newsfirstkannada.com

Breaking News: ಭುಗಿಲೆದ್ದ ಕಾವೇರಿ ನೀರು ಹಂಚಿಕೆ ವಿಚಾರ; ಸರ್ವಪಕ್ಷ ಸಭೆ ಕರೆದ ರಾಜ್ಯ ಸರ್ಕಾರ

Share :

20-08-2023

    ಆಗಸ್ಟ್​ 23ಕ್ಕೆ ಸರ್ವಪಕ್ಷ ಸಭೆ ಕರೆದ ಮುಖ್ಯಮಂತ್ರಿ

    ಈ ಸಭೆಗೆ ಸಂಸದರೂ ಬರ್ತಾರೆ -ಡಿ.ಕೆ.ಶಿವಕುಮಾರ್

    ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ಸಾಧ್ಯತೆ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಆಗಸ್ಟ್ 23 ರಂದು ಅಂದರೆ ಬುಧವಾರ ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಡಿಕೆ ಶಿವಕುಮಾರ್, ಬುಧವಾರ ಕಾವೇರಿ, ಮಹದಾಯಿ ಇಂಟರ್ ಸ್ಟೇಟ್ ವಿಚಾರವಾಗಿ ಆಲ್ ಪಾರ್ಟಿ ಮೀಟಿಂಗ್ ಕರೆಯಲಾಗಿದೆ. ಈ ಸಭೆಗೆ ನಮ್ಮ ಸಂಸದರೂ ಕೂಡ ಬರುತ್ತಾರೆ. ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಾವು ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡ್ತೀವಿ. ಸುಪ್ರೀಂ ಕೊರ್ಟ್​ಗೆ ತಮಿಳುನಾಡು ಅರ್ಜಿಯ ವಿರುದ್ಧ ಅಪೀಲ್ ಹಾಕಲು ಆದೇಶ ಮಾಡಿದ್ದೇವೆ. ಲೀಗಲ್ ವಿಚಾರ ಅಡ್ವೋಕೇಟ್​​ಗೆ ಬಿಟ್ಟಿದ್ದೇವೆ. ಕಾವೇರಿ ನದಿಯಲ್ಲಿ ಒಳ ಹರಿವು ಕಡಿಮೆ ಆಗಿದೆ. ಕೃಷ್ಣಾ ತುಂಬಿದ್ದರೂ ಕೂಡ ಒಳಹರಿವಿನಲ್ಲಿ ತುಂಬಾ ಕಮ್ಮಿ ನೀರು ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಭುಗಿಲೆದ್ದ ಕಾವೇರಿ ನೀರು ಹಂಚಿಕೆ ವಿಚಾರ; ಸರ್ವಪಕ್ಷ ಸಭೆ ಕರೆದ ರಾಜ್ಯ ಸರ್ಕಾರ

https://newsfirstlive.com/wp-content/uploads/2023/08/SIDDARAMIAH-2.jpg

Load More