ಆಗಸ್ಟ್ ತಿಂಗಳ ಕರೆಂಟ್ ಬಿಲ್ 10 ಲಕ್ಷ ರೂಪಾಯಿ!
ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುತ್ತಿದ್ದ ಮಾಲೀಕ
ಒಂದೇ ತಿಂಗಳ ಬಿಲ್ ಕಂಡು ಅಂಗಡಿ ಮಾಲೀಕ ಶಾಕ್
ಚಿಕ್ಕಮಗಳೂರು: ಒಂದು ತಿಂಗಳ ಕರೆಂಟ್ ಬಿಲ್ 10 ಲಕ್ಷ ಬಂದಿರುವ ಘಟನೆ ಕಡೂರು ಪಟ್ಟಣದಲ್ಲಿ ನಡೆದಿದೆ. ಅಲ್ಲಿನ ಮೋಹಿತ್ ಏಜೆನ್ಸಿಯ ಆಗಸ್ಟ್ ತಿಂಗಳ ಕರೆಂಟ್ ಬಿಲ್ 10 ಲಕ್ಷ ಬಂದಿದೆ. ಇದನ್ನು ಕಂಡು ಮಾಲೀಕ ಶಾಕ್ ಆಗಿದ್ದಾರೆ.
ಪ್ರತಿ ತಿಂಗಳು 4000-4500 ಬರುತ್ತಿದ್ದ ಕರೆಂಟ್ ಬಿಲ್ ಬರುತ್ತಿತ್ತು. ಆದರೆ ಆಗಸ್ಟ್ 1 ರಿಂದ ಸೆಪ್ಟೆಂಬರ್ 1ರ ವಿದ್ಯುತ್ ಬಿಲ್ 10 ಲಕ್ಷ ಬಂದಿದೆ. ಆದರೆ ಮೋಹಿತ್ ಏಜೆನ್ಸಿ ಮಾಲೀಕ ಕಮಲ್ ಚಂದ್ ಡಾಗಾ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಿದ್ದರು.
ಇನ್ನು ಆಗಸ್ಟ್ ತಿಂಗಳ ಬಿಲ್ ಕಂಡು ಮೆಸ್ಕಾಂ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರು. ಆದರೆ ದೂರು ನೀಡಿ ನಾಲ್ಕು ದಿನವಾದರೂ ಮೆಸ್ಕಾಂ ಸಿಬ್ಬಂದಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆ ಬಳಿಕ ಮಾಲೀಕ ಕಮಲ್ ಚಂದ್ ಡಾಗಾಗೆ ಮೆಸ್ಕಾಂ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ. 500 ಬಿಲ್ ಬರುವ ಕಡೆ 15 ಸಾವಿರ ತೋರಿಸುತ್ತಿದೆ. ಸಾಫ್ಟ್ ವೇರ್ ಪ್ರಾಬ್ಲಂನಿಂದ ಹೀಗಾಗಿದೆ, ಸರಿಪಡಿಸುತ್ತೇವೆಂದು ಮೆಸ್ಕಾಂ ಸಿಬ್ಬಂದಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ