮೆಟ್ರೋ ಸೇವೆ ಲಭ್ಯ ಇರಲಿದೆ. ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಸೇವೆ ಎಂದಿನಂತೆ ರಾತ್ರಿ 11 ರವರೆಗೆ ಇರಲಿದೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ